| Category: | ಕನ್ನಡ |
| Sub Category: | ಕಾದಂಬರಿ |
| Author: | ಇಲಿಯಾಸ್ ಪಟೇಲ್ | iliyaas patel |
| Publisher: | |
| Language: | Kannada |
| Number of pages : | 104 |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಅಕ್ಷರಗಳ ನರಕದಿಂದ ಅನುರಾಗದ ಅರಮನೆಯವರೆಗೆ...
ಪತ್ರಿಕಾ ವೃತ್ತಿಯ ಬೆಂಕಿಯ ಕೆಂಡಗಳ ಮೇಲೆ ನಡೆಯುತ್ತಲೇ, ಅಂತರಂಗದ ಮೃದು ಭಾವನೆಗಳನ್ನು ಕಲಾತ್ಮಕವಾಗಿ ಹಿಡಿದಿಟ್ಟಿರುವ ಕೃತಿ ಇದು. ಲೇಖಕ ಇಲಿಯಾಸ್ ಪಟೇಲ್ ಬಳಗಾನೂರು ಅವರು ಸುದ್ದಿಗಳ ಆಚೆಗಿನ ಜೀವನವನ್ನು ಇಲ್ಲಿ ಅತ್ಯಂತ ನೈಜವಾಗಿ ಕಟ್ಟಿಕೊಟ್ಟಿದ್ದಾರೆ.
ಗ್ರಾಮೀಣ ಭಾಗದ ಬಾಲಕನೊಬ್ಬ ಅಭಾವದ ನಡುವೆಯೂ ಕಂಡ ಕನಸುಗಳು, ಭಾಷೆಯ ತೊಡಕಿನಿಂದ ಎದುರಾದ ಅಪಮಾನಗಳು ಮತ್ತು ತಂದೆಯ ನಿಶ್ಯಬ್ದದೊಳಗಿನ ನೋವು ಈ ಕಥೆಯ ಜೀವಾಳ. ದಿನಪತ್ರಿಕೆಯ ವರದಿಗಾರನಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಹಂಬಲವಿದ್ದರೂ, ಸ್ವಂತದ ಮನೆಯ ಆರ್ಥಿಕ ಮುಗ್ಗಟ್ಟು ಮತ್ತು ಜವಾಬ್ದಾರಿಗಳ ಸುಳಿಯಲ್ಲಿ ಸಿಲುಕುವ ಯುವಕನ ಸಂಘರ್ಷ ಇಲ್ಲಿ ಹಸಿಬಿಸಿಯಾಗಿ ಮೂಡಿಬಂದಿದೆ.
ಲೇಖನಿಯ ಬದಲು ಬಳಪ ಹಿಡಿದು ಶಾಲಾ ಅಂಗಳಕ್ಕೆ ಕಾಲಿಟ್ಟಾಗ ಸಿಗುವ ಹೊಸ ಒಡನಾಟ, ಕೇವಲ ಸ್ನೇಹವಾಗಿ ಉಳಿಯದೆ ಆಳವಾದ ಅನುಬಂಧವಾಗಿ ಮಾರ್ಪಡುವ ಪರಿ ಅನನ್ಯ ಆದರೆ ಕಾಲದ ಕ್ರೂರ ಆಟ ಮತ್ತು ಜಾಗತಿಕ ಸಂಕಷ್ಟವೊಂದು ಸುಂದರ ಪಯಣಕ್ಕೆ ಅನಿರೀಕ್ಷಿತ ತಿರುವು ನೀಡಿದಾಗ ಉಂಟಾಗುವ ವೇದನೆ ಓದುಗರ ಮನಸ್ಸನ್ನು ಕವಿಯುವಂತೆ ಮಾಡುತ್ತದೆ.
ಸೋಲನ್ನು ಸಾವನ್ನಾಗಿಸಿಕೊಳ್ಳದೆ, ಅದನ್ನು ಬದುಕಿನ ಪಾಠವನ್ನಾಗಿಸಿಕೊಳ್ಳುವ ಅದ್ಭುತ ಧೈರ್ಯ ಈ ಪುಸ್ತಕದ ಪ್ರತಿ ಪುಟದಲ್ಲೂ ಇದೆ. ಕಳೆದುಕೊಂಡ ಪ್ರೇಮಕ್ಕಾಗಿ ಹಲುಬದೆ, ಆ ನೆನಪುಗಳನ್ನೇ ಪ್ರೇರಣೆಯಾಗಿಸಿಕೊಂಡು ಮುಂದೆ ಸಾಗುವ ನಾಯಕನ ವ್ಯಕ್ತಿತ್ವವು ಇಂದಿನ ಪೀಳಿಗೆಗೆ ದಾರಿದೀಪ. ಇದು ಕೇವಲ ಒಂದು ಪ್ರೇಮಕಥೆಯಲ್ಲ, ಭರವಸೆಯ ಬೆಳಕಾಗಿ ಮೊಡಿ ಬಂದಿದೆ...
ಇಲಿಯಾಸ್ ಪಟೇಲ್ | iliyaas patel |
0 average based on 0 reviews.