| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಡಾ. ಟಿ. ಆರ್. ಅನಂತರಾಮು | DR T R Anantharamu |
| Publisher: | ಕದಂಬ ಪ್ರಕಾಶನ | Kadamba Prakashana |
| Language: | Kannada |
| Number of pages : | |
| Publication Year: | 2026 |
| Weight | 150 |
| ISBN | 9789395 129572 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬದುಕಿಗೆ ಪ್ರೇರಣೆ ಸಿಗುವುದು ವ್ಯಕ್ತಿಯ ಘನ ಗಾಂಭೀರ್ಯ ನಡೆಯಿಂದಲೋ ಅಥವಾ ಅವರ ಸಾಧನೆಯಿಂದಲೋ? ಬಹುಶಃ ಈ ಎರಡೂ ಹೌದು. ವ್ಯಕ್ತಿತ್ವಕ್ಕೆ ಮೆರುಗು ಕೊಡುವುದು ಸಾಧನೆ. ಸಮಾಜಕ್ಕೆ ಬೇಗ ಕಣ್ಣಿಗೆ ಕಾಣುವುದು ಕೂಡ ಇದೇ. ಕಳೆದ 50 ವರ್ಷಗಳಲ್ಲಿ ಕನ್ನಡ ನಾಡಿನ ಬೇರೆ ಬೇರೆ ಪತ್ರಿಕೆಗಳಿಗೆ ಬರೆದ. ಮುಖ್ಯವಾಗಿ ವಿಜ್ಞಾನ ಕುರಿತೇ ನಾನು ಬರೆದ ಲೇಖನಗಳೇ ಹೆಚ್ಚು. ಪ್ರಾಸಂಗಿಕವಾಗಿ ವಿಜ್ಞಾನ ಸಾಧಕರ ಚಿತ್ರಣಗಳನ್ನು ಬರೆಯಬೇಕಾದ ಅನೇಕ ಸಂದರ್ಭಗಳು ನನಗೆ ಒದಗಿವೆ. ಮುಖ್ಯವಾಗಿ ಕನ್ನಡ ನಾಡಿನ ಪತ್ರಿಕೆಗಳು ತಮಗೆ ಅವಶ್ಯಕವೆಂದಾಗ, ನನ್ನಿಂದ ವ್ಯಕ್ತಿ ಚಿತ್ರಣಗಳನ್ನು ಬರೆಸಿವೆ. ಹೆಚ್ಚಿನ ಪಾಲು. ವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ವಿಜ್ಞಾನ ಸಂವಹನೆಯಲ್ಲಿ ತೊಡಗಿರುವವರನ್ನು ನಾನು ಚಿತ್ರಿಸಿರುವುದೇ ಹೆಚ್ಚು. ತಮ್ಮ ಬದುಕನ್ನು ವಿಜ್ಞಾನಕ್ಕಾಗಿ ಮೀಸಲಿಟ್ಟ ಹಿರಿಯ ತಲೆಮಾರಿನ ಲೇಖಕರನ್ನು ಕುರಿತು ಬರೆಯುವಾಗ ನನ್ನ ಮನಸ್ಸು ಪ್ರಪುಲ್ಲಗೊಂಡಿದೆ: ಸ್ಪೂರ್ತಿಗೊಂಡಿದೆ. ಭಾಷೆಯಲ್ಲಿ ಅವರ ಕಟ್ಟಿಕೊಡುವಾಗ ಸಂಭ್ರಮಿಸಿದ್ದೇನೆ. ಬದುಕನ್ನು
ವಿಜ್ಞಾನಕ್ಕಿಂತಲೂ ಒಂದು ಹೆಜ್ಜೆ ಮುಂದೆ ಎನ್ನಬಹುದಾದದ್ದು ಆ ಕ್ಷೇತ್ರದ ಸಾಧಕರ ಬಗ್ಗೆ ಸಮಾಜಕ್ಕಿರುವ ವಿಶಿಷ್ಟ ಕುತೂಹಲ. ಅದನ್ನು ಮನಸ್ಸಿನಲ್ಲಟ್ಟುಕೊಂಡು ಈ ಕೃತಿಯಲ್ಲಿ ಕೆಲವು ಪ್ರಮುಖರೆಂದು ಅನ್ನಿಸಿದವರ ಬಗ್ಗೆ ವ್ಯಕ್ತಿ ಚಿತ್ರಣವನ್ನು ರೇಖಿಸಲು ಪ್ರಯತ್ನಿಸಿದ್ದೇನೆ.
ಡಾ. ಟಿ. ಆರ್. ಅನಂತರಾಮು
ಡಾ. ಟಿ. ಆರ್. ಅನಂತರಾಮು | DR T R Anantharamu |
0 average based on 0 reviews.