ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ.
‘ ಪ್ರೀತಿ ‘ ಇದು ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹ್ರದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದುಯಾವ ಪ್ರತಿಬಂಧಕ್ಕೂ ಒಳ ಪಡುವುದು ಕಷ್ಟ.
“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು. ಅಮೋಘವರ್ಷ” ಕಾದಂಬರಿ ರಾಷ್ಟ್ರಕೂಟರ ಕುರಿತು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕಾರಿಯಾಗಲಿದೆ. ಲೇಖಕರಾದ ಲಕ್ಷ್ಮಣ ಕೌಂಟೆ ಅವರು ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದು ರಾಷ್ಟ್ರಕೂಟರ ಕುರಿತು ಇದುವರೆಗೂ ಪ್ರಕಟವಾದ ಎಲ್ಲ ಕಾದಂಬರಿಗಳಿಗಿಂತಲೂ ಭಿನ್ನವೂ ವಿಶಿಷ್ಠವೂ ಆಗಿದೆ.
ತೃತೀಯ ಅಂಗಿಗಳ ಒಳತೋಟಿ, ಹಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ…
ಈ ಭೂಮಿಯ ಮೇಲೆ ‘ಕಾಮ’ ಯಾರನ್ನೂ ಬಿಟ್ಟಿಲ್ಲ. ಆದರೆ ಎಲ್ಲರೂ ಕಾಮಕ್ಕಾಗಿಯೇ ಬದುಕುವವರಲ್ಲ. ಪ್ರತಿಯೊಬ್ಬರ ಬದುಕಿನಲ್ಲೂ ಕವಲು ದಾರಿಗಳು ಇದ್ದೇ ಇರುತ್ತವೆ.
ಆಕಾಶಬುಟ್ಟಿಯ ಲೇಖಕರಾದ ಪ್ರೊ. ನಟರಾಜ್ ಅರಳಸುರಳಿ, ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟ ಗ್ರಾಮ ಅರಳಸುರಳಿಯ ನಿವಾಸಿ. ಮೂಲತಃ ವ್ಯಂಗ್ಯಚಿತ್ರಗಾರರಾಗಿರುವ ನಟರಾಜ್ ನಾಡಿನಾದ್ಯಂತ ವ್ಯಂಗ್ಯಚಿತ್ರಕಾರರಾಗಿ ಹೆಚ್ಚು ಜನ ಓದುಗರಿಗೆ ಪರಿಚಿತರಾದವರು. ಈವರೆಗೂ ಐದು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ. ಕನ್ನಡದ ಪ್ರಸಿದ್ದ ವಾರ, ಮಾಸ ಪತ್ರಿಕೆಗಳೆಲ್ಲೆಲ್ಲಾ ಇವರ ವ್ಯಂಗ್ಯಚಿತ್ರಗಳು ಪ್ರಕಟವಾಗಿವೆ. ತೀರ್ಥಹಳ್ಳಿಯ ಪ್ರಸಿದ್ದ ಶಿಕ್ಷಣ ಸಂಸ್ಥೆಯಾದ ತುಂಗಾ ಮಹಾವಿದ್ಯಾಲಯದಲ್ಲಿ ಸರಿ ಸುಮಾರು ಮುವತ್ತೈದು ವರ್ಷಗಳ ಕಾಲ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಆಕಾಶಬುಟ್ಟಿ ನಟರಾಜ್ ಅರಳಸುರಳಿಯವರ ಚೊಚ್ಚಲ ಕೃತಿ.
ಕಾದಂಬರಿಯಲ್ಲಿ ಆದರ್ಶ ಶಿಕ್ಷಕನಾಗಿರುವ ತಂದೆಯ ಮೌಲ್ಯಗಳು ಒಂದೆಡೆಯಾದರೆ, ಅದೇ ದಾರಿಯಲ್ಲಿ ನಡೆದುಬಂದ ಮಗನ ವ್ಯಾಪಾರಿಕ ಆಲೋಚನೆಗಳು ಬೇರೆಯಾಗಿರುತ್ತವೆ. ಇಬ್ಬರು ಬದುಕಿನಲ್ಲಿ ಆರಿಸಿಕೊಂಡ ದಾರಿ ಒಂದೇಯಾದರೂ.. ನೋಡುವ ದೃಷ್ಟಿಕೋನಗಳು ಬೇರೆ ಬೇರೆ. ಇದು ಬರಿ ಅಪ್ಪ ಮಗನ ಕತೆ ಅಲ್ಲ, ಎರಡು ತಲೆಮಾರುಗಳ ನಡುವೆ ಬದಲಾದ ಮನಸ್ಥಿತಿಗಳ ಅಂತರದ ಕತೆ.
ಕನ್ನಡ ನಟ, ನಿರ್ದೇಶಕ ಇದೀಗ ತಮ್ಮದೊಂದು ಪುಸ್ತಕ ಪ್ರಕಟಿಸುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಆರ್ಟ್ ಆಫ್ ಸಕ್ಸಸ್ ಎಂಬುದು ಅವರ ಕೃತಿ. ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಲೇ ಬಂದ ನಟ ರಮೇಶ್ ಇಂಥದೊಂದು ಯಶಸ್ಸಿನ ಬಗ್ಗೆ ಹೇಳಲು, ಮಾರ್ಗದರ್ಶಿಯಾಗಲು ತುಂಬ ಅರ್ಹರು. ಅವರ ಈ ಕೃತಿ ಯಶಸ್ಸಿನ ಕಲೆಯ ಬಗ್ಗೆ ಹೇಳುತ್ತದೆ. ರಮೇಶ್ ಅವರದೇ ಆದ ಶೈಲಿಯೊಂದು ಈ ಕೃತಿಯ ಮುಖ್ಯ ಆಕರ್ಷಣೆ.
ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.
ಜೀವ ಕಾರುಣ್ಯದ ಕವಿತೆಗಳನ್ನು ಒಳಗೊಂಡ ಈ ಕೃತಿಯನ್ನು ಓದಲು ಹತ್ತು ಹಲವು ಕಾರಣಗಳಿವೆ. ಬಹುತ್ವದ ಆಶಯವನ್ನು ಕಟ್ಟಿಕೊಡುವ ಸಂಕಲನ ಸಮಕಾಲೀನ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ.
ಪ್ರತಿ ನಲ್ವತ್ತು ಸೆಕೆಂಡಿಗೆ ಜಗತ್ತಿನಲ್ಲಿ ಒಂದು ಆತ್ಮಹತ್ಯೆ. ಹದಿಹರೆಯದವರು ಹಾಗೂ ಯುವಜನತೆ ಸಾವಿಗೆ ಒಂದು ಪ್ರಮುಖ ಕಾರಣ ಆತ್ಮಹತ್ಯೆ. ಕುಟುಂಬ ಹಾಗೂ ಸಮಾಜದ ಮೇಲೆ ಆತ್ಮಹತ್ಯೆ ಬೀರುವ ಮಾನಸಿಕ, ಸಾಮಾಜಿಕ, ಆರ್ಥಿಕ ಪರಿಣಾಮ ಅನೂಹ್ಯ ಅಗಣಿತ. ಭಾರತದಲ್ಲಿ ವರ್ಷಂಪ್ರತಿ ಒಂದು ಲಕ್ಷಕ್ಕೂ ಮೀರಿ ಜನ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಂದು ಆತ್ಮಹತ್ಯೆ ಇಪ್ಪತ್ತು ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ. ಅಂದರೆ ಇಪ್ಪತ್ತು ಲಕ್ಷ ಮಂದಿ ಅಪರಾಧಿ ಪ್ರಜ್ಞೆ. ಪಾಪಪ್ರಜ್ಞೆಯಿಂದ ನರಳುತ್ತಾರೆ. ಪರೀಕ್ಷೆಯ ಒತ್ತಡ, ಪ್ರೇಮಭಂಗ, ಪಾಲಕರ ಮಿತಿಮೀರಿದ ಮಹತ್ವಾಕಾಂಕ್ಷೆ. ಅತಿಯಾದ ನಿರೀಕ್ಷೆಗಳು, ಅಸಾಮರ್ಥ್ಯ, ಅದಕ್ಷತೆ, ಒಂಟಿತನ, ತನ್ನನ್ನು ಯಾರೂ ಪ್ರೀತಿಸುತ್ತಿಲ್ಲ ಎಂಬ ತೀವ್ರವಾದ ಕೊರಗು, ಆರ್ಥಿಕ ಸಂಕಷ್ಟಗಳು, ತಿರಸ್ಕಾರ, ತಾತ್ಸಾರ, ಅಪಮಾನ ಮೊದಲಾದ ಕಾರಣಗಳಿಂದ ಆತ್ಮಹತ್ಯೆಗಳಾಗುತ್ತಿವೆ. ಮಹಡಿ ಏರಿ ಹಾರುವುದು, ಅಣೆಕಟ್ಟೆಯಿಂದ ಧುಮುಕುವುದು. ರೈಲಿಗೆ ತಲೆ ಕೊಡುವುದು ಯಾವ ಸಮಸ್ಯೆಗೂ ಪರಿಹಾರವಲ್ಲ. ಸತ್ತ ಮಾತ್ರಕ್ಕೆ ಸಮಸ್ಯೆಗಳು ಮುಗಿಯುವುದಿಲ್ಲ. ತಾಳ್ಮೆಯಿಂದ ಯೋಚಿಸಿದರೆ. ಸುತ್ತಲೂ ನೋಡಿದರೆ ಸಹಾಯಹಸ್ತ ಗೋಚರಿಸುತ್ತದೆ. ಕಣ್ಣೀರು ಒರೆಸುವ ಬೆರಳು ಕಾಣುತ್ತದೆ. ಸಾಂತ್ವನದ ಕೊರಳು ಕೇಳುತ್ತದೆ. ಸಹಾಯ ಬಯಸಿ, ಸಹಾಯ ಮಾಡಿ ಮುಂದಾಗುವ ಅನಾಹುತ ತಪ್ಪಿಸಿ: ಜೀವ ಉಳಿಸಿ ಎಂಬುದೇ ಈ ಕೃತಿಯ ಸಾರ. ನಾಡಿನ ಖ್ಯಾತ ಮನೋವಿಜ್ಞಾನ ಹಾಗೂ ಶಿಕ್ಷಣ ಲೇಖಕ ಡಾ. ಮಹಾಬಲೇಶ್ವರ ರಾವ್ ಈ ಕೃತಿಯ ಕರ್ತೃ.
nil
ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ. ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ. ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್ ಥಿಲ್ಲರ್ ಅಲ್ಲ. ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ. ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡಂಚಿನ/ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದಂಬರಿ ಎಂಬ ಕುಲಾವಿ
ಹಗ್ಗದ ಮೇಲೆ ನಡೆಯುವಂತಹ ಏಕಾಗ್ರತೆಯಿಂದ ಗಮ್ಯದತ್ತ ಸಾಗುವ ಇಲ್ಲಿನ ಕಥೆಗಳಲ್ಲಿ ನಗರ ಜೀವನದ ಸಂಕೀರ್ಣತೆಯೂ ಇದೆ: ಹಳ್ಳಿಗಳ ಮುಗ್ಧ ಬದುಕಿನ ಸರಳತೆಯೂ ಇದೆ. ಅಜಿತ್ ಆರಿಸಿಕೊಂಡಿರುವ ಕಥಾವಸ್ತುಗಳು ಯಾವುದೇ ಒಂದು ಪ್ರದೇಶಕ್ಕೆ, ವರ್ಗಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರನ್ನೂ ಒಳಗಿಳಿಸಿಕೊಂಡು ಪಾತ್ರಗಳೊಂದಿಗೆ ಬೆಸೆಯುತ್ತವೆ.
ಇಂಗ್ಲಿಷ್ ಲೇಖಕ ಕೆಂಟ್ ಎಂ. ಕೀತ್ ಆಂಗ್ಲ ಭಾಷೆಯಲ್ಲಿ ‘ಎನಿವೇ’ ಪುಸ್ತಕ ಬರೆದಿರುವ ಅನುಭವ ಕಥನವಿದು.
ಎಪ್ಪತ್ತುಎಪ್ಪತೈದು ವರುಷಗಳ ಹಿಂದೆ ವಿಧವೆಯೊಬ್ಬಳು, ಮರು ಮದುವೆಗೆ ಅವಕಾಶವಿಲ್ಲದೆ, ಮತ್ತೆ ಬದುಕು ಕಟ್ಟಿ ಕೊಳ್ಳಲು ಪ್ರಯತ್ನಿಸಿ ನರಕ ಯಾತನೆ ಅನುಭವಿಸಿದ ಒಬ್ಬ ವಿಧವೆಯ ಕಥೆಯಿತು
ಇದೊಂದು ಮಹತ್ವದ ಕೃತಿ. ಕಗ್ಗಗಳ ಕುರಿತಾಗಿ ವ್ಯಾಖ್ಯಾನ ಹೊಸದೇನಲ್ಲ. ಆದರೆ ಆ ಕಗ್ಗದ ಸಾರವನ್ನು ಒಂದು ಪುಟ್ಟ ಕಥೆಯ ಮೂಲಕ ಹೇಳುವ ಪ್ರಯತ್ನ ಮಾತ್ರ ಹೊಚ್ಚಹೊಸದು. ವಿ. ಗೋಪುಕುಮಾರ್ ಅವರು ನ್ಯಾನೋ ಕಥಾಪ್ರಕಾರದ ನಿಷ್ಠರು ಮತ್ತು ಶ್ರೇಷ್ಠರೂ ಕೂಡ. ನಾನವರ ಕಥೆಗಳನ್ನು ಒಂದೇ ಉಸಿರಿನಲ್ಲಿ ಓದಿದ್ದೆ. ಹಾಗೆ ಓದಿಸಿಕೊಳ್ಳುವ ಗುಣ ಅವರ ಕಥೆಗಳಿಗಿದೆ.
ಕಥಾಸಂಕ್ರಾಂತಿ2024 ಕಥಾಸಂಕಲನದಲ್ಲಿ ಮೂರು ಬಹುಮಾನಿತ ಕಥೆಗಳು ಹಾಗೂ ಏಳು ಮೆಚ್ಚುಗೆ ಪಡೆದ ಕಥೆಗಳು ಇವೆ. ಇಲ್ಲಿನ ಪ್ರತಿ ಕಥೆಯೂ ವಿಶಿಷ್ಟ, ವಿಭಿನ್ನ, ಪ್ರಯೋಗಶೀಲತೆ, ಭಾಷಾ ಬಳಕೆ, ಕಥಾವಸ್ತುವಿನ ಆಯ್ಕೆಯಲ್ಲಿ ತೋರಿರುವ ವೈವಿಧ್ಯತೆ, ಕಥಾವಿನ್ಯಾಸ, ನಿರೂಪಣಾ ಕುಶಲತೆ ಹೀಗೆ ಎಲ್ಲದರಲ್ಲಿಯೂ ಈ ಕಥೆಗಳು ತಟ್ಟನೆ ಗಮನ ಸೆಳೆಯುತ್ತವೆ. ಸಮಕಾಲೀನ ವಿಷಯ, ಗ್ರಾಮೀಣ ಸಮಾಜದ ಬದುಕಿನಲ್ಲಿ ಇಣುಕುವ ಚಲನಶೀಲತೆ, ಮನುಷ್ಯರ ಸಂಕಟಗಳು, ಸಂದಿಗ್ಧತೆಗೆ ಸಿಲುಕಿಸುವ ಪ್ರೇಮ, ಬದುಕಿನ ಹೋರಾಟದಲ್ಲಿ ಗೆಲುವು ಸಾಧಿಸಲು ಕಂಡುಕೊಳ್ಳುವ ಹೊಸ ದಾರಿಗಳು, ಮುಗ್ಧ ಬಾಲಕಿಯರು ಎದುರಿಸಬೇಕಾದ ತಲ್ಲಣಗಳು, ಭಾಷೆಯೊಂದಿಗೆ ಬದುಕುವ ವ್ಯಕ್ತಿ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಬಗೆ... ಈ ಕಥೆಗಳಲ್ಲಿ ಅಡಕವಾಗಿವೆ. ಕಥಾಸ್ಪರ್ಧೆಗೆ ಬಂದ ನೂರಾರು ಕಥೆಗಳನ್ನು ಹಲವು ವಿಧದಲ್ಲಿ ಜರಡಿ ಹಿಡಿದು ಅಂತಿಮ ಸುತ್ತಿನಲ್ಲಿ ಆಯ್ದ ಐವತ್ತು ಕಥೆಗಳಲ್ಲಿ ಕೊನೆಗುಳಿದ ಹತ್ತು ಕಥೆಗಳು ಕನ್ನಡದ ಲೇಖಕರು ಕಥಾಪ್ರಕಾರದಲ್ಲಿ ತುಳಿಯುತ್ತಿರುವ ಹೊಸ ದಾರಿಗಳನ್ನು, ಹೊಸ ಲೇಖಕರ ಮನೋಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ.
ಇದು ಮಕ್ಕಳ ಪ್ರತಿಯಾಗಿದ್ದರೂ ಹಿರಿಯರು ಕೂಡ ಓದಿ ಆನಂದಿಸುವಂಥದ್ದು. ಪಾಲಕರು ಓದಿ ಮಕ್ಕಳಿಗೂ ಓದಿಸಿ ಟಿವಿ ಕಂಪ್ಯೂಟರ್ ಮೊಬೈಲ್ ಗಳಿಗಿಂತ ಪುಸ್ತಕಗಳನ್ನು ಓದುವುದು ಮಕ್ಕಳ ವಿಕಾಸ ಹಾಗೂ ಆರೋಗ್ಯದ ಹಿತೈದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು ಉತ್ತಮ ಪುಸ್ತಕಗಳನ್ನು ಮಕ್ಕಳಿಂದ ಓದಿಸಿ ಅವರ ವ್ಯಕ್ತಿತ್ವ ವಿಕಸನವಾದರೆ ಈ ಪುಸ್ತಕ ಬರೆದದ್ದು ಸಾರ್ಥಕವಾದಂತೆ
'ಕಂದಕ' ಈ ಕೃತಿಯ ಲೇಖಕರಾದ ಭಾರದ್ವಾಜ ಕೆ. ಆನಂದತೀರ್ಥ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ನಿವಾಸಿ, ಕೆ. ಆನಂದತೀರ್ಥ ಮತ್ತು ಸುಮಿತ್ರಮ್ಮ ದಂಪತಿಯ ಮಗ. ಎಂ.ಎ. ಪದವೀಧರ ಭಾರದ್ವಾಜರಿಗೆ ಕೃಷಿ, ಪತ್ರಿಕೋದ್ಯಮ, ಬರವಣಿಗೆ, ಪ್ರವಾಸ ಎಲ್ಲವೂ ಹವ್ಯಾಸ. ಇವರ ಅವನಿ'ಗೆ (ಕವನ ಸಂಕಲನ), ನೆನಪುಗಳು ಮಾಸುವ ಮುನ್ನ (ಎಂ.ಸಿ. ನಾಣಯ್ಯ ಅವರ ಜೀವನ ಚರಿತ್ರೆಯ ನಿರೂಪಣೆ) ಕಾನನದ ಅಂಚಿನಲ್ಲಿ (ಕಾದಂಬರಿ), ಕಳೆದುಕೊಂಡವರು (ಕಾದಂಬರಿ), ಕಣಿವೆಯ ಆಳದಿಂದ (ಅಂಕಣ ಬರಹಗಳ ಸಂಗ್ರಹ), ಕನವರಿಕೆಗಳು (ಲಲಿತ ಪ್ರಬಂಧಗಳ ಸಂಗ್ರಹ), ಕಂದಿಲು (ಕೆಲವು ನಿವೃತ್ತ ಶಿಕ್ಷಕರ ಸಂಕ್ಷಿಪ್ತ ಜೀವನ ಚರಿತ್ರೆ), ಕೌತುಕವಲ್ಲದ ಕ್ಷಣಗಳು (ಲಲಿತ ಪ್ರಬಂಧಗಳ ಸಂಗ್ರಹ), ನೀರು ನುಗ್ಗಿದ ಮೇಲೆ (ಪ್ರಬಂಧಗಳ ಸಂಗ್ರಹ) ಹಾಗೂ ಕರೋನಯ್ಯ ಬಂದವ್ನಿಗೆ (ಕಾದಂಬರಿ), ಸಂದಾಯಿ(ಕಾದಂಬರಿ), ಕ್ರಮಣ (ಕಾದಂಬರಿ) ಈಗಾಗಲೇ ಪ್ರಕಟವಾಗಿದೆ. -ಎನ್. ನಾಗರಾಜ್ ರಾವ್ ರಂಗಕರ್ಮಿ ಬಸವನಗುಡಿ, ಬೆಂಗಳೂರು.
ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?
ಕರ್ಣನಿಗೆ ಪೂರ್ವ ಜನ್ಮದಲ್ಲಿ ಸಹಸ್ರ ಕವಚಗಳಿದ್ದುವೆಂದೂ, ಅದನ್ನು ನರ ಮತ್ತು ನಾರಾಯಣರೆಂಬ ಋಷಿಗಳು ಯುದ್ಧದಲ್ಲಿ ಕತ್ತರಿಸುತ್ತ ಬಂದರೆಂಬುದು ಕಥೆ. ಅವುಗಳಲ್ಲಿ ಒಂದು ಕವಚ ಉಳಿದು ಬಂತು. ಅದನ್ನು ಕತ್ತರಿಸುವುದಕ್ಕಾಗಿ ಕೃಷ್ಣಾರ್ಜುನರು ಈ ಜನ್ಮದಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲ, ಜೀವನೊಬ್ಬನಿಗೆ ಅನೇಕ ಕವಚಗಳು, ಕರ್ಣನಂತೆ. ಅವುಗಳನ್ನು ಕಳೆದುಕೊಳ್ಳುತ್ತ, ಕಳೆದುಕೊಳ್ಳುತ್ತ ಸಾಗುವುದೇ ಅವನ ಪಾಡು. ಆ ಕವಚಗಳು ಲೋಹದ ಕವಚಗಳಲ್ಲ. ಕವಚ ಸಾಂಕೇತಿಕ ಅಷ್ಟೇ. ಕರ್ಣನ ಬದುಕೂ ಈ ಕವಚಗಳನ್ನು ಕಳೆದುಕೊಳ್ಳುವ ಪ್ರಕ್ರಿಯೆ. ಅದನ್ನೇ ಕಾದಂಬರಿಯೂ ಧ್ವನಿಸುತ್ತದೆ..
ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ. ಹೊಸ ಭಾಷೆ, ವಿಶಿಷ್ಟ ವಸ್ತು-ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಯುಗದ ಪಲ್ಲಟಗಳು, ಜಾಗತೀಕರಣ ಸಂದರ್ಭದಲ್ಲಿನ ಮನುಷ್ಯ ಸಂಬಂಧಗಳು, ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾರರ ಕತೆಗಳಲ್ಲಿ ವಿಮರ್ಶಕರು ಗುರುತಿಸಿರುವ ಕೆಲವು ವಿಶೇಷತೆಗಳು. ಪ್ರಸ್ತುತ ‘ಕಾಗೆ ಮೇಷ್ಟ್ರು’ ಎಂಬ ಕಥಾ ಸಂಕಲನದಲ್ಲಿ ಹುಟ್ಟು ಸಾವು ಎನ್ನುವ ಎರಡು ತುರೀಯ ಸತ್ಯಗಳ ನಡುವೆ, ಮನುಷ್ಯನ ನೆಮ್ಮದಿಯ ಹುಡುಕಾಟದಲ್ಲಿ ವೇದ್ಯವಾಗುವ ಅಸಂಖ್ಯ ಅಣು ಸತ್ಯಗಳ ಮೇಳವಿದೆ. ಬದುಕಿನ ಅಸಂಗತ ಕ್ಷಣಗಳ ಆಳದಲ್ಲಿ ಹುದುಗಿರುವ ದರ್ಶನವು ಕತೆಗಾರನ ಕಾವ್ಯ ಕುಸುರಿಯಲ್ಲಿ ಅನಾವರಣಗೊಳ್ಳುವ ಸೋಜಿಗವನ್ನು ಓದಿನ ಮಾಯೆಯಲ್ಲೇ ಅನುಭವಿಸಬೇಕು. ಇಂಥ ಅನುಭವ ಸುಖದ ಸೆಳೆತ ಈ ಕತೆಗಳನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ಓದುವ ನಶೆ ನಿಮಗೇರಲಿ…
ಇದುವರೆಗೂ ಯಾರೂ ಮುಟ್ಟದ ಕ್ಷೇತ್ರವೊಂದರ ಅನುಭವ ಕಥನ ಓದಲು ಸಿದ್ಧರಾಗಿ! ಆಫ್ಘಾನಿಸ್ತಾನವೆಂಬ ಕೌತುಕ ರಾಷ್ಟ್ರದ, ಹೊರಜಗತ್ತಿಗೆ ನಿಲುಕದ ಅನೂಹ್ಯ ಲೋಕವೊಂದರ ಅನಾವರಣ.
Showing 1 to 30 of 144 results