ಈ ಕಿರುನಾಟಕಗಳ ವಿಶೇಷತೆ ಏನು ಗೊತ್ತಾ ? ಇದು 3ಡಿ. ಕೇವಲ ಓದಿಯೂ ಖುಷಿ ಪಡಬಹುದು. ರೇಡಿಯೋ ನಾಟಕವಾಗಿಸಿಯೂ ಖುಷಿ ಪಡಬಹುದು ಮತ್ತು ರಂಗದ ಮೇಲೆ ಆಡಿಯೂ ಖುಷಿ ಪಡಬಹುದು. ಕೆಲವೇ ಕೆಲವು ಪಾತ್ರಗಳಿರುವುದರಿಂದ ಆಡುವವರಿಗೂ ಸುಲಭ. ಅದರಲ್ಲೂ ಶಾಲೆ, ಕಾಲೇಜುಗಳಲ್ಲಿ ಆಡುವುದಕ್ಕೆ, ರಾಜ್ಯೋತ್ಸವಾದಿ ಸಮಾರಂಭಗಳಲ್ಲಿ ಪ್ರದರ್ಶಿಸುವುದಕ್ಕೆ ಹೇಳಿ ಮಾಡಿಸಿದ ಹಾಗಿದೆ. ಅಲ್ಲಲ್ಲ, ಹೇಳಿ ಬರೆಸಿದ ಹಾಗಿದೆ. ಡುಂಡಿರಾಜರ ಶೈಲಿಯ ಪರಿಚಯವಿದ್ದವರು ನಾಟಕಗಳಲ್ಲಿ ಅವರ ಪಂಡ್ಗಳನ್ನು ಗುರುತಿಸಬಹುದಾದರೂ, ಇದರಲ್ಲಿ ಒಂದು ಸರ್‌ಪ್ರೈಸ್ ಎಲಿಮೆಂಟ್ ಕೂಡಾ ಇದೆ. ಏನು ಗೊತ್ತಾ? ಇವರು ದ ಕ ಆದರೂ ಕೆಲವು ಪ್ರಹಸನಗಳಲ್ಲಿ ಉಕ ಆಗಿದ್ದಾರೆ. ಅಂದರೆ ಉತ್ತರ ಕರ್ನಾಟಕದ ಭಾಷೆ ಬಳಸಿರೋದರಿಂದ ಈ ನಾಟಕಗಳು ಅಲ್ಲಿಯೂ ಜನಪ್ರಿಯವಾಗುವುದರಲ್ಲಿ ಸ್ವಲ್ಪವೂ ಸಂಶಯವಿಲ್ಲ. ಇಡೀ ಕರ್ನಾಟಕಕ್ಕೆ ಸಲ್ಲುವ ನಾಟಕಗಳಿವು. "ಡಿವೈಡ್ ৬০মে ರೂಲ್" ಅಂತಾರಲ್ಲ? ಅದರಲ್ಲಿ ಡುಂಡಿರಾಜ್ ಸಿದ್ಧಹಸ್ತರು. "ಡಿವೈಡ್ ಅಂಡ್ ರೂಲ್" ಅಂದರೆ ಒಡೆದಾಳುವ ನೀತಿ. ಇವರದ್ದು "ಪದಗಳನ್ನು" ಒಡೆದು ಆಡುವ ರೀತಿ. ಅಲ್ಲದೆ ಹೊಸ ಹೊಸ ಪದಗಳನ್ನೂ ಕನ್ನಡ ಭಾಷೆಗೆ ಕಾಣಿಕೆಯಿತ್ತಿದ್ದಾರೆ. ಉದಾಹರಣೆಗೆ ಸಿನಿಮಹಾತ್ಮ, ಶೇಗ್ ಬಹದ್ದೂರ್, ಭಯವದನ, ಬರಿಯಪ್ಪ, ಮೋಸಪತ್ರಿಕೆ ಇತ್ಯಾದಿ.
ಡಾ ಎನ್ ಗೋಪಾಲಕೃಷ್ಣ
nil
ಎಚ್ ಡುಂಡಿರಾಜ್
#
ತಾರಕ್ಕನನ್ನು ಮನೆಯ ಹೊರಕಟ್ಟೆಯಿಂದ ಹಿಡಿದು ಹಿತ್ತಲವರೆಗೂ ಹುಡುಕಿದ. ಎದೆಬಡಿತ ಹೆಚ್ಚಾಗುತ್ತಿದ್ದಂತೆ ಕಟ್ಟಕಡೆಯದಾಗಿ ದೇವರಮನೆಯ ಬಾಗಿಲು ದೂಡಿದ. ನಂದಾದೀಪದ ಬೆಳಕಲ್ಲಿ ತಾರಕ್ಕನ ಮುಖ ಕಂಡಿತು. ಸಮಾಧಾನಕ್ಕಿಂತ ಹೆಚ್ಚಾಗಿ ಅಚ್ಚರಿ ಆಯಿತು. ನಿಟ್ಟುಸಿರು ಬಿಟ್ಟ. ಮೊಣಕಾಲುಗಳ ಮೇಲೆ ಗದ್ದವನ್ನಿಟ್ಟುಕೊಂಡು ದೀಪವನ್ನೇ ದಿಟ್ಟಿಸುತ್ತಿದ್ದ ಆಕೆಯ ಕಣ್ಣುಗಳು, ಉನ್ನತ್ತ ಗಂಧರ್ವನೊಬ್ಬನ ಕೈಯಿಂದ ಜಾರಿಬಿದ್ದ ಕಪ್ಪು ದ್ರಾಕ್ಷಿಗಳನ್ನು ಹಿಡಿದಿಟ್ಟುಕೊಂಡು ಮತ್ತೆ ಅವನ ಬರುವಿಕೆಗಾಗಿ ಕಾಯುತ್ತಿವೆಯೇನೋ ಎಂಬಂತಿದ್ದವು. ಆ ನಿಶ್ಚಲ ಕಣ್ಣುಗಳನ್ನೇ ನೋಡುತ್ತ ಗೋಡೆಗಾತು ಕುಳಿತ. ಸ್ವಲ್ಪ ಹೊತ್ತಿನ ನಂತರ ತಾನೂ ಅದೇ ದೀಪ ನೋಡಹತ್ತಿದ. ತಾರಕ್ಕನ ಪ್ರಭೆಯೆದುರು ಅಲ್ಲಿದ್ದ ದೇವ-ದೇವತೆಯರು ತಮ್ಮ ಪ್ರಭಾವಳಿಗಳನ್ನು ಕಳೆದುಕೊಂಡು ಕೇವಲ ಪಟದಲ್ಲಿ ಲೋಹದಲ್ಲಿ ಮೂಡಿಸಿಕೊಂಡ ನಿರ್ಜೀವ ಆಕೃತಿಗಳಂತೆ ಕಂಡರು.
ಆತ್ಮೀಯರೆ, ನಾನು ನಿಮ್ಮ ತನಾಶಿ. ಟಿ.ಎನ್. ಶಿವಕುಮಾರ್, ಮಂಡ್ಯಕೊಪ್ಪಲು. ಇದೋ ಕನಕದಾಸರ ಹರಿಭಕ್ತಿಸಾರವನ್ನು ಅರ್ಥ ಮತ್ತು ವ್ಯಾಖ್ಯಾನ ಸಹಿತ ಕನ್ನಡಿಗರ ಮಡಿಲಿಗೆ ಇಡುತ್ತಿದ್ದೇನೆ. ಹರಿಯ ವರ್ಣನೆಯನ್ನೂ, ಲೀಲಾವಿಲಾಸಗಳನ್ನೂ, ಹಾಡಿ ತಣಿಯದ ದಾಸರ ಪದ ಸಾಮ್ರಾಜ್ಯವು ನನ್ನ ವ್ಯಾಖ್ಯಾನದ ಜೊತೆಗೆ ನಿಮ್ಮೊಡನಿದೆ. ಇದು ನಿಮ್ಮ ಮೈಮನಗಳನ್ನು ಪುಳಕಗೊಳಿಸಿದರೆ ನನ್ನ ಶ್ರಮ ಸಾರ್ಥಕ. ಹರಿ ನಾಮ ಸಂಕೀರ್ತನೆಯು ಕನ್ನಡನಾಡಿನ ಮನೆಮನಗಳಲ್ಲಿ ಮೊಳಗಲಿ, ತಾವು ಓದಿ ಹಾರೈಸಿ, ಹರಸಿ,
ಖ್ಯಾತ ಕವಿಗಳಾದ ಜಯಂತ ಕಾಯ್ಕಿಣಿಯವರು ಹೇಳಿರುವಂತೆ ಬಿಟ್ಟುಬಿಡದೆ ಓದಿಸಿಕೊಳ್ಳುವ ಕಾಡುವ ಗುಣ ಇಲ್ಲಿನ ಕವಿತೆಗಳಿಗೆ ಇವೆ.
ಚಲನಶೀಲತೆ ಈ ಕಾದಂಬರಿಯ ಮುಖ್ಯವಾದ ಪ್ರತಿಮೆ ಎಂದು ನನ್ನ ಭಾವನೆ. ಚಲನೆ ಎಡೆಬಿಡದೆ ನಿರ್ಮಲಾಳನ್ನು ಭಾವಲೋಕದಿಂದ ಭಾವನೆಗಳ ಲೋಕಕ್ಕೆ, ವಾಸ್ತವ ಲೋಕದಿಂದ ಯಥಾರ್ಥವಾದ ಆತ್ಮ ಶುದ್ಧಿಯ ಮತ್ತು ಮುಂದುವರಿದು ಆತ್ಮ ಬೋಧೆಯ ಪ್ರಪಂಚಕ್ಕೆ ತೆಗೆದುಕೊಂಡು ಹೋಗುತ್ತದೆ. ಹೀಗೆ ಎಲ್ಲೆಲ್ಲಿ ನೋಡಿದರೂ ಬದುಕಿನ ಚಲನಶೀಲತೆಯನ್ನು ಬರವಣಿಗೆಯ ಮೂಲಕ ಸೆರೆ ಹಿಡಿಯಲು ಕಿರಣ್ ಅವರು ಪ್ರಯತ್ನಿಸಿದ್ದಾರೆ. ಡಾ. ಜಿ.ಬಿ. ಹರೀಶ (ಮುನ್ನುಡಿಯಿಂದ)
ಲೇಖಕಿ ಅನುಸೂಯ ಯತೀಶ್ ಬಹಳ ಕಕ್ಕುಲತೆಯ ಹೆಣ್ಣು ಮಗಳು ಮತ್ತು ಬಹಳ ಜವಾಬ್ದಾರಿಯುತ ಶಿಕ್ಷಕಿ ಹಾಗೂ ಗೃಹಿಣಿ. ಅವರ ತಾಯಿಯಂತಹ ಅಂತಃಕರಣಕ್ಕೆ ಅವರ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಮತ್ತು ಅವರು ಕಲಿಸುತ್ತಿರುವ ಶಾಲೆಯ ಮಕ್ಕಳು ಇಬ್ಬರೂ ಸಮಾನ ಹಕ್ಕುದಾರರು. ಶಿಕ್ಷಕಿ ಯಾರು, ತಾಯಿ ಯಾರು ಎಂದು ಗೆರೆ ಎಳೆಯಲಾಗದಷ್ಟು ಮಮತೆಯ ಜೀವ ಅವರದು. ಅವರು ಕಲಿಸುವ ಶಾಲೆಯ ಮಕ್ಕಳ ಜೊತೆಗಿನ ಒಡನಾಟವನ್ನು ಒಮ್ಮೊಮ್ಮೆ ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಅದನ್ನು ಕೇಳಿದ ನನಗೆ ಈ ಟೀಚರೊಳಗಿನ ತಾಯಿ ಜೀವದ ಪರಿಚಯವಾಗಿತ್ತು. ಈ ಅನುಪಮವಾದ ಅನುಭವ ಶಾಲೆಯನ್ನು ಬರಿಯ ಮಾತಲ್ಲಿ ಮುಗಿಸಬೇಡಿ. ಸರಣಿಯ ರೂಪದಲ್ಲಿ ಬರೆಯಿರಿ ಎಂದು ಕುಮ್ಮಕ್ಕು ನೀಡಿದ್ದೆ. ಆಗ ನಮ್ಮ `ಕೆಂಡಸಂಪಿಗೆ' ಅಂತರ್ಜಾಲ ಪತ್ರಿಕೆಯಲ್ಲಿ ಅಂಕಣ ರೂಪದಲ್ಲಿ ನನಗೇ ಅಚ್ಚರಿಯಾಗುವಂತೆ ಬಹಳ ಮನೋಜ್ಞವಾಗಿ ಬರೆದೇ ಬಿಟ್ಟರು. ಇವರ ಈ ಬರಹ ನನಗೇನೂ ಆಶ್ಚರ್ಯ ಉಂಟು ಮಾಡಲಿಲ್ಲ. ಏಕೆಂದರೆ ಪಕ್ಕಾ ತಾಯಿ ಹೃದಯದ ಅನುಸೂಯರಂತಹ ಬರಹಗಾರ್ತಿಯೊಬ್ಬಳು ರೂಢಿಗತವಾದ ಸಿದ್ಧಮಾದರಿಯ ಅಕಾಡೆಮಿಕ್ ನಡೆಗಳನ್ನು ಕಿತ್ತು ಬಿಸಾಕಿ ಅಂತಃಕರಣದ ಅನುಭವ ಜನ್ಯವಾದ ಗದ್ಯವನ್ನು ಬರೆದರೆ ಅದು ಹೃದಯ ಸ್ಪರ್ಶಿಯ ಅಮೂಲ್ಯವೂ ಆಗಬಲ್ಲದೆಂದು ನನಗೆ ಗೊತ್ತಿತ್ತು. ಒಂದು ಲಕ್ಷಕ್ಕೆ ಎಷ್ಟು ಸೊನ್ನೆಗಳು ಎಂಬ ಊಹೆಯಿಲ್ಲದ ಬಾಲಕಿಯೊಬ್ಬಳು ಕಪ್ಪು ಹಲಗೆಯ ತುಂಬಾ ಸಾವಿರಗಟ್ಟಲೆ ಸೊನ್ನೆಗಳನ್ನು ತುಂಬುವುದರಿಂದ ಹಿಡಿದು ಮಂಜುನಾಥ ಎಂಬ ಹೂ ಹೃದಯದ ಬಾಲಕನ ಕಥಾನಕದವರೆಗಿನ ವಿವರಗಳು ಈ ಅನುಸೂಯ ಎಂಬ ಹೆಣ್ಣು ಮಗಳು ಮುಂದೊಂದು ದಿನ ಕನ್ನಡದ ಶಕ್ತ ಗದ್ಯಗಾರ್ತಿಯಾಗಬಲ್ಲಳು ಎಂಬುದನ್ನು ಸೂಚ್ಯವಾಗಿ ಹೇಳುತ್ತಿದೆ. ಅನುಸೂಯ ಅವರಿಗೆ ಅಭಿನಂದನೆಗಳು.
“ನೀನಾ ಭಗವಂತ” ಎನ್ನುತ್ತಾ ಕನ್ನಡ ಸಿನಿ ಸಾಹಿತ್ಯಕ್ಕೆ ಹಂಸಲೇಖ ಕಾಲಿಟ್ಟು ಐವತ್ತು ವರ್ಷಗಳಾಗಿ ಹೋದವು, ಈ ವರ್ಷ ಹಂಸಾಭಿಮಾನಿಗಳಿಗೆ ಡಬಲ್ ಖುಷಿ, ಒಂದು ಕಡೆ ಹಂಸಲೇಖ ಕನ್ನಡ ಸಿನಿ ಸಾಹಿತ್ಯಕ್ಕೆ ಪಾದಾರ್ಪಣೆ ಮಾಡಿ ಐದು ದಶಕಗಳಾದರೆ, ಮತ್ತೊಂದು ಕನ್ನಡ ಸಂಸ್ಕೃತಿಯ ಹಬ್ಬ ದಸರಾಗೆ ಚಾಲನೆ ನೀಡಿದ್ದು ಹಂಸಲೇಖಾರೇ. ಈ ಡಬಲ್ ಖುಷಿಯನ್ನ ತ್ರಿಬಲ್ ಖುಷಿಯಾಗಿಸಲು ಈ ಪುಸ್ತಕ ಸಣ್ಣ ನೆಪವಷ್ಟೇ.
Showing 3271 to 3300 of 3416 results