| Category: | ವೀರಲೋಕ ಪುಸ್ತಕಗಳು |
| Sub Category: | ಕಾದಂಬರಿ |
| Author: | ಕರ್ಕಿ ಕೃಷ್ಣಮೂರ್ತಿ | Karki Krishnamurthy |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2026 |
| Weight | 300 |
| ISBN | 9789348 355294 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮನುಷ್ಯನ ಹೆಬ್ಬೆರಳನ್ನು ಹುಟ್ಟುತ್ತಲೇ ಕಟ್ ಮಾಡಿ ಬಿಡಬೇಕು!" ಎಂದ ವಿಕಾಸ್ವಾದ.
ಸೀಲಿಂಗ್ ಫ್ಯಾನಿನ ಕಂಬಕ್ಕೆ ಕಾಲುಗಳೆರಡನ್ನೂ ಅಡ್ಡಲಾಗಿ ಹಾಕಿ ತಲೆಕೆಳಗಾಗಿ ಬಾವಲಿಯಂತೆ ತೂಗುತ್ತ ಕಣ್ಣೆರಡನ್ನೂ ಕೈಯಿಂದ ಮುಚ್ಚಿಕೊಂಡಿದ್ದ ಆತ. ಧರಿಸಿದ್ದ ಟೀಶರ್ಟು ಮಗುಚಿ, ಜಾರಿ ಅವನ ಕುತ್ತಿಗೆಯವರೆಗೂ ಇಳಿದಿತ್ತು. ಎದೆಯ ಎಲುಬುಗಳೂ, ಒಳಕ್ಕೆ ಕುಸಿದ ಹೊಟ್ಟೆಯೂ ಸ್ಪಷ್ಟವಾಗಿ ಕಾಣುತ್ತಿತ್ತು.
ವಿಕಾಸ್ವಾದನ ಅಪರಾವತಾರಗಳನ್ನು ಬಲ್ಲದವನೇನಲ್ಲ ಸುಕಾಂತ. ಆದರೆ ವ್ಯಕ್ತಿಯೊಬ್ಬನಿಗೆ ಈ ರೀತಿ ಫ್ಯಾನಿಗೆ ಉಲ್ಲಾ ನೇತುಬೀಳಲು ಸಾಧ್ಯವಿದೆ ಎಂಬ ಕಲ್ಪನೆಯೂ ಇರಲಿಲ್ಲ. ಮನೆ ಪ್ರವೇಶಿಸಿದೊಡನೇ, ಛಾವಣಿಯಿಂದ ಜೋತಾಡುತ್ತಿರುವ ವಿಕಾಸ್ವಾದನನ್ನು ನೋಡಿ ಹೌಹಾರಿದ. ಆಶ್ಚರ್ಯಕ್ಕಿಂತ ಆತಂಕವೇ ಆಯಿತವನಿಗೆ. ಆತ್ಮಹತ್ಯೆಯ ಪ್ರಯತ್ನದಲ್ಲಿ ಏನೋ ಎಡವಟ್ಟಾಗಿ ಸಮತೋಲನ ತಪ್ಪಿ ಹೀಗೆ ನೇತಾಡುತ್ತಿದ್ದಾನೋ ಎಂದೂ ಅನಿಸಿತು ಆ ಕ್ಷಣಕ್ಕೆ.
"ಅರೇ... ಇದೇನು ಮಾಡುತ್ತಿರುವಿರಿ? ಏನಾಯ್ತು?" ಉದ್ವೇಗದಲ್ಲಿ ಅತ್ತ ಧಾವಿಸಿದೆ.
"ಇವತ್ತು ನಾವು ಕಾಣುತ್ತಿರುವ ಎಲ್ಲ ಅನಾಹುತಗಳಿಗೂ ಮೂಲ ಕಾರಣ ಮನುಷ್ಯನ ಹೆಬ್ಬೆಟ್ಟು. ಪವಾಡವೊಂದು ಜರುಗಿ, ಜನಿಸುವ ಪ್ರತಿ ಶಿಶುವಿನ ಹೆಬ್ಬೆರಳನ್ನು ತುಂಡರಿಸುವಂತಾಗಬೇಕು" ಭಂಗಿಯನ್ನು ತುಸುವೂ ಕದಲಿಸದೇ ಹೇಳಿದ ವಿಕಾಸ್ವಾದ. "ಆಗ, ಈ ಭೂಮಿಯ ಮೇಲೆ ಎಲ್ಲವೂ ಮೊದಲಿನಂತೇ ಆಗುತ್ತೆ."
ಕರ್ಕಿ ಕೃಷ್ಣಮೂರ್ತಿ | Karki Krishnamurthy |
0 average based on 0 reviews.