| Category: | ಕನ್ನಡ |
| Sub Category: | ಹಣಕಾಸು - ವ್ಯವಹಾರ |
| Author: | ಬಿ.ಜಿ. ರಾಮನಾಥ್ | B G Ramanath |
| Publisher: | ಸಾಹಿತ್ಯಲೋಕ ಪಬ್ಲಿಕೇಷನ್ಸ್ | Sahityaloka Publication |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಘಟಸರ್ಪ
ಖಾಸಗಿ ಸಂಸ್ಥೆಯೊಂದರಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ, ವ್ಯಾಪಾರ ವ್ಯವಹಾರವೆಂಬ ನಿತ್ಯ ಲೌಕಿಕದಲ್ಲಿಯೇ ಮುಳುಗೇಳುತ್ತಿರುವ ಲೇಖಕರು, ಅದೇ ವಸ್ತುವನ್ನು ಆಧಾರವಾಗಿಟ್ಟುಕೊಂಡು ತಮ್ಮ ವಿಶಿಷ್ಟ ನಿರೂಪಣಾ ಶೈಲಿಯಲ್ಲಿ ಅಭಿವ್ಯಕ್ತಿಗೊಳಿಸಿರುವುದು ಅಮೋಘವಾಗಿದೆ. ಕಳೆದ ವರ್ಷ ರಚಿಸಲ್ಪಟ್ಟ ಪ್ರಥಮ ಕೃತಿ 'ಪೂರ್ವಾಶ್ರಮ' ದಲ್ಲಿಯೇ ಅವರ ಸಾಮರ್ಥ್ಯದ ಅರಿವು ನಮಗಾಗಿದ್ದು ಅದು ಇಲ್ಲಿಯೂ ಪುನರಾವರ್ತನೆಗೊಂಡಿದೆ
ಸತ್ಯಧರ್ಮಪರಾಯಣನೂ, ಮೃದು ಹೃದಯಿಯೂ ಆಗಿರುವ ಮಲೆನಾಡ ಸಂಪ್ರದಾಯಸ್ಥ ಬ್ರಾಹ್ಮಣನಾಗಿರುವ ಕಥಾ ನಾಯಕನಿಗೆ ದುರದೃಷ್ಟವಶಾತ್ ಲಭ್ಯವಾದವನು ಮಾತ್ರಾ ತದ್ವಿರುದ್ಧ ಮನೋಧರ್ಮದ ಕುಡುಕ ವಾಸ್! ಆತನ ಮದಿರಾದೌರ್ಬಲ್ಯಕ್ಕೆ, ಕುಬಲ ರಾಜಕೀಯಲ್ಲೆ, ಅನಾಚಾರ ಶ್ರದ್ದೆಗೆ, ಕ್ರೋಧ ಮದಗಳಿಗೆ ವಿನಾಕಾರಣ ಬಲಿಯಾಗುವ ಈ ಬಡಪಾಯಿ ಅನುಭವಿಸಿದ ಯಾತನೆ, ಸಂಕಟ, ಇತ್ಯಾದಿಗಳು ಖಾಸಗಿ ಸಂಸ್ಥೆಗಳಲ್ಲಿ ನಿತ್ಯವೂ ಕಾಣಲ್ಪಡುವ ಸಂಗತಿಗಳೇ ಆಗಿದ್ದು, ಅವುಗಳನ್ನು ಜೋಡಿಸಿ ಹೆಣೆದಿರುವ ಈ ಕಥಾನಕವು ಬಹಳ ಸುಂದರವಾಗಿ ಮೂಡಿಬಂದಿದೆ. ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅದೇ ಗುರುವಿನಿಂದ ಕಲಿತ ಕುಚಿಲತೆಯನ್ನು ಅಷ್ಟಿಷ್ಟು ಬಳಸಿಕೊಳ್ಳುವುದರ ಮುಖಾಂತರ ಪಾರಾಗುವ, ಆ ತಂತ್ರಗಾರ ಶಿರೋಮಣಿಯನ್ನು ಪಟ್ಟುಗಳ ವರ್ಣನೆ ಬಹಳ ರೋಚಕವಾಗಿ ಮೂಡಿಬಂದಿದೆ. ಈ ಕೃತಿಯ ಉದ್ದಕ್ಕೂ ಬಳಸಿರುವ ಶಬ್ದಗಳಂತೂ ಉದ್ಭುತವಾಗಿದ್ದು, ಕೃತಿಕಾರನ ಬೌದ್ಧಿಕ ಮಟ್ಟವನ್ನೂ, ಸಾಹಿತ್ಯ ಸಂಪತ್ತಿಯನ್ನೂ ಬಹುವಾಗಿ ನಿರೂಪಿಸುತ್ತಾ ಸಾಗುತ್ತವೆ ನಗೆಯನ್ನು ಉಕ್ಕಿಸುವಂತಹ ಅಲ್ಲಲ್ಲಿ ಕಂಡುಬರುವ ಹಾಸ್ಯ ಪ್ರಸಂಗಗಳ ಚಿತ್ರಣ ಬಹಳ ಅಪರೂಪದ್ದಾಗಿದ್ದು, ಒಟ್ಟಾರೆಯಾಗಿ ಕಾದಂಬರಿಯು ಓದುಗರ ಮನಸ್ಸನ್ನು ಕೊನೆಯವರೆಗೂ ಹಿಡಿದಿಟ್ಟುವುದರಲ್ಲಿ ಯಶಸ್ವಿಯಾಗಿದೆ.
. 20.5. ನಿವೃತ್ತ ಕನ್ನಡ ಪ್ರಾಧ್ಯಾಪಕರು
ಬಿ.ಜಿ. ರಾಮನಾಥ್ | B G Ramanath |
0 average based on 0 reviews.