• Welcome to Our store    Veeraloka Books
  • Call Us : +91 7022122121 / +91 8861212172
07 September 2024

ವ್ಯಕ್ತಿ ಒಂದು ಶಕ್ತಿ

ಯುವಜನತೆಯನ್ನು ಯುವಶಕ್ತಿ ಎಂತಲೂ ಕರೆಯುತ್ತಾರೆ. ವಿದ್ಯಾರ್ಥಿ ಜೀವನವನ್ನು ಬದುಕಿನ ಸುವರ್ಣ ಯುಗ ಎನ್ನಬಹುದಾಗಿದೆ. ಜೀವನದ ಈ ಹಂತದಲ್ಲಿ ಶ್ರಮ, ಸಾಮರ್ಥ್ಯ ಬಳಸಿಕೊಂಡು ಉದ್ಯೋಗ ಸಂಪಾದನೆ ಮಾಡಬಹುದಾಗಿದೆ. ಬಿತ್ತಿದಂತೆ ಬೆಳೆ ಪಡೆಯುವ ಕಾಲ ಯೌವನ. ನಮ್ಮ ಪರಿಶ್ರಮ, ಬುದ್ದಿಮತ್ತೆ ಬಳಸಿಕೊಂಡು ಮುನ್ನುಗ್ಗಿ ಹೋಗುವ ಕಾಲವಿದು. ಆದರೆ ಇದೇ ಕಾಲಘಟ್ಟ ಆಕರ್ಷಣೆಯ ಹಿಂದೆ ಓಡೋಗುವ ಮನಸಿನಿಂದಲೂ ಹಾಳಾಗಬಹುದು.

07 September 2024

ಗುರುವಂದನೆ

ಗುರು ಬ್ರಹ್ಮಾ ಗುರುರ್ವಿಷ್ಣು ಗುರುದೇವೋ ಮಹೇಶ್ವರಃ .ಗುರುಃ ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇನಮಃಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿವರ್ಣ ಮಾತ್ರಃ ಕಲಿಸಿದಾತಃ ಗುರುಗು ಗುರುತರವಾದ ಜವಾಬ್ದಾರಿಯರು -ರುವಾರಿಯೇ -ಗುರುಹರ ಮುನಿದರೆ ಗುರು ಕಾಯ್ವನುಗುರು ಮುನಿದರೆ ಕಾಯ್ವರಿಲ್ಲಾ

10 September 2024

ಚಿತ್ತ ಸೆಳೆಯುವ "ಇತ್ತ ಹಾಯಲಿ ಚಿತ್ತ" ಕಥಾ ಸಂಕಲನ

"ಎಲ್ಲ ಹತ್ತು ಕಥೆಗಳ ನಿರೂಪಣೆ ಅತ್ಯಂತ ಭಾವುಕವಾಗಿ ಅಭಿವ್ಯಕ್ತಿಗೊಂಡಿದ್ದರೂ ವೈಚಾರಿಕ ಹೊಳಹೂ ಇರುವುದು ಈ ಸಂಕಲನದ ವೈಶಿಷ್ಟ್ಯ. ಒಮ್ಮೆ ಓದಲು ಆರಂಭಿಸಿದರೆ ಮತ್ತೆ ಓದಬೇಕೆಂಬ ಹಂಬಲ ಹುಟ್ಟಿಸುವ ಕಥೆಗಳಾಗಿದ್ದು ಒಂದನ್ನು ಬಿಟ್ಟರೆ ಎಲ್ಲವೂ ಹೊಸ ಆಶಯ ಹುಟ್ಟಿಸುವ ಕಥೆಗಳೇ ಆಗಿವೆ ಭಾಷೆಯೂ ಆಪ್ತವಾಗಿದೆ. ಈ ಎಲ್ಲ ಕಥೆಗಳು ಕುಮಟಾದ ಬಳಿಯ ಕತಗಾಲ, ಅಂತ್ರವಳ್ಳಿ, ಆನೆಗುಂದಿ ಮತ್ತು ಹುಬ್ಬಳ್ಳಿಯ ಸುತ್ತಲೇ ರೂಪಿತವಾಗಿರುವುದು ವಿಶೇಷ " ಎಂದು ಅರುಣ್ ಕುಮಾರ್ ಹಬ್ಬು ಅವರು "ಇತ್ತ ಹಾಯಲಿ ಚಿತ್ತ" ಕೃತಿಯ ವಿಮರ್ಶೆಯಲ್ಲಿ ಬರೆದಿದ್ದಾರೆ.

10 September 2024

ಮನುಷ್ಯ ಅದೆಷ್ಟೇ ಬೆಳೆದರೂ ಕಾಲದೆದುರು ಅದೆಷ್ಟು ಕುಬ್ಜ

ಮನಸ್ಸು ಕಾಣುವ ಕಲ್ಪನೆಗೆ ಮಿತಿಯಿಲ್ಲ. ಆದರೆ ನಡೆದ ಸತ್ಯ ಘಟನೆಗೆ ವಾಸ್ತವದ ಪರಿಧಿಯಿದೆ. ಆದ್ದರಿಂದ ನಾನ್-ಫಿಕ್ಷನ್ ಕೃತಿಗಳನ್ನು ಓದುವಾಗ 'ಇದು ನಿಜಕ್ಕೂ ಸಾಧ್ಯವೇ? ಇದು ಅತಿಶಯೋಕ್ತಿಯಲ್ಲವೇ?' ಎಂದೆಲ್ಲಾ ಮನಸ್ಸು ತರ್ಕಿಸುವುದು ಕಡಿಮೆ. ಇಂತಹ ಅದ್ಭುತ ಅನುಭವಕಥನಗಳ ಸಾಲಿಗೆ ಸೇರುವ ಮತ್ತೊಂದು ಕೃತಿ ಮಂಜುನಾಥ ಕುಣಿಗಲ್ ಅವರ 'ಕುಣಿಗಲ್ ಟು ಕಂದಹಾರ್'. ಮಹಾ ಪಲಾಯನ, ಅದ್ಭುತ ಯಾನ, ಪ್ಯಾಪಿಲಾನ್, ಪರ್ವತದಲ್ಲಿ ಪವಾಡ.., ಮೊದಲಾದ ಹಲವು ರೋಮಾಂಚಕ ಕಥನಗಳನ್ನು ಕನ್ನಡದ ಸಾಹಿತಿಗಳು ಅನ್ಯದೇಶದ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಆದರೆ ಮೂಲತಃ ಕನ್ನಡದ ವ್ಯಕ್ತಿಯೊಬ್ಬರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾವೇ ಸ್ವತಃ ಕಂಡುಂಡ ರಣರೋಚಕ ಅನುಭವಗಳನ್ನು ಒಂದು ಅನುಭವ ಕಥನದ ರೂಪದಲ್ಲಿ ಹೊರತಂದ ದೃಷ್ಟಾಂತಗಳು ಬಹು ವಿರಳ. ಆ ನಿಟ್ಟಿನಲ್ಲಿ ಇದೊಂದು ಅಪರೂಪದ ಪುಸ್ತಕ.