ರಾ.ಯ.ಧಾರವಾಡಕರ
| Category: | ಕನ್ನಡ |
| Sub Category: | |
| Author: | |
| Publisher: | Manohara Grantha Mala |
| Language: | Kannada |
| Number of pages : | |
| Publication Year: | 2026 |
| Weight | |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕನ್ನಡ ಸಾರಸ್ವತ ಪ್ರಪಂಚಕ್ಕೆ ಪ್ರಿನ್ಸಿಪಾಲ್ ಧಾರವಾಡಕರರು ಸುಪರಿಚಿತರು. ಅವರ ಸಾಹಿತ್ಯಕೃತಿಗಳು ಕನ್ನಡ ಸಾಹಿತ್ಯ ಪ್ರೇಮಿಗಳು ವಿಶೇಷ ಮನ್ನಣೆ ಪಡೆದಿರುವವಲ್ಲವೇ. ಅವರ ಹಲವು ಕೃತಿಗಳು ಸರಕಾರದಿಂದ ಪ್ರಶಸ್ತಿಗಳನ್ನೂ ಪಡೆದಿವೆ.
ಈ ಸಂಕಲನದ ಪ್ರಬಂಧಗಳ ಚೆಲುವೂ ಅವು ಒಡಮೂಡಿಸುವ ವ್ಯಕ್ತಿತ್ವದ ರಸಿಕತೆಯಲ್ಲಿದೆ. ಜಗತ್ತಿನಲ್ಲಿಯ ದುಃಖ ಅನ್ಯಾಯಗಳನ್ನು ಕಂಡು ಮನಸ್ಸನ್ನು ಕಹಿ ಮಾಡಿಕೊಳ್ಳದೆ, ಸುತ್ತಲೂ ಒಳ್ಳೆಯದನ್ನು, ಸುಂದರವಾದುದನ್ನು ಕಂಡು, ಅದರಲ್ಲಿಯೇ ಆನಂದವನ್ನು ಪಡೆಯುವ ವಿನೋದ ಪ್ರಿಯ ಪ್ರಕೃತಿ ಅವರದು.
ಈ ಪಡೆದ ಆನಂದವನ್ನು ಎಲ್ಲರಿಗೂ ಹಂಚುವ ಜಾಣ್ಯ, ರಸಿಕತೆ ಅವರಲ್ಲಿ ಧಾರಾಳವಾಗಿವೆ. ಈ ಗುಣಗಳ ಸುಂದರ ಫಲಗಳೇ ಈ ಪ್ರಬಂಧಗಳ, ಹರಟೆಗಳು, ಅವುಗಳ ಬರಹದ ಶೈಲಿಯೂ ಸರಳ ಹಾಗೂ ಸುಲಲಿತ. ನಿತ್ಯ ಬಳಕೆಯ, ಧಾರವಾಡದ ಮಣ್ಣಿನ ವಾಸನೆಯನ್ನೇ ಹೊತ್ತಂಥ ಭಾಷೆಯನ್ನು ನಾವು ಇಲ್ಲಿ ಕಾಣಬಹುದು ಈ ಪ್ರಬಂಧಗಳನ್ನು ಓದಿದಾಗ ಕವಿ ಹೇಳಿದ ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ ಎಂಬ ಮಾತು ನೆನಪಿಗೆ ಬರುತ್ತದೆ. ಹದವಾದ ಮನಸ್ಸಿನಿಂದ ನಿರರ್ಗಳವಾಗಿ, ನಿರಾಯಾಸವಾಗಿ ಹರಿಯುವ ಸರಸ ಸಲ್ಲಾಪಗಳವು ಇಲ್ಲಿ ಪಾಂಡಿತ್ಯದ ಜಡತೆಯಿಲ್ಲ.
ಇವುಗಳನ್ನು ಓದುವುದೆಂದರೆ ಬೆಳದಿಂಗಳಿನಲ್ಲಿ ವಿರಹಿಸಿದಂತೆ ಈ ಪ್ರಬಂಧಗಳನ್ನು ಕನ್ನಡದ ಸಾಹಿತ್ಯಪ್ರೇಮಿಗಳು ಓದಿ, ಅವುಗಳಲ್ಲಿಯ ಸುಸಂಸ್ಕೃತವಾದ ಮನೋರಂಜನೆಯನ್ನು ಅನುಭವಿಸಲಿ! ಜ್ಞಾನಪ್ರವಾಹವನ್ನು ಆಸ್ವಾದಿಸಿ ತಣಿಯಲಿ ಶ್ರೀ ಧಾರವಾಡಕರರು ಇಂಥ ಅನೇಕ ಪ್ರಬಂಧಗಳಿಂದ ಕನ್ನಡ ಸಾಹಿತ್ಯಸಿರಿಯನ್ನು ಹೆಚ್ಚಿಸುತ್ತಿರಲಿ ಎಂದು ಹಾರೈಸುತ್ತೇನೆ.
ಸದಾಶಿವ
0 average based on 0 reviews.