• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
The Definite Part of Indefinite Life ebook

Do you really think that life is as simple as it seems and there are no tragedies ? Or do you think all the friends we have are forever? What exactly is the difference between attachment and other relationships? Come, walk with me to manifest the difference between the two. From four different lives, beauty of Land of High Passes, beauty of friendship and to Indian marriages, the book will leave a long lasting impression.

₹200   ₹100

ಅರ್ಧ ಬಿಸಿಲು ಅರ್ಧ ಮಳೆ ಇಬುಕ್

ತೃತೀಯ ಅಂಗಿಗಳ ಒಳತೋಟಿ, ಹಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ… ಹೀಗೆ ವಿವಿಧ ವಸ್ತುಗಳ ಎಳೆ ಹಿಡಿದು ನಡೆದಿದ್ದಾರೆ ಸದಾಶಿವ ಸೊರಟೂರು, ಇಲ್ಲನ ಕಥೆಗಳಲ್ಲಿ ಕಲಾತ್ಮಕತೆ ಇದೆ. ಸುಲಅತ ಭಾಷೆ, ಮಾನವೀಯ ಮೌಲ್ಯಗಳ ಐಸಿ ಕಥನಗಾರಿಕೆಯ ಅಂದ ಹೆಚ್ಚಿಸಿವೆ. ವಾಸ್ತವ ಲೋಕದ ತಲ್ಲಣಗಳು ಇಲ್ಲ ಕಥೆಗಳಾಗಿವೆ. ಬಹುತ್ವದ ಪದರು ಪದರುಗಳು ಕಥೆಗಳಾಗಿ ಅನಾವರಣಗೊಳ್ಳುವ ಈ ಬಗೆ ಹೃದ್ಯ.

₹120   ₹60

ಇವರು ಅವರು ದೇವರು ಇಬುಕ್

ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ. ಬದುಕಿನಲ್ಲಿ ಒಡನಾಡಿದ ಲೇಖಕರು, ಪತ್ರಕರ್ತರು, ಬಂಧುಗಳ ವ್ಯಕ್ತಿತ್ವವನ್ನು ತಮ್ಮ ಅನುಭವಕ್ಕೆ ದಕ್ಕಿಸಿಕೊಂಡು ನುಡಿಚಿತ್ರಗಳಾಗಿ ಜೋಗಿ ಅವರು ಕಟ್ಟಿಕೊಟ್ಟಿದ್ದಾರೆ. ಇವರ ಬರಹದಲ್ಲಿ ಭಾವುಕತೆ ಇದೆ, ಹಸನುಗೊಳಿಸುವ ಬದುಕಿದೆ, ಜೀವನದಲ್ಲಿ ಏನೇ ಬಂದರೂ ಜಯಿಸಿ ನಿಲ್ಲುವ ಆತ್ಮಸೈರ್ಯದ ಮಾರ್ಗದರ್ಶಿ ನೋಟವಿದೆ. ಈ ಪುಸ್ತಕ ಓದುತ್ತಾ ಹೋದರೆ ನಮ್ಮ ಬದುಕಿನಲ್ಲಿ ಬಂದ ಒಡನಾಡಿಗಳ ನೆನಪು ಮರುಕಳಿಸದೇ ಇರದು. ಹಾಗಾಗಿ ಓದಲು ನಿಮಗೆ ಇದೊಂದು ಉತ್ತಮ ಪುಸ್ತಕ.

₹200   ₹100

ಒಳ್ಳೆಯ ಬದುಕಿನ ಸೂತ್ರಗಳು ಇಬುಕ್

ಇಂಗ್ಲಿಷ್ ಲೇಖಕ ಕೆಂಟ್ ಎಂ. ಕೀತ್ ಆಂಗ್ಲ ಭಾಷೆಯಲ್ಲಿ ‘ಎನಿವೇ’ ಪುಸ್ತಕ ಬರೆದಿರುವ ಅನುಭವ ಕಥನವಿದು. ಇದರಲ್ಲಿ ಸಮಾಜದ ಸಾಕಷ್ಟು ಸಾಧಕ-ಬಾಧಕಗಳನ್ನು ಕಂಡಿರುವ ಲೇಖಕ ಒಬ್ಬ ವ್ಯಕ್ತಿಯಾಗಿ ನಾವು ಹೇಗೆ ನಡೆದುಕೊಂಡರೆ ಚೆಂದ ಎಂಬುದನ್ನು ಹೇಳುತ್ತಾರೆ. ನಮ್ಮನ್ನು ನಿಂದಿಸುವವರು, ಕೆಟ್ಟದ್ದು ಮಾಡುವವರು, ತೊಂದರೆ ಕೊಡುವವರು ಇದ್ದೇ ಇರುತ್ತಾರೆ. ಆದರೆ ಇವರಿಗೆ ನಾವು ನಮ್ಮ ಒಳ್ಳೆತನವನ್ನೇ ತೋರಿಸುತ್ತಲೇ ಇರಬೇಕು. ನೆಗೆಟಿವ್ ಅಂಶಗಳನ್ನು ಬಿಟ್ಟು ಸದಾ ಪಾಸಿಟಿವ್ ಆಲೋಚನೆಗಳನ್ನು ಮಾಡುತ್ತಾ ನಮ್ಮ ಮಾನಸಿಕ, ದೈಹಿಕ ಸ್ಥಿತಿಯನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬೇಕು ಎಂಬುದೇ ಈ ಪುಸ್ತಕದ ಸಂದೇಶವಾಗಿದೆ. ಒಟ್ಟಾರೆ ನಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸುವಲ್ಲಿ ಈ ಪುಸ್ತಕ

₹150   ₹75

ಕಥಾ ಸಾಗರಿ ಇಬುಕ್

ಇದು ಮಕ್ಕಳ ಪ್ರತಿಯಾಗಿದ್ದರೂ ಹಿರಿಯರು ಕೂಡ ಓದಿ ಆನಂದಿಸುವಂಥದ್ದು. ಪಾಲಕರು ಓದಿ ಮಕ್ಕಳಿಗೂ ಓದಿಸಿ ಟಿವಿ ಕಂಪ್ಯೂಟರ್ ಮೊಬೈಲ್ ಗಳಿಗಿಂತ ಪುಸ್ತಕಗಳನ್ನು ಓದುವುದು ಮಕ್ಕಳ ವಿಕಾಸ ಹಾಗೂ ಆರೋಗ್ಯದ ಹಿತೈದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು ಉತ್ತಮ ಪುಸ್ತಕಗಳನ್ನು ಮಕ್ಕಳಿಂದ ಓದಿಸಿ ಅವರ ವ್ಯಕ್ತಿತ್ವ ವಿಕಸನವಾದರೆ ಈ ಪುಸ್ತಕ ಬರೆದದ್ದು ಸಾರ್ಥಕವಾದಂತೆ.

₹120   ₹60

ಕುಣಿಗಲ್ ಟು ಕಂದಹಾರ್ ಇಬುಕ್

ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ! ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ.

₹260   ₹130

ಕೃಷಿ ಯಾಕೆ ಖುಶಿ? ಇಬುಕ್

ಬಹಳ ಹಿಂದೆ ಪೂರ್ಣಚಂದ್ರ ತೇಜಸ್ವಿಯವರಿಗೊಂದು ಪ್ರಶ್ನೆ ಕೇಳಿದ್ದೆ. “ನೀವು ಮೊದಮೊದಲು ಕಥೆ, ಕಾದಂಬರಿ, ಕಾವ್ಯ, ನಾಟಕ ಇತ್ಯಾದಿಗಳನ್ನು ಬರೆದವರು. ನಿಧಾನವಾಗಿ ಈಗ ನಿಮ್ಮ ಮನಸ್ಥಿತಿ ಬರೀ ಪರಿಸರಕ್ಕಷ್ಟೇ ಸೀಮಿತವಾದಂತಿದೆ. ಏನು ಕಾರಣ?” ಎಂದು. “ಕಾವ್ಯ, ಕಾದಂಬರಿ, ಕಥೆ ಇವೆಲ್ಲ ಮನುಷ್ಯ ತಲೆ, ಸೃಜನಶೀಲತೆಯ ಕೆನೆಪದರ, ತಲೆ ಉಳಿದಾಗ ಮಾತ್ರ ಇವೆಲ್ಲ ಹುಟ್ಟುತ್ತದೆ.

₹140   ₹70

ಕೈ ಹಿಡಿದು ನೀ ನಡೆಸು ತಂದೆ ಇಬುಕ್

ಇದೊಂದು ತಂದೆ, ಮಗನ ಬೆಳವಣಿಗೆಗೆ ಕೊಡುವ ಟಿಪ್ಸ್ ಪುಸ್ತಕವಾಗಿದೆ. ಹೆಚ್ಚೆಂದರೆ ಹತ್ತು ಸಾಲುಗಳಲ್ಲಿ ವಿಶ್ವವಾಣಿ ಸಂಪಾದಕರು, ಲೇಖಕರೂ ಆದ ವಿಶ್ವೇಶ್ವರ ಭಟ್ ಅವರು ಮಗನಿಗೆ ತಂದೆ ನೀಡುವ ಸದ್ವಿಚಾರಗಳ ಆಣಿಮುತ್ತುಗಳಾಗಿವೆ. ಮಗನಿಗೆ ನೇರವಾಗಿ ಹೇಳುವ ಧಾಟಿಯಲ್ಲಿರುವ ಇಲ್ಲಿನ ಬರಹಗಳು ಬಹಳ ಆಪ್ತವಾಗಿವೆ. ‘ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟು’ ಎನ್ನುವ ಹಾಗೆ; ಮಗನ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವ ಅಪರೂಪದ ಪುಸ್ತಕವಾಗಿದೆ. ನಿಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ-ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕಾಗಿ ನೀವು ಓದಲೇಬೇಕಾದ ಪುಸ್ತಕವಿದು. ಮಗನಿಗೆ ಅಪ್ಪ ಯಾವತ್ತೂ ಒಳ್ಳೆಯ ಸ್ನೇಹಿತ ಎಂಬುದು ಈ ಪುಸ್ತಕದ ಸಂದೇಶವಾಗಿದೆ.

₹250   ₹125

ಕ್ಷಯ ಇಬುಕ್

‘ಕ್ಷಯ’ ಕಾದಂಬರಿಯು ಗಾತ್ರದಲ್ಲಿ ಚಿಕ್ಕದಿದ್ದರೂ (…ಪುಟಗಳು) ಅಚ್ಚರಿಪಡುವಷ್ಟು ಸಾಂದ್ರವಾದ ಹಾಗೂ ಅಷ್ಟೇ ವಿಸ್ಮತವಾದ ಜಗತ್ತೊಂದು ಅದರೊಳಗಿದೆ. ಹೊನ್ನಾವರ ಹತ್ತಿರದ, ಕರಾವಳಿಯ ಒಂದು ಚಿಕ್ಕ ಹಳ್ಳಿಯ ಪರಿಸರದಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುವ ಕಾದಂಬರಿಯ ಕಥಾಜಗತ್ತಿನಲ್ಲಿ ಸುಮಾರು 25ಕ್ಕೂ ಹೆಚ್ಚು ಪಾತ್ರಗಳು ಕಾಣಿಸಿಕೊಳ್ಳುತ್ತವೆ. ಆದರೆ ಪಾತ್ರ ಚಿಕ್ಕದಿರಲಿ – ದೊಡ್ಡದಿರಲಿ ಮೂಲ ಕಥಾವಸ್ತುವಿನೊಂದಿಗೆ ನ್ಯಾಯಯುತ ಸಾವಯವ ಸಂಬಂಧವನ್ನು ಹೊಂದಿರುವುದು ಕಾದಂಬರಿಯ ಬಂಧದ ಒಂದು ವಿಶೇಷ.

₹120   ₹60

ಗದಾಯುದ್ಧಂ ಇಬುಕ್

ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ.

₹350   ₹175

ಟ್ರಾಯ್ ಇಬುಕ್

ಗ್ರೀಕ್ ಇತಿಹಾಸದಲ್ಲೇ ಒಮ್ಮೆ ಕಾಲ್ಪನಿಕ… ಒಮ್ಮೆ ಪೌರಾಣಿಕ… ಮತ್ತೊಮ್ಮೆ ಜನಪದ ಕಥೆ ಎನ್ನುವ ವಿವಾದದೊಂದಿಗೇ ಅತ್ಯಂತ ಹೆಸರುವಾಸಿಯಾದ… ಅತ್ಯಂತ ಭೀಕರ ಯುದ್ಧವೊಂದಕ್ಕೆ ನಾಂದಿಯಾದ ಒಂದು ಅಮರ ಪ್ರೇಮಕಥೆ ಈ ” ಟ್ರಾಯ್” .

₹200   ₹100

ತ್ಯಾಗಕ್ಕಿಲ್ಲ ನೂಕುನುಗ್ಗಲು ಇಬುಕ್

ತ್ಯಾಗಕ್ಕಿಲ್ಲ ನೂಕುನುಗ್ಗಲು ಡಾ. ಗವಿಸ್ವಾಮಿ ಅತ್ಯಂತ ಕಡಿಮೆ ಶಬ್ದಗಳಲ್ಲಿ ಗಟ್ಟಿ ವಿಷಯವುಳ್ಳ ಕಥೆಗಳನ್ನು ಕಟ್ಟಿ ಕೊಟ್ಟಿದ್ದಾರೆ ಹೊತ್ತಗೆಯಲ್ಲಿನ ಅನೇಕ ಪುಟ್ಟ ಕಥೆಗಳನ್ನು ಕಾದಂಬರಿಗಳಾಗಿಸಬಹುದು ಎಂದರೆ ಈ ಕಥೆಗಳ ಶಕ್ತಿಯನ್ನು ಊಹಿಸಬಹುದು. ಮಾನವೀಯತೆ ಈ ಕಥೆಗಳಲ್ಲಿನ ಮುಖ್ಯ ಹೂರಣ.

₹140   ₹70

ನಾ ಸೆರೆ ಹಿಡಿದ ಕನ್ಯಾಸ್ತ್ರೀ ಇಬುಕ್

ಮನೆಯ ಎದುರೇ ಇರುವ ಹಸಿರುಕ್ಕುವ ಗದ್ದೆ ಬಯಲು ದಾಟಿ, ತೊರೆಯೊಂದರ ನೀರಿನಲ್ಲಿ ಕಾಲಾಡಿಸಿ, ಸನಿಹದ ಕಾಡಿನಲ್ಲಿ ನಡೆಯತೊಡಗಿದರೆ, ಸಿಹಿ ನೀರಿನ ಬುಗ್ಗೆ, ಹಾರುವ ಓತಿ, ಕನ್ಯಾಸ್ತ್ರೀ ಹೆಸರಿನ ಅಪರೂಪದ ಅಣಬೆ, ಬಕುಳದ ಹೂ, ಚೇಂಪಿ ಹಣ್ಣು – ಇವೆಲ್ಲವೂ ಕಾಣಸಿಗುತ್ತವೆ, ಆಪ್ತವಾಗುತ್ತವೆ. ಇಂತಹ ಅನುಭವಗಳಲ್ಲಿ ನೀವೂ ಭಾಗಿಯಾಗಬೇಕೆ? ಹಾಗಿದ್ದಲ್ಲಿ ಈ ಪುಸ್ತಕ ಓದಿ.

₹200   ₹100

ನಿಮಗೆಷ್ಟು ಹಣ ಬೇಕು ಇಬುಕ್

ಲೇಖಕರು, ಪತ್ರಕರ್ತರು ಆದ ಅನಂತ ಹುದೆಂಗಜೆ ಅವರು ಜನಸಾಮಾನ್ಯರ ನಾಡಿಮಿಡಿತವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಸರಳ ಭಾಷೆ, ಶೈಲಿಯಲ್ಲಿ ಬರೆದಿರುವ ಪುಸ್ತಕವಿದು. ನಮ್ಮ ‘ಕನ್ನಡ ಮಾಣಿಕ್ಯ’ ಪತ್ರಿಕೆ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಲೇಖನಗಳ ಸಂಕಲನವೇ ಇದಾಗಿದೆ. ಇದೂ ಕೂಡ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರದ ವಿಚಾರಗಳ ಕುರಿತ ಪುಸ್ತಕವಾಗಿದೆ. ಈ ಪುಸ್ತಕವನ್ನು ಪ್ರತಿಯೊಬ್ಬರು ಓದಲೇಬೇಕು. ಏಕೆಂದರೆ ಹಣವನ್ನು ಮನುಷ್ಯ ಮಾಡುವುದು ಮುಖ್ಯವಲ್ಲ; ಅದರ ಸದ್ಬಳಕೆ ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಚಿತ್ರಣ ಹಾಗೂ ಜ್ಞಾನ ನಮಗೆ ಈ ಪುಸ್ತಕದಿಂದ ಲಭಿಸುತ್ತದೆ.

₹250   ₹125

ಪತಂಗ ಇಬುಕ್

Nil

₹120   ₹60

ಪ್ರೀತ್ಸು ಇಬುಕ್

ಇದು ಕಡಲ ತೀರದ ಹುಡುಗ ಮತ್ತು ಬಯಲು ಸೀಮೆಯ ಹುಡುಗಿಯರ ನಡುವಿನ ಒಂದು ನವಿರಾದ ಪ್ರೇಮ ಕಥೆ. ಹದಿಹರೆಯವನ್ನು ಆಗಷ್ಟೇ ದಾಟಿರುವ ಆದರೆ ಬದುಕಿನ ಬಗ್ಗೆ ಇನ್ನೂ ಪ್ರೌಢರಾಗಬೇಕಾದ ಯುವ ಮನಸುಗಳ ಪ್ರೇಮಕಥೆ.

₹170   ₹85

ಫಾರೆಸ್ಟರ್ ಪೊನ್ನಪ್ಪ ಇಬುಕ್

ಕೊಡಗಿನ ಆಂತರ್ಯದಲ್ಲಿ ಹುದುಗಿದ್ದ ಅರಣ್ಯಾಧಿಕಾರಿಯೊಬ್ಬರ ಜೀವನಗಾಥೆ. ಮಲೆನಾಡಿನ ಬದಲಾದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಹೆಣ್ಣು, ಹಣದ ಹಿಂದೆ ಹೋಗಿ ಕೊನೆಗೆ ಭಿಕ್ಷೆ ಬೇಡುವಂತಾದವನ ದುರಂತ! ದಾರಿ ತಪ್ಪಿದ ಮಗನಿಗಾಗಿ ಚಡಪಡಿಸುವ ಹಿರಿಜೀವಗಳ ದಾರುಣ ಪರಿಸ್ಥಿತಿ! ಗುಡ್ಡಗಾಡಿನ ವಾಸ್ತವತೆ ಮತ್ತು ಅಂತರಾತ್ಮ. ಮರಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಕೊಡಗಿನ ಅರಣ್ಯಾಧಿಕಾರಿಯೊಬ್ಬರ ರೋಚಕ ಕಥೆ (ಜೀವನಚರಿತ್ರೆ)

₹300   ₹150

ಫೀನಿಕ್ಸ್ ಇಬುಕ್

ಫೀನಿಕ್ಸ್ ಎಂದಾಕ್ಷಣ ಮನಸ್ಸಿನಲ್ಲಿ ಮೂಡುವ ಕಾಲ್ಡನಿಕವೂ ಪೌರಾಣಿಕವೂ ಆದ ಪಕ್ಷಿಯಿದೆಯಲ್ಲಾ ಅದರ ನಿಜ ಸ್ವರೂಪದ ಭಾವವನ್ನು ಜಂಚಿಸುವ ಸಾಮರ್ಥ್ಯವಿರುವ ಪುಸ್ತಕವಿದು. ಬೆಂಕಿಯಲ್ಲಿ ಸುಟ್ಟು ಕರಕಲಾಗುತ್ತಿದ್ದರೂ ತನ್ನ ಬೂದಿಯಿಂದಲೇ ಮರಳಿ ಚೈತನ್ಯವನ್ನು ಪಡೆದು ಉಲ್ಲಾಸದಿಂದ ಬದುಕುವ ಪಕ್ಷಿಯು ಇಲ್ಲಿನ ಅನೇಕ ಪಾತ್ರಗಳನ್ನು, ಅವರ ಬದುಕನ್ನೂ ಪ್ರತಿಜಂಚಿಸುತ್ತದೆ.

₹120   ₹60