ಭಾಷಾಂತರ: ಸೈದ್ಧಾಂತಿಕ ಹಾಗೂ ಆನ್ವಯಿಕ ನೆಲೆಗಳು ಸಿ.ಎನ್. ರಾಮಚಂದ್ರನ್
| Category: | ಕನ್ನಡ |
| Sub Category: | ವಿಮರ್ಶೆ |
| Author: | |
| Publisher: | Manohara Grantha Mala |
| Language: | Kannada |
| Number of pages : | |
| Publication Year: | 2026 |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇಂಗ್ಲಿಷ್ ಭಾಷೆ-ಸಾಹಿತ್ಯಗಳಲ್ಲಿ ಪಿಎಚ್.ಡಿ. ಮತ್ತು ನ್ಯಾಯಶಾಸ್ತ್ರದಲ್ಲಿ ಎಲ್.ಎಲ್.ಬಿ. ಪದವಿಗಳನ್ನು ಪಡೆದಿರುವ ಡಾ.ಸಿ.ಎನ್.ರಾಮಚಂದ್ರನ್ ಭಾರತ ಹಾಗೂ ಹೊರದೇಶಗಳಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ವಿಭಾಗ ಮುಖ್ಯಸ್ಥರಾಗಿ ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನಮಾಡಿರುವ ಇವರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರೌಢ ಪ್ರಬಂಧಗಳನ್ನು ಮಂಡಿಸಿದ್ದಾರೆ. ವಿಮರ್ಶಕರಾಗಿ ಹೊಸ ಚಿಂತನೆಗಳಿಂದ ಹೊಸ ಆಯಾಮ ನಿರ್ಮಿಸಿದವರು. ಇಂಗ್ಲೀಷಿನಲ್ಲಿ ಒಂಬತ್ತು ಮತ್ತು ಕನ್ನಡದಲ್ಲಿ ಹದಿನಾರು ಕೃತಿಗಳನ್ನು ರಚಿಸಿದ್ದಾರೆ. 'ಸಾಹಿತ್ಯ ವಿಮರ್ಶೆ', 'ತೌಲನಿಕ ಸಾಹಿತ್ಯ', 'ಹೊಸ ಮಡಿಯ ಮೇಲೆ ಚದುರಂಗ', 'ಗಿರೀಶ ಕಾರ್ನಾಡರ ಚಾರಿತ್ರಿಕ ನಾಟಕಗಳು', 'ಆಖ್ಯಾನ-ವ್ಯಾಖ್ಯಾನ' ಇತ್ಯಾದಿ ವಿಮರ್ಶನ ಗ್ರಂಥಗಳು. 'ಶೋಧ' ಕಾದಂಬರಿ, 'ಕಸಾಂದ್ರ' ಕಥಾಸಂಕಲನ, ಉತ್ತಮ ಅನುವಾದಕರೂ ಹೌದು. ಮಹಾಕಾವ್ಯ 'ಮಲೆ ಮಾದೇಶ್ವರ', ಮೊಯಿಲಿಯವರ ಕಾದಂಬರಿ 'ತೆಂಬರೆ', ಡಾ.ಚಂದ್ರಶೇಖರ ಕಂಬಾರರ ನಾಟಕ 'ಶಿವರಾತ್ರಿ'ಯನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಎದುರಿಟಿಸ್ ಫೆಲೋಷಿಪ್, ಬಿರ್ಲಾ ಫೆಲೋಷಿಪ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಇನಾಮದಾರ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ನುಡಿಸಿರಿ ಪ್ರಶಸ್ತಿ, ಜಿ.ಎಸ್.ಎಸ್.ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಇವರಿಗೆ ದೊರಕಿದೆ. ಇತ್ತೀಚೆಗೆ ಇವರ 'ಆಖ್ಯಾನ-ವ್ಯಾಖ್ಯಾನ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ.
0 average based on 0 reviews.