| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ದೀಪಕ್ ಎಂ | Deepak M |
| Publisher: | ಛಂದ ಪುಸ್ತಕ | Chanda Pustaka |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | 9788198 825254 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಮುದ್ರವನ್ನು ಸೀಳಿಕೊಂಡು ನಾವೆ ಮುಂದೆ ಸಾಗುತ್ತಿತ್ತು. ಸೂರ್ಯಾಸ್ತಮಾನವು ಸೃಷ್ಟಿಸುತ್ತಿದ್ದ ರಂಗಿನಾಟವನ್ನು ನೋಡುತ್ತಾ ದೀಪಾಂಕರ ಮೈಮರೆತು ಹೋದ. ಆ ವೇಳೆಗೆ ಅಲ್ಲಿಗೆ ಬಂದ ಕ್ಯಾಪ್ಟನ್ ಮೌಲೀಂ ಅವನೆಡೆಗೆ ಮುಗುಲ್ನಕ್ಕು 'ನೀರಿನ ಬಣ್ಣ ಬದಲಾಗಿದೆ ನೋಡಿದಿರಾ?' ಎಂದ. 'ನರಸಾಪುರಂ, ಅಂತರ್ವೇದಿ ದಾಟುತ್ತಿದ್ದೇವೆ, ಗೋದಾವರಿ ಸಮುದ್ರ ಸೇರುವ ಜಾಗ ಇದು. ದೊಡ್ಡ ನದಿಗಳು ಸಮುದ್ರ ಸೇರುವ ಜಾಗದಲ್ಲಿ ನೀರಿನ ಬಣ್ಣ ಸ್ವಲ್ಪ ಕೆಸರುಮಯವಾಗುತ್ತದೆ' 'ಹೌದಾ? ನೋಡಿದರೆ ಎಲ್ಲಾ ಕಡೆ ಸಮುದ್ರವೇ ಇದೆ. ಎಲ್ಲಿದ್ದೇವೆ ಎಂದು
ನಿಮಗೆ ಹೇಗೆ ತಿಳಿಯುತ್ತದೆ?' ಕೇಳಿದ ದೀಪಾಂಕರ. 'ನೀರಿನ ಬಣ್ಣ ನೋಡಿ, ಅದರಲ್ಲಿ ತೇಲಿಕೊಂಡು ಬರುವ ಗಿಡಮರದ ಕೊಂಬೆಗಳನ್ನು ಗಮನಿಸಿ, ಪಕ್ಷಿಗಳು, ಅವು ಹಾರುವ ದಿಕ್ಕು, ಗಾಳಿಯ ವೇಗವನ್ನು ಪರಿಶೀಲಿಸಿ, ನೀರಲ್ಲಿ ಕಾಣುವ ಮೀನುಗಳನ್ನು ಆಧರಿಸಿ ತೀರಕ್ಕೆ ಎಷ್ಟು ದೂರದಲ್ಲಿದ್ದೇವೆ ಎಂದು ಊಹೆ ಮಾಡಬಹುದು. ರಾತ್ರಿ ಹೊತ್ತಾದರೆ ನಕ್ಷತ್ರಗಳನ್ನು ನೋಡಿ ತಿಳಿದುಕೊಳ್ಳುತ್ತೇವೆ. ಇಷ್ಟೆಲ್ಲಾ ನೈಪುಣ್ಯತೆ ಗಳಿಸಲು ತುಂಬಾ ಕಾಲ ಹಿಡಿಯುತ್ತದೆ' ಎಂದ ಕ್ಯಾಪ್ಟನ್ ನಗುತ್ತ.
ಅಲ್ಲಿಯವರೆಗೆ ತಿಳಿಯದ ಹೊಸದೊಂದು ಪ್ರಪಂಚವನ್ನು ತೋರಿಸಿದ ನಾವಿಕರ ಕುರಿತಾಗಿ ದೀಪಾಂಕರನ ಗೌರವ ಹೆಚ್ಚಿತು. ತಾನೇನಾದರೂ ಬಿಕ್ಕು ಆಗದೆ ಹೋಗಿದ್ದರೆ, ನಾವಿಕನಾಗಿ ಸಮುದ್ರವನ್ನು ಜಾಲಾಡಿಬಿಡುತ್ತಿದ್ದೆ ಎಂದುಕೊಂಡ.
ಹೆಸರಾಂತ ತೆಲುಗು ಬರಹಗಾರ ಉಣುದುರ್ತಿ ಸುಧಾಕರ್ ಅವರ ಈ ಕಥಾಸಂಕಲನದಲ್ಲಿ 'ಮೂಡಣ ಮಾರುತ' ಎಂಬ ದೀರ್ಘ ಕತೆಯ ಜೊತೆಗೆ ಇನ್ನೂ ಏಳು ಚೆಂದದ ಕತೆಗಳಿವೆ.
ದೀಪಕ್ ಎಂ | Deepak M |
0 average based on 0 reviews.