| Category: | ವೀರಲೋಕ ಪುಸ್ತಕಗಳು |
| Sub Category: | ಕವನಗಳು |
| Author: | ಶ್ರೀದೇವಿ ಕೆರೆಮನೆ | Shridevi Keremane |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 400 |
| ISBN | 9789348 355836 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಗಜಲ್ ಕಟ್ಟುವುದು ಬಲು ಸೂಕ್ಷ್ಮವಾದ ಸೃಜನಾತ್ಮಕ ಕೆಲಸ. ಅನೇಕರು ಗಜಲ್ ಬರೆಯುವಾಗ ಆಶಯಕ್ಕಿಂತ ಸೌಂದರ್ಯ ಮತ್ತು ಸೌಂದರ್ಯಕ್ಕಿಂತ ಆಶಯಕ್ಕೆ ಹೆಚ್ಚು ಒತ್ತು ಕೊಡುವುದು ಕಾಣುತ್ತೇವೆ. ಶ್ರೀದೇವಿಯವರು ಎರಡೂ ಬಗೆಯ ವಿಧಾನವನ್ನು ಸಮಚಿತ್ತದಿಂದ ನಿಭಾಯಿಸಿದ್ದು ಅವರು ಈ ಕ್ಷೇತ್ರದಲ್ಲಿ ನಡೆದಾಡಿ ದಕ್ಕಿಸಿಕೊಂಡ ವಿಸ್ತಾರ ವಿವೇಚನೆಯ ಫಲವಾಗಿದೆ.
ಆಧುನಿಕ ಜೀವನ ಶೈಲಿ ಮನುಷ್ಯನನ್ನು ಯಾಂತ್ರಿಕತೆಗೆ ತಳ್ಳಿ ಭಾವನೆಗಳಿಗೆ ಬೆಲೆಯಿಲ್ಲದಂತೆ ರೂಪಿಸಿರುವುದನ್ನು ಕಾಣುತ್ತೇವೆ. 'ಪ್ರೀತಿಯೆಂದರೆ ಸುಡು ಎದೆಯ ಕಾವಿನಲಿ ಭರವಸೆಯ ಜೀವದುಸಿರಿಗೆ 'ಮರುಕಪಡುವ ತನು' ಈ ಮೌಲ್ಯವನರಿಯದ ಯುವ ಪೀಳಿಗೆಗೆ ಇದರ ಸವಿಯನುಣಿಸುತ್ತಾ... ಅಮರ ಪ್ರೀಮಿಯೊಬ್ಬ ಕೊನೆಯವರೆಗೂ ತನ್ನ ಪ್ರಿಯತಮೆಗಾಗಿ ತಪದಂತೆ ಪರಿತಪಿಸುತ್ತಾನೆಂಬ ನಿಜದ ಅರಿವು ಮೂಡಿಸುತ್ತಾರೆ. ಆದರೆ ಕವಿ? ಈ ಕವಿಯು ಪ್ರೀತಿಯೊಳಗಿನ ಕಪಟತನವನ್ನು ಅಮರತ್ವಕ್ಕೇರಿಸಿ ಹುಸಿ ಭರವಸೆ ಬಿತ್ತಬಹುದು. ಇದನ್ನ ವ್ಯಂಗ್ಯಕ್ತಿಯ ಮೂಲಕ ಸಾದರ ಪಡಿಸುವ ಪ್ರಯತ್ನ ಕವಯತ್ರಿ ಮಾಡುತ್ತಾ...
'ಲೌಕಿಕ ಪ್ರೀತಿ ಅಧ್ಯಾತ್ಮಕತೆಗೆ ತಿರುಗುವ ಮುನ್ನ ಒಮ್ಮೆ ಮಾತಾಡು' ಎಂದು ಚಿನ್ನವಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಮಾತು ಮಾಣಿಕ್ಯವೂ ಅಮೃತವೂ ಹೌದು.' ಎಲ್ಲಾ ಸಮಸ್ಯೆಗಳ ಕೇಡುಗಳಿಗೆ ಈ ಮಾತು ಉತ್ತರವೂ ಕೂಡ ಹಾಗಾಗಿ ತನ್ನಿನಿಯನಿಗೆ ಮಾತಿಗೆ ಆಹ್ವಾನಿಸಿ ಮನದ ಅನುಮಾನಕ್ಕೆ ಉತ್ತರ ಬಯಸುವ ಪರಿಯನ್ನು ದಾಖಲಿಸಿದ್ದಾರೆ.
ಕಣದಿಟ್ಟ ಕಲ್ಲೊಂದು ಶಿಕ್ಷೆಯ ಉಳಿಪೆಟ್ಟಿಗೆ ಆಕರ್ಷಕ ರೂಪತಾಳಿ ಬೆಡಗ ಭಂಗಿಯಂತೆ ಹೇಗೆ ಕಂಗೊಳಿಸುತ್ತದೆಯೋ ಹಾಗೆ ಇವರ ಗಜಲ್ ಗಳು ಈ ತೆರನಾದ ಗರಿಮಾ ಹೊತ್ತಿವೆ.
ಈ ರೀತಿ ಬರೆದು ಬೆರಗುಗೊಳಿಸುವ ಚಾಕಚಕ್ಯತೆಗೆ ದೊಡ್ಡ ಮಟ್ಟದ ರಿಯಾಜ್ ಬೇಕಾಗುತ್ತದೆ. ಕರುಣಾ ರಸದ ಪಾತ್ರಗಳಾದ ಶೃಂಗಾರ, ಕರುಣ, ಭಕ್ತಿ ಅನುಭಾವ ಈ ದರ್ಶನಧಾರೆಗಳ ಒಳ ಪ್ರವೇಶಿಕೆಗೆ ಅವರು ಅವಕಾಶ ಕೊಟ್ಟಿದ್ದಲ್ಲದೇ ಅದರಾಚೆಗಿನ ವಿಸ್ತಾರ ಅರಿವಿನ ಲೋಕವನ್ನು ಪ್ರವೇಶಿಸಿ ಧ್ಯಾನಕ್ಕೆ ಮೌನವಾದ ಬಯಲ ಪ್ರವೇಶ ಮಾಡಿದ್ದಾರೆ.
ಶ್ರೀದೇವಿ ಕೆರೆಮನೆ | Shridevi Keremane |
0 average based on 0 reviews.