| Category: | ಕನ್ನಡ |
| Sub Category: | ಅಂಕಣ ಬರಹಗಳು |
| Author: | K V narayana | ಕೆ ವಿ ನಾರಾಯಣ |
| Publisher: | Jeerunde Books |
| Language: | Kannada |
| Number of pages : | 210 |
| Publication Year: | 2026 |
| Weight | 150 |
| ISBN | 978-8198314680 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕನ್ನಡವನ್ನು ತಮ್ಮ ಮೊದಲ ನುಡಿಯನ್ನಾಗಿ ಹೊಂದಿರುವ ಎಲ್ಲರಲ್ಲೂ ಆ ನುಡಿಯ ರಚನೆಯು ಅಂತಸ್ಥವಾಗಿರುತ್ತದೆ. ಈ ಅಂತಸ್ಥ ರಚನೆಯು ಎಲ್ಲ ಕಾಲದ ಕನ್ನಡಿಗರಿಗೂ ಸಮಾನವಾದುದು.ಎಳವೆಯಿಂದಲೇ ಈ ನುಡಿಯ ಕಸುವು ನಮ್ಮಲ್ಲಿ ನೆಲೆಗೊಂಡಿರುತ್ತದೆ. ಆ ರಚನೆಯ ತಿಳಿವು ನಾವು ದಿನವೂ ಕನ್ನಡ ನುಡಿಯ ಕಟ್ಟಲು ನಮಗೆ ನೆರವಾಗುತ್ತಿದೆ. ಈ ರಚನೆ ಎಂಬುದು ಅಚ್ಚುಕಟ್ಟಾದ ಕಟ್ಟಳೆಗಳಿಂದ ಕೂಡಿದ ವ್ಯವಸ್ಥೆಯಾಗಿರುತ್ತದೆ. ಈ ವ್ಯವಸ್ಥೆ ಹೇಗಿರುವುದು ಎಂಬುದನ್ನು ಕಂಡುಕೊಳ್ಳಲು ನಡೆಸಿರುವ ಪ್ರಯತ್ನವೇ ಈ ಪುಸ್ತಕದ ಬರಹಗಳಲ್ಲಿದೆ.
ಸಾಮಾನ್ಯವಾಗಿ ಶಾಲೆಗಳಲ್ಲಿ ನಮಗೆ ಕಲಿಸಲಾದ ಕನ್ನಡ ನುಡಿ ರಚನೆಯು ನುಡಿಯ ಹೊರ ಆಕಾರವನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ಅಲ್ಲದೆ ನಮಗೆ ಕಲಿಸಿರುವ ಕನ್ನಡದ ರಚನೆಯ ನೆಲೆಗಳು ಕನ್ನಡದ ಬರಹ ರೂಪಕ್ಕೆ ಹೆಚ್ಚು ಹೊಂದುತ್ತವೆಯೇ ಹೊರತು ಕನ್ನಡದ ಆಡು ಮಾತಿನ ರೂಪಗಳ ಹಲವು ಚಾಚುಗಳನ್ನು ಅದು ಪರಿಗಣಿಸುವುದಿಲ್ಲ. ಅದೇನೇ ಇರಲಿ ನಮಗೆ ಈಗ ಪರಿಚಿತವಿರುವ ಕನ್ನಡ ನುಡಿಯ ಹೊರ ಆಕಾರಕ್ಕೆ ಕಾರಣವಾಗುವ ಅಂತಸ್ಥ ರೂಪವನ್ನು ಅರಿತುಕೊಳ್ಳುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕಳೆದ ಮುಕ್ಕಾಲು ಶತಮಾನದಿಂದ ನೆಲೆಗೊಂಡಿರುವ ನುಡಿಯರಿಮೆಯ ಹೊಸ ತಾತ್ವಿಕ ಚೌಕಟ್ಟನ್ನು ಇಲ್ಲಿನ ಬರಹಗಳು ಅನುಸರಿಸಿವೆ.
K V narayana | ಕೆ ವಿ ನಾರಾಯಣ |
0 average based on 0 reviews.