ವೀರಲೋಕ ಪುಸ್ತಕ ಸಂತೆ ಕಳೆದ ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ, ಇದೀಗ 2026ರ ಜೂನ್ ತಿಂಗಳಲ್ಲಿ ನಡೆಯಲಿರುವ ಐದನೇ ಆವೃತ್ತಿಯ ತಯಾರಿಯಲ್ಲಿದೆ. ಮೂರು ದಿನ ನಡೆಯುವ ಈ ಸಂತೆಯ "ಓಲೇ ವಿಭಾಗ'ಕ್ಕೆ ಲೇಖಕರನ್ನು ಆಹ್ವಾನಿಸಲಾಗಿದೆ
ಕನ್ನಡ ಸಾಹಿತ್ಯದಲ್ಲಿ ಕೃಷಿ ಮಾಡಿರುವ ಯಾವುದೇ ಲೇಖಕರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿ ಆಯ್ಕೆಯಾದ ಲೇಖಕರಿಗೆ ಪುಸ್ತಕ ಮಳಿಗೆಯಲ್ಲಿ ತಮ್ಮದೇ ಪುಸ್ತಕಗಳನ್ನು ಮಾರಾಟ ಮಾಡಲು ಉಚಿತವಾಗಿ ಅನುವುಮಾಡಿಕೊಡಲಾಗುತ್ತದೆ.