#
ಕೇಶವಮೂರ್ತಿ ಆರ್
ಗಂಗಾವತಿ ಬಿ ಪ್ರಾಣೇಶ್
ದಶರಥ
nil
ಆ ಕ್ಷಣದ ಸತ್ಯಗಳಿವು. ಥಟ್ಟನೆ ಹೊಳೆದದ್ದನ್ನು ಹೊಳಪಾಗಿಸಲು ಹೋಗದೇ ಹೊಳೆದಂತೆ ಬರೆದಂಥ ಟಿಪ್ಪಣಿಗಳು. ಇಲ್ಲಿ ದಿನನಿತ್ಯದ ಸಂಭ್ರಮ, ಉಲ್ಲಾಸ, ದುಗುಡ, ಆತಂಕ, ಉಪದೇಶ, ಪ್ರಶ್ನೆ, ಬೆರಗು ಎಲ್ಲವೂ ಇದೆ. ಪಳಗಿದ ಲೇಖಕನ ಕೈಗೆ ಸಿಕ್ಕರೆ ಈ ಟಿಪ್ಪಣಿಗಳು ಕತೆಯೋ ಕವಿತೆಯೋ ಆಗುತ್ತದ್ದಿವು. ಸಾವು, ಬದುಕು, ವೇದಾಂತ, ತಮಾಷೆ, ಏಕಾಂತ, ವಿಷಾದ-ಎಲ್ಲವನ್ನೂ ವಿನಯ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ದಾಖಲಿಸಿದ್ದಾರೆ. ಬದುಕಿಗೆ ಭಾಷ್ಯ ಬರೆಯುವ ಆಸೆ ನಮ್ಮೆಲ್ಲರಿಗೂ ಇರುತ್ತದೆ. ಬದುಕನ್ನು ಹಿಡಿಯುವುದಕ್ಕೆ ಸುದೀರ್ಘ ಬರಹ ಬೇಕೇ ಅಥವಾ ಪುಟ್ಟ ಪುಟ್ಟ ಪ್ರಸಂಗಗಳಲ್ಲಿ ದಿನನಿತ್ಯದ ತವಕ ತಲ್ಲಣಗಳನ್ನು ಹಿಡಿದಿಡಬಹುದೇ ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಈ ಬರಹಗಳನ್ನು ಓದಬೇಕು. ನನಗೆ ಇಷ್ಟವಾದದ್ದು ವಿನಯ್ ಅವರ ಬರಹದ ವಿಸ್ತಾರ ಮತ್ತು ವಿನಯ. ಅವರದು ಉಪದೇಶದ ಧಾಟಿ ಅಲ್ಲ, ಅರಿತುಕೊಳ್ಳುವ ಹಾದಿ. ತನಗೆ ಅನ್ನಿಸದ್ದಿನ್ನು ಓದುಗರ ಮುಂದಿಟ್ಟು ವಿಧೇಯ ವಿದ್ಯಾರ್ಥಿಯಂತೆ ಕೈ ಕಟ್ಟಿ ನಿಲ್ಲುವ ಅವರ ಸಜ್ಜನಿಕೆ ಮತ್ತು ಸರಳತೆ ಈ ಬರಹಗಳಲ್ಲೂ ಕಾಣಿಸುತ್ತದೆ. ಇವು ನಿಮ್ಮಲ್ಲೂ ಅನೇಕ ನೆನಪುಗಳನ್ನು ಉಕ್ಕಿಸಬಹುದು. ನಿಮ್ಮನ್ನೂ ಆಲೋಚನೆಗೆ ಹಚ್ಚಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವಿಚಿತ್ರವಾದ ನಡವಳಿಕೆಗಳನ್ನು ಮತ್ತೊಮ್ಮೆ ನೋಡಿಕೊಂಡು ತಮಾಷೆ ಮಾಡಿಕೊಳ್ಳುವ ಸದ್ಗುಣವನ್ನು ಕರುಣಿಸಬಹುದು. ಅಷ್ಟರ ಮಟ್ಟಿಗೆ ಇವು ಸಾರ್ಥಕ. -ಜೋಗಿ
ಗಂಗಾವತಿ ಪ್ರಾಣೇಶ್
ಡಾ ಶರಣು ಹುಲ್ಲೂರು ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು Read More...
ಸವಿರಾಜ ಆನಂದೂರು ಕಾವ್ಯಲೋಕದಿಂದ ಕಥಾ ಲೋಕಕ್ಕೆ `ಪುರಾಣ ಗಿರಾಣ ಇತ್ಯಾದಿ' ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಈ ಸಂಕಲನಕ್ಕೆ ಬೇಕಾದ ಅಪಾರ ಓದು, ವಿಶ್ಲೇಷಣೆ, ಅದಕ್ಕೆ ಬೇಕಾದ ಪೂರ್ವ ಸಿದ್ಧತೆ, ಕತೆಗೆ ಬೇಕಾದ ಚೌಕಟ್ಟಿನೊಳಗೆ ಕೂರಿಸುವ ಜಾಣ್ತನ, ಎಲ್ಲವೂ ಅವರಿಗೆ ಈ ಕಥಾ ಸಂಕಲನದಲ್ಲಿ ಸಿದ್ಧಿಸಿದೆ. ಚೌಕಟ್ಟಿನಾಚೆಗೂ ಕತೆ ಜಿಗಿತವನ್ನು ಕಾಣುತ್ತವೆ, ಕಾಡುತ್ತವೆ.
ರವಿ ಜೆ ಭಜಂತ್ರಿ
Showing 31 to 60 of 96 results