| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | Madhu Y N |
| Publisher: | ನೆಲಮುಗಿಲು | Nelamugilu |
| Language: | Kannada |
| Number of pages : | |
| Publication Year: | 2025 |
| Weight | 200 |
| ISBN | 9789355 927248 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ದಿನಬೆಳಗಾದರೆ ಪತ್ರಿಕೆಗಳಲ್ಲಿ "ಯಾರೋ ಅಷ್ಟು ಲಕ್ಷ ಕಳೆದುಕೊಂಡರು, ಇಷ್ಟು ಕೋಟಿ ಕಳೆದುಕೊಂಡರು," ಎಂಬ ಸುದ್ದಿ ಓದಿ ನಮಗೆ ಆಶ್ಚರ್ಯವಾಗುತ್ತದೆ. "ಛೇ! ಇದು ಹೇಗೆ ಸಾಧ್ಯ?" ಎಂದು ಹುಬ್ಬೇರಿಸುತ್ತೇವೆ. 'ನಾನಂತೂ ಈ ಬಲೆಯಲ್ಲಿ ಬೀಳಲ್ಲಪ್ಪ' ಎಂದು ಬೆನ್ನು ತಟ್ಟಿಕೊಳ್ಳುತ್ತೇವೆ.
ಆದರೆ ಸ್ವಲ್ಪ ಆಳಕ್ಕಿಳಿದು ನೋಡಿದರೆ ಬೆಚ್ಚಿಬೀಳಿಸುವ ಸತ್ಯವೊಂದು ಎದುರಾಗುತ್ತದೆ. ಇಲ್ಲಿ ವಂಚನೆಗೆ ಒಳಗಾದ ಯಾರೂ ದಡ್ಡರಲ್ಲ; ಇವರಲ್ಲಿ ಅನೇಕರು ಸಾಫ್ಟ್ವೇರ್ ಎಂಜಿನಿಯರ್ಗಳು, ಬ್ಯಾಂಕ್ ಮ್ಯಾನೇಜರ್ಗಳು ಅಥವಾ ನಿವೃತ್ತ ಅಧಿಕಾರಿಗಳು!
ಹೋಗಲಿ, ಆ ಕಡೆ ಫೋನಿನಲ್ಲಿರುವ ವಂಚಕ ಇವರಿಗಿಂತ ಬುದ್ದಿವಂತನೇ? ಅದೂ ಇಲ್ಲ. ಅವನಿಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಸಹ ಬರುತ್ತಿರುವುದಿಲ್ಲ. ಆದರೂ ತನಗಿಂತ ಹೆಚ್ಚು ತಿಳಿದವರನ್ನು ಖೆಡ್ಡಾಗೆ ಕೆಡವುತ್ತಾನಲ್ಲ, ಹೇಗೆ?
ಇದಕ್ಕೆ ಉತ್ತರ ನಿಮ್ಮ 'ಬುದ್ಧಿವಂತಿಕೆ'ಯಲ್ಲಿ ಇಲ್ಲ; ಅದು ಆ ಕ್ಷಣದ ನಿಮ್ಮ 'ಮನೋಸ್ಥಿತಿ'ಯಲ್ಲಿದೆ. ವಂಚಕರು ಹ್ಯಾಕ್ ಮಾಡುವುದು ನಿಮ್ಮ ಫೋನನ್ನಲ್ಲ, ನಿಮ್ಮ ಮೆದುಳನ್ನು, ಚನ್ನಾಗಿ, ಜವಾಬ್ದಾರಿಯಿಂದ ಡ್ರೈವಿಂಗ್ ಮಾಡುವವನೂ ಸಹ ಕೆಲವೊಮ್ಮೆ ಯಾಮಾರಿ ಅಪಘಾತ ಮಾಡಿಕೊಂಡಂತೆ.
ಈ ನಿಟ್ಟಿನಲ್ಲಿ ನೀವು ಸದಾ ಜಾಗೃತರಾಗಿರಲು, ನಿಮ್ಮ ಸುಪ್ತಪ್ರಜ್ಞೆಯನ್ನು ತರಬೇತಿಗೊಳಿಸಲು ಸ್ವಲ್ಪ ವಿಜ್ಞಾನ, ಸ್ವಲ್ಪ ಮನೋವಿಜ್ಞಾನ, ಸ್ವಲ್ಪ ತತ್ವಜ್ಞಾನ, ಸ್ವಲ್ಪ ತಂತ್ರಜ್ಞಾನ, ಅದರೊಂದಿಗೆ ತುಸು ಕಾನೂನಿನ ಅರಿವು-ಹೀಗೆ ಸುರಕ್ಷಿತ ಬದುಕಿಗೆ ಬೇಕಾದ ಎಲ್ಲವನ್ನೂ ಒಳಗೊಂಡ ಒಂದು ಪುಟ್ಟ ಕೈಪಿಡಿ ಈ ಪುಸ್ತಕ,
Madhu Y N |
|
ಮಧು ವೈ ಎನ್ |
0 average based on 0 reviews.