Delivery between 2-6 Days
No returns accepted. Please refer our full policy
Your payments are 100% secure
ನಾಟಕವನ್ನು ಓದಿದವರಿಗೆ ಒಂದು ಸಂಗತಿ ಲಕ್ಷಕ್ಕೆ ಬಂದಿರಬಹುದು.
ಇದರಲ್ಲಿ ಯಾವ ಪಾತ್ರಕ್ಕೂ ಅಂಕಿತನಾಮಧೇಯವಿಲ್ಲ: ಅದಕ್ಕಾಗಿ ಪಾತ್ರಗಳ ಪಟ್ಟಿಯನ್ನೂ ಕೊಟ್ಟಿಲ್ಲ.
ನಮ್ಮ ಜೀವನದೆದುರು ಕನ್ನಡಿಯನ್ನು ಹಿಡಿದು ಅದರ ಗುಣ-ದೋಷಗಳನ್ನು ಸೂಕ್ಷ್ಮವಾಗಿ ನೋಡುವ ಧೈರ್ಯ, ಪ್ರಾಮಾಣಿಕತೆ ಇಲ್ಲದಿದ್ದಾಗ ಆ ಗುಣಗಳನ್ನುಳ್ಳ ಲೇಖಕನಿಗೆ ಇದೇ ಸರಿಯಾದ ದಾರಿ ಎಂದು ಹೇಳಬಹುದಲ್ಲ?
ಪ್ರಜಾಪ್ರಭುತ್ವ, ಸರಿಸಮಾನತೆ, ಜಾತ್ಯತೀತತೆ ಮುಂತಾದ ಹೊಸ ಶಬ್ದಗಳನ್ನು ಬಾಯಿಯಿಂದ ಉಚ್ಚರಿಸುವಾಗ ಬುದ್ದಿಗೆ ಅವುಗಳ ಅರ್ಧ ಹೊಳೆಯದಿದ್ದಲ್ಲ. ಹೃದಯದಲ್ಲಿ ಅವುಗಳ ಪ್ರತಿಧ್ವನಿ ಮೂಡದಿದ್ದಲ್ಲಿ ಆ ಸಂಸ್ಕೃತಿ ಮತ್ತು ಆ ಸಾಹಿತ್ಯ ಇವು ಅತ್ಯವಂಚಕ ಮತ್ತು ಪರವಂಚಕ ಘಾತಕ ಶಕ್ತಿಗಳಾಗಬಹುದಲ್ಲವೇ?
ಕತ್ತಲೆ, ಬೆಳಕು ಈ ಪರಸ್ಪರ ವಿರೋಧ ಜೀವನದಲ್ಲಿದೆ;ಈ ನಾಟಕದಲ್ಲಿ ಚಿತ್ರಿಸಲಾಗಿದೆ. ಪ್ರಯೋಗಿಸುವ ರಂಗಭೂಮಿಯಲ್ಲಿ ಹಿನ್ನಲೆಯ ಸನ್ನಿವೇಶವಾಗಿದೆ
ಈ ಪಾತ್ರ ಇಂತಹ ವ್ಯಕ್ತಿ, ಇಂತಹ ಸಮಾಜದವ ಎಂದು ತಿಳಿದುಕೊಳ್ಳುವ 'ಬುದ್ಧಿವಂತಿಕೆ'ಯನ್ನು ಯಾರಾದರೂ ತೋರಿಸಬಲ್ಲವರಾದರೆ ಈ ನಾಟಕ ಸಾರ್ಥಕವಾಗಲಿಲ್ಲ ಎನ್ನುತ್ತೇನೆ.
ವಿಮರ್ಶಕರ ದೃಷ್ಟಿಯಿಂದ ಇನ್ನೊಂದು ಮಹತ್ವದ ಸಂಗತಿ ಎಂದರೆ ಈ ನಾಟಕವನ್ನು ಶುಕ್ರವಾರ ತಾ. 23.11959ರ ಸಾಯಂಕಾಲ ಏಳೂವರೆ ಗಂಟೆಗೆ ಬರೆಯಲು ಪ್ರಾರಂಭಿಸಿದೆ. ಮೊದಲ ಅಂಕವನ್ನು ಮುಗಿಸಿದೆ:
ಮರುದಿನ, ಎರಡನೆಯ ಅಂಕವನ್ನು ಮುಗಿಸಿದೆ; ಮೂರನೆಯ ದಿನ, ಎಂದರೆ ಭಾನುವಾರ ತಾ. 25.1.1959ರ ಸಾಯಂಕಾಲ ಕೊನೆಯ ಅಂಕವನ್ನು ಬರೆದು ರಾತ್ರಿ 9.45 ಗಂಟೆಗೆ ಮುಗಿಸಿದೆ.
ಇದಿಷ್ಟು ನಾಟಕಕ್ಕೆ ಹಿನ್ನೆಲೆ.
0 average based on 0 reviews.