| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಕೆ ಕಾರ್ತಿಕ್ ಆಚಾರ್ಯ | K Karthik Acharya |
| Publisher: | ಸಂಸ್ಕಾರ, ಪಬ್ಲಿಕೇಷನ್ಸ್ | Samskara Publicaions |
| Language: | Kannada |
| Number of pages : | 112 |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಯುವ ಕವಿ ಮಿತ್ರ, ಲೇಖಕ, ಚಿಂತಕ ಕಾರ್ತಿಕ್ ಆಚಾರ್ ಅವರ ಕೃತಿಗಳನ್ನು ಓದುವುದಕ್ಕಿಂತ ಮುನ್ನ ನಾನು ಒಂದು ಕಾರ್ಯಕ್ರಮದಲ್ಲಿ ಅವರ ಮಾತುಗಳನ್ನು ಕೇಳಿಸಿಕೊಂಡವನು. ವಯಸ್ಸು ಕಿರಿದಾಗಿದ್ದರೂ, ಆಧ್ಯಾತ್ಮ, ಮನೋವಿಜ್ಞಾನ, ಧರ್ಮಪ್ರಜ್ಞೆಯಿಂದ ದ ಕೂಡಿದ ಅವರ ಮಾತುಗಳು ಅಚ್ಚರಿಯ ಜತೆಗೆ ಮೆಚ್ಚುಗೆ ಮೂಡುವಂತೆ ಮಾಡಿದ್ದವು. ಮನೋವಿಜ್ಞಾನ.
ಈಗ ಬರುತ್ತಿರುವ 40 ಕ್ಕೂ ಹೆಚ್ಚು ಲೇಖನಗಳ ಸಂಗ್ರಹದಲ್ಲೂ ಅವರ ಮನೋವಿಸ್ತಾರದ ವ್ಯಾಪ್ತಿಯನ್ನು ಗಮನಿಸಬಹುದು. ಸೋಷಿಯಲ್ ಮೀಡಿಯಾದ ಈ ಸಮಯದಲ್ಲಿ ಯುವಜನತೆ ಟ್ರೆಂಡಿಂಗ್ ವಿಷಯಗಳನ್ನು ಬೆನ್ನತ್ತಿ ಅರೆಬರೆ ಜ್ಞಾನಿಗಳಾಗುತ್ತಿರುವ (ಅಜ್ಞಾನ) ಈ ಸಮಯದಲ್ಲಿ ಕಾರ್ತಿಕ್ ಅವರಂತ ಯುವ ಪ್ರತಿಭೆಗಳು, ಆದೆಲ್ಲವನ್ನೂ ಬದಿಗಿಟ್ಟು ಅಪಾರವಾದ ಅಧ್ಯಯನ ಕೈಗೊಂಡು, ಧರ್ಮ, ಆರ್ಥಿಕತೆ, ಮಾನವ ಸಂಬಂಧಗಳ ಒಳಸುಳಿಗಳ ಆಂತರ್ಯಕ್ಕೆ ಇಳಿದು ನಮ್ಮೆದುರು ಪ್ರಸ್ತುತಪಡಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಸಂಗತಿ.
ಕನ್ನಡ ಭಾಷೆಯ ಮೇಲಿನ ಅವರ ಪ್ರೀತಿ, ಬರವಣಿಗೆಯಲ್ಲಿನ ಅವರ ಪ್ರಾವೀಣ್ಯದ ಮೂಲಕ ಹೊರಹೊಮ್ಮಿದ್ದಾರೆ. ಆ ಕೃತಿಗಳ ಆಂತರ್ಯದಲ್ಲಿ ಆಧ್ಯಾತ್ಮದ ಹೂರಣವೂ ಅನಾವರಣಗೊಳ್ಳುತ್ತದೆ. ಒಂದು ಪುಸ್ತಕ ಬರೆಯುವುದು ಎಂದರೆ ಅದು ಕೇವಲ ಕಾಗದದ ಮೇಲೆ ಅಕ್ಷರಗಳನ್ನು ಇಳಿಸುವ ಕಾರ್ಯವಲ್ಲ, ಅದು ಲೇಖಕನ ಆಂತರಿಕ ಧ್ವನಿಗೆ ಶಾಶ್ವತ ರೂಪ ನೀಡುವ ಬಹಿರಂಗ ಕ್ರಿಯೆ. ನಿಸ್ಸಂಶಯವಾಗಿಯೂ ಈ ಕೃತಿಯ ಮೂಲಕ ಕಾರ್ತಿಕ್ ಅವರು ತಮ್ಮ ಮನೋಲೋಕಕ್ಕೆ ಮೂರ್ತರೂಪ ಕೊಟ್ಟಿದ್ದಾರೆ.
ಲೇಖನಮಾಲೆಗಳ ಈ ಸಂಗ್ರಹ ಓದುಗರ ಮನೆಯಲ್ಲಿ, ಮನದಲ್ಲಿ ಭದ್ರ ಸ್ಥಾನ ಪಡೆಯಲಿ ಎಂಬ ಆಶಾಭಾವನೆಯ ಜತೆಗೆ, ಪಡೆದೇ ಪಡೆಯುತ್ತದೆ ಎಂಬ ನಂಬಿಕೆಯೂ ನನಗಿದೆ. ಶುಭವಾಗಲಿ ಅಭಿನಂದನೆಗಳು.
- ಶ್ರೀ ರಾಘವೇಂದ್ರ ಆಚಾರ್ಯ ಖ್ಯಾತ ಹಾಸ್ಯಗಾರರು ಬೆಂಗಳೂರು
ಕೆ ಕಾರ್ತಿಕ್ ಆಚಾರ್ಯ | K Karthik Acharya |
0 average based on 0 reviews.