
ಆ ಕ್ಷಣದ ಸತ್ಯಗಳಿವು. ಥಟ್ಟನೆ ಹೊಳೆದದ್ದನ್ನು ಹೊಳಪಾಗಿಸಲು ಹೋಗದೇ ಹೊಳೆದಂತೆ ಬರೆದಂಥ ಟಿಪ್ಪಣಿಗಳು. ಇಲ್ಲಿ ದಿನನಿತ್ಯದ ಸಂಭ್ರಮ, ಉಲ್ಲಾಸ, ದುಗುಡ, ಆತಂಕ, ಉಪದೇಶ, ಪ್ರಶ್ನೆ, ಬೆರಗು ಎಲ್ಲವೂ ಇದೆ. ಪಳಗಿದ ಲೇಖಕನ ಕೈಗೆ ಸಿಕ್ಕರೆ ಈ ಟಿಪ್ಪಣಿಗಳು ಕತೆಯೋ ಕವಿತೆಯೋ ಆಗುತ್ತದ್ದಿವು. ಸಾವು, ಬದುಕು, ವೇದಾಂತ, ತಮಾಷೆ, ಏಕಾಂತ, ವಿಷಾದ-ಎಲ್ಲವನ್ನೂ ವಿನಯ್ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ದಾಖಲಿಸಿದ್ದಾರೆ. ಬದುಕಿಗೆ ಭಾಷ್ಯ ಬರೆಯುವ ಆಸೆ ನಮ್ಮೆಲ್ಲರಿಗೂ ಇರುತ್ತದೆ. ಬದುಕನ್ನು ಹಿಡಿಯುವುದಕ್ಕೆ ಸುದೀರ್ಘ ಬರಹ ಬೇಕೇ ಅಥವಾ ಪುಟ್ಟ ಪುಟ್ಟ ಪ್ರಸಂಗಗಳಲ್ಲಿ ದಿನನಿತ್ಯದ ತವಕ ತಲ್ಲಣಗಳನ್ನು ಹಿಡಿದಿಡಬಹುದೇ ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಈ ಬರಹಗಳನ್ನು ಓದಬೇಕು. ನನಗೆ ಇಷ್ಟವಾದದ್ದು ವಿನಯ್ ಅವರ ಬರಹದ ವಿಸ್ತಾರ ಮತ್ತು ವಿನಯ. ಅವರದು ಉಪದೇಶದ ಧಾಟಿ ಅಲ್ಲ, ಅರಿತುಕೊಳ್ಳುವ ಹಾದಿ. ತನಗೆ ಅನ್ನಿಸದ್ದಿನ್ನು ಓದುಗರ ಮುಂದಿಟ್ಟು ವಿಧೇಯ ವಿದ್ಯಾರ್ಥಿಯಂತೆ ಕೈ ಕಟ್ಟಿ ನಿಲ್ಲುವ ಅವರ ಸಜ್ಜನಿಕೆ ಮತ್ತು ಸರಳತೆ ಈ ಬರಹಗಳಲ್ಲೂ ಕಾಣಿಸುತ್ತದೆ. ಇವು ನಿಮ್ಮಲ್ಲೂ ಅನೇಕ ನೆನಪುಗಳನ್ನು ಉಕ್ಕಿಸಬಹುದು. ನಿಮ್ಮನ್ನೂ ಆಲೋಚನೆಗೆ ಹಚ್ಚಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವಿಚಿತ್ರವಾದ ನಡವಳಿಕೆಗಳನ್ನು ಮತ್ತೊಮ್ಮೆ ನೋಡಿಕೊಂಡು ತಮಾಷೆ ಮಾಡಿಕೊಳ್ಳುವ ಸದ್ಗುಣವನ್ನು ಕರುಣಿಸಬಹುದು. ಅಷ್ಟರ ಮಟ್ಟಿಗೆ ಇವು ಸಾರ್ಥಕ. -ಜೋಗಿ
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | ಎಂ ವಿನಯ್ ಕುಮಾರ್ | M Vinay Kumar |
Publisher: | Sawanna Enterprises |
Language: | Kannada |
Number of pages : | 132 |
Publication Year: | 2025 |
Weight | 300 |
ISBN | 978-93-93224-57-6 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಎಂ ವಿನಯ್ ಕುಮಾರ್ | M Vinay Kumar |
0 average based on 0 reviews.