
Category: | ಕನ್ನಡ |
Sub Category: | ಪ್ರವಾಸ ಕಥನ |
Author: | ಸಿಹಿಜೀವಿ ವೆಂಕಟೇಶ್ವರ | Sihijeevi Venkateshwara |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 978199014091 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಿಹಿ ಜೀವಿಯ ಪಯಣ..
ಸಿಹಿಜೀವಿ ಯಾವಾಗಲೂ ಪರರಿಗೆ ಮತ್ತು ಪ್ರಕೃತಿಗೆ ಸಿಹಿಯನ್ನೇ ಬಯಸುವ ಸಹೃದಯಿ. ಸಿಹಿಜೀವಿಯೆಂದೇ ಕರೆಯುವ ಸಿ.ಜಿ ವೆಂಕಟೇಶ್ವರ ಇವರು ಅತ್ಮೀಯ ಸಹೃದಯಿ ಮಿತ್ರ, ವಿಶಿಷ್ಟ ಅನುಭಾವಿಕ, ಬಹುಮುಖ ಪ್ರತಿಭೆಯ ಸಾಹಿತಿ ಸಾಹಿತ್ಯ, ಸಂಸ್ಕೃತಿ, ಪ್ರಕೃತಿ ಇವುಗಳ ಬಗ್ಗೆ ಸದಾ ಚಿಂತಿಸುವ ಇವರು ಸೃಜನಶೀಲ ಮನಸ್ಸಿನಿಂದ ತನ್ನ ಸುತ್ತಲ ಪರಿಸರವನ್ನು ನೋಡುವ, ಪ್ರಕೃತಿಯಲ್ಲಿ ಹೊಸತನ, ಹೊಸ ಚೈತನ್ಯವನ್ನು ಕಂಡುಕೊಂಡಿದ್ದಾರೆ. ತಾನು ಕಂಡ ಪ್ರಕೃತಿಯ ವಿಸ್ಮಯ ಮತ್ತು ಅಗೋಚರತೆಗಳನ್ನು ತನ್ನ ಸಾಹಿತ್ಯ ನುಡಿಗಳ ಮೂಲಕ ಇತರರಿಗೂ ರಸದೌತಣ ಬಡಿಸಿದ್ದಾರೆ. ಪ್ರಕೃತಿಯಲ್ಲಿ ಕಾಣುವ ಪ್ರತಿಯೊಂದು ನೋಟದಲ್ಲೂ ಹೊಸತನವನ್ನು ಕಂಡು ಹಿಡಿಯುವ ಇವರ ಜಾಣೆಗೆ ಮೆಚ್ಚಲೇಬೇಕು. "ರವಿ ಕಾಣದ್ದನ್ನು ಕವಿ ಕಂಡ" ಎಂಬಂತೆ ಕವಿ ಮನಸ್ಸಿನ ಇವರು ಪ್ರಕೃತಿಯ ಅಚ್ಚರಿಗಳನ್ನು ತಮ್ಮನುಡಿ ತೋರಣದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಇವರ ಜೊತೆ ನಾನು ಸಹ ಹಲವಾರು ಪ್ರದೇಶಗಳನ್ನು ಪ್ರವಾಸಿಸಿದ್ದೇನೆ. ಅಲ್ಲಿನ ನಿಖರ ಮಾಹಿತಿ, ವಿಶೇಷತೆಗಳನ್ನು ಸ್ವಾರಸ್ಯಕರವಾಗಿ ಚಿತ್ರಿಸುವಲ್ಲಿ ಸಿದ್ಧಹಸ್ತರು. ಫೋಟೋ, ವೀಡಿಯೋ ಈಗಿನ ಕಾಲದ ಏನೆಲ್ಲಾ ತಂತ್ರಜ್ಞಾನದಲ್ಲಿ ಜನಕ್ಕೆ ತಲುಪಿಸಬೇಕೊ ಎಲ್ಲವನ್ನೂ ರೂಪಾಂತರಿಸುವ ಇವರ ಆಸಕ್ತಿಯನ್ನು ಮೆಚ್ಚಲೇಬೇಕು. ಇವರ ಜೊತೆ ಪ್ರವಾಸ ಮಾಡುವುದೇ ಒಂದು ವಿಶಿಷ್ಟ ಅನುಭವ. ಇವರ ಜೊತೆಯಲ್ಲಿ ಪ್ರವಾಸ ಹೊರಟರೆ ಇವರ ಮುಂದಿನ ಸಾಹಿತ್ಯ ಕೃತಿಗಳಲ್ಲಿ ನಾವು ಕೂಡ ಒಬ್ಬ ಕಥಾ ರೂಪಕಗಳಾಗಿ ಪ್ರತಿಬಿಂಬಿಸುತ್ತೇವೆ. ಸಿಹಿಜೀವಿಯವರು ತಾವು ನೋಡಿ ಅನುಭವಿಸಿದ್ದನ್ನು ಇತರರು ಅನುಭವಿಸುವಂತಹ ಸಾಹಿತ್ಯ ಕೃತಿಗಳನ್ನು ನಾಡಿಗೆ ನೀಡಿದ್ದಾರೆ.ವಿದ್ಯಾರ್ಥಿಗಳಿಂದ ಹಿಡಿದು ಮುಪ್ಪಿನ ವ್ಯಕ್ತಿಗಳು ಮೆಚ್ಚುವಂತಹ ಇವರ ಸಾಹಿತ್ಯ ಕೃತಿಗಳು ಈಗ 28ಕ್ಕೆ ಮುನ್ನಡೆಯುತ್ತಿರುವುದು ಸಂತಸದ ವಿಷಯ. ಇವರ ಈ ಹಿಂದಿನ "ಕ್ಯಾತ್ಸಂದ್ರ ಟು ಖ್ಯಾತನಮಕ್ಕಿ" ಪ್ರವಾಸ ಕಥನವನ್ನು ಓದಿದ್ದೇನೆ. ಮತ್ತೊಂದು ಪ್ರವಾಸ ಕಥನ 'ಸಿಹಿ ಜೀವಿ ಕಂಡ ಅಂಡಮಾನ್" ಕೃತಿಯಲ್ಲಿ ಅಲ್ಲಿನ ಪ್ರಕೃತಿ. ಇತಿಹಾಸ, ಸ್ಥಳೀಯ ಮಹತ್ವದ ಬಗ್ಗೆ ಅನುಭವಿಸಿ, ಆನಂದಿಸಿ ನಮಗೂ ಉಣಬಡಿಸಿದ್ದಾರೆ. ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಅಂಡಮಾನ್ ದ್ವೀಪ ಸಮೂಹಗಳನ್ನು ಸುತ್ತಾಡಿ ಅವರು ಕಂಡ ಅನುಭವಗಳ ಗುಚ್ಛ ರೋಮಾಂಚನಗೊಳ್ಳುವಂತಿವೆ.
- ಕೋಟೆ ಕುಮಾರ್ ಕಲಾವಿದರು, ತುಮಕೂರು
ಸಿಹಿಜೀವಿ ವೆಂಕಟೇಶ್ವರ | Sihijeevi Venkateshwara |
0 average based on 0 reviews.