| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ನರೇಂದ್ರ ರೈ ದೇರ್ಲ | Narendra Rai Derla |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 978-93-48355-39-3 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಯಾವುದು ವಿಷ, ಯಾವುದನ್ನು ಬೇಯಿಸಬೇಕು, ಯಾವುದನ್ನು ಹಸಿ ತಿನ್ನಬೇಕು... ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕಿದವರು ವಿಶ್ವವಿದ್ಯಾಲಯದ ವಿಜ್ಞಾನಿಗಳಲ್ಲ. ಕಾಡು ಗುಡ್ಡಗಳನ್ನೇ ಪ್ರಯೋಗಾಲಯವನ್ನಾಗಿಸಿದ್ದ ಈ ನೆಲದ ನಾಟಿ ರೈತರು. ಪ್ರತಿಯೊಂದು ಹಂಗಾಮಿನಲ್ಲೂ ಅತ್ಯುತ್ತಮ ತೆನೆಗಳನ್ನು ಬೇರ್ಪಡಿಸಿ, ಅವುಗಳ ಬೀಜವನ್ನು ಮುಂದಿನ ವರ್ಷಕ್ಕೆ ಉಳಿಸಿಕೊಂಡು, ತಲೆಮಾರಿನಿಂದ ತಲೆಮಾರಿಗೆ ಹಸ್ತಾಂತರಿಸುತ್ತಾ ಬಂದದ್ದು ನಮ್ಮ ಕೃಷಿ ಸಂಸ್ಕೃತಿಯ ಅಸಾಧಾರಣ ಸಾಧನೆ.
ಒಡಿಶಾದ ಪುರಿಯ ಜಗನ್ನಾಥ ದೇವಾಲಯದಲ್ಲಿ ಇಂದಿಗೂ ದಿನಕ್ಕೊಂದು ಸಾಂಪ್ರದಾಯಿಕ ಅಕ್ಕಿ ತಳಿಗಳಿಂದ ನೈವೇದ್ಯ ಸಲ್ಲಿಸುವ ಪರಂಪರೆ ಉಳಿದಿರುವುದು ನಮ್ಮ ಪೂರ್ವಜರು ತಳಿಗಳಿಗೆ ನೀಡಿದ್ದ ಗೌರವದ ಸಂಕೇತ. ಬೀಜ ಅವರಿಗೆ ಕೇವಲ ಕೃಷಿ ಸಾಧನವಾಗಿರಲಿಲ್ಲ; ಅದು ಪವಿತ್ರ ಪರಂಪರೆಯಾಗಿತ್ತು.
ಒಂದು ತಳಿಯನ್ನು ಕಳೆದುಕೊಂಡರೆ ಅದನ್ನು ಕಾರ್ಖಾನೆಯಲ್ಲಿ ಮತ್ತೆ ತಯಾರಿಸಲು ಸಾಧ್ಯವಿಲ್ಲ. ಅದನ್ನು ಪ್ರತಿವರ್ಷ ಮಣ್ಣಿಗಿಟ್ಟು ಬೆಳೆಸಿ, ಉಳಿಸಿ, ಹಂಚಿಕೊಂಡಾಗ ಮಾತ್ರ ಅದು ಬದುಕಿರುತ್ತದೆ. ಬೀಜವನ್ನು ಸಂಗ್ರಹಾಲಯದಲ್ಲಿ ಇಟ್ಟರೆ ಇತಿಹಾಸ ಉಳಿಯಬಹುದು; ಆದರೆ ಕೃಷಿ ಉಳಿಯುವುದಿಲ್ಲ. ಕೃಷಿಯ ಬದುಕು ರೈತನ ಕೈಯಲ್ಲಿರುವ ಬೀಜದಲ್ಲಿದೆ.
ನರೇಂದ್ರ ರೈ ದೇರ್ಲ | Narendra Rai Derla |
0 average based on 0 reviews.