ಶ್ರೀರಂಗ ಕೇಳು ಜನಮೇಜಯ (ಮೂರಂಕಿನ ನಾಟಕ)
| Category: | ಕನ್ನಡ |
| Sub Category: | ನಾಟಕ |
| Author: | |
| Publisher: | Manohara Grantha Mala |
| Language: | Kannada |
| Number of pages : | |
| Publication Year: | |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಶ್ರೀರಂಗರ 'ಕೇಳು ಜನಮೇಜಯ' ಹೇಳುವದು ಕಥೆಯನ್ನಲ್ಲ. ಕಥೆಯನ್ನು ಬಿಟ್ಟು ನಾಟಕವನ್ನು ಉಳಿಸಿಕೊಂಡಿತು. ಈ ನಾಟಕದ ಮಟ್ಟಿಗೆ ಹೇಳುವುದಾದರೆ ಇದು ಶ್ರೀರಂಗರ ನಾಟ್ಯಪ್ರತಿಭೆಯ ಅದ್ಭುತ ನಿಜ. ಶ್ರೀರಂಗರು ಅಖಿಲ ಭಾರತದ ನಾಟಕರಾದದ್ದು ಈ ನಾಟಕದ ಮೂಲಕವಾಗಿ ವಸಂತ ಮತ್ತು ಉತ್ತರಕುಮಾರರು ಹಿಂದೆ ಸರಿದು ಕತ್ತಲೆ ಬೆಳಕು ನಾಟಕದ ನಾಟಕಕಾರ ರಂಗಭೂಮಿಯ ಮೇಲೆ ಪ್ರತಿಷ್ಠಿತವಾದದ್ದು ಈ ನಾಟಕು.... 'ಹರಿಜನಿವಾರ' ನಾಟಕದಿಂದ ಮೊದಲು ಮಾಡಿಕೊಂಡು ಸಿದ್ದ ಮಾದರಿಗಳನ್ನು ಒಡೆದು ಹಾಕುವ ಸಾಹಸ ಕಾರ್ಯವನ್ನು ಶ್ರೀರಂಗರು 'ಕೇಳು ಜನಮೇಜಯ' ದ ವರೆಗೆ ಮುಂದುವರೆಸಿದರು. ಆದರೆ ಸಿದ್ಧ ಮಾದರಿಗಳು ಅವ್ಯಕ್ತದ ಕತ್ತಲೆಯಲ್ಲಿಯೇ ಹೊಂಚು ಹಾಕುತ್ತಿರುತ್ತವೆ. ವ್ಯಕ್ತಿಗಳು ಮನುಷ್ಯ ಮಾದರಿಗಳಾಗಿ ನಿರ್ಜೀವವಾದರೆ, ಮನುಷ್ಯ ಮಾದರಿಗಳನ್ನು ಒಡೆದು ವ್ಯಕ್ತಿಗಳನ್ನು ನಿರ್ಮಿಸುವುದು ಸಾಧ್ಯವಿದೆ. 'ಕೇಳು ಜನಮೇಜಯ'ದ ನಿರ್ಜೀವ ಪಾತ್ರಗಳು ಜೀವ ತಳೆದು ಮನುಷ್ಯರನ್ನೇ ಗೊಂಬೆಗಳನ್ನಾಗಿ ಮಾಡಿ ಆಟವಾಡುತ್ತವೆ. ನಿಮ್ಮ ಅರ್ಥ ಇಷ್ಟೇ ಅಲ್ಲವೇ ಎಂದು ಕೇಳುತ್ತವೆ. ಆಟ ಮುಗಿದ ಮೇಲೆ ಸತ್ತು ಹೋಗಬೇಕಾದ ಪಾತ್ರಗಳಿವು. ಆದರೆ ವ್ಯಂಗ್ಯವೆಂದರೆ ಆಟ ಮುಗಿದ ಮೇಲೂ ಇವು ಉಳಿದು ಬಿಡುತ್ತವೆ. ಶ್ರೀರಂಗರ ರಂಗಭೂಮಿಯ ಮೇಲೆ ಆದದ್ದೂ ಅದೇ ಆಟ ನಡೆಯಬೇಕಾದರೆ ಗೊಂಬೆಗಳನ್ನು ಹೊರಗೆ ತರಬೇಕು. ಸಿದ್ದ ಮಾದರಿಗಳನ್ನು ನಾಶಪಡಿಸಿದ ತತ್ವಗಳೇ ಈಗ ಸಿದ್ಧಮಾದರಿಗಳಾದವು.
-ಕೀರ್ತಿನಾಥ ಕುರ್ತಕೋಟಿ
0 average based on 0 reviews.