| Category: | ಕನ್ನಡ |
| Sub Category: | ಕವನಗಳು |
| Author: | ಈ. ನರಸಿಂಹ ಉಡಮಕಲ್ | E. Narasimha Udamakal |
| Publisher: | ಪಲ್ಲವಿ ಪ್ರಕಾಶನ, ಉಡಮಕಲ್ | Pallavi Prakashana, Udamakal |
| Language: | Kannada |
| Number of pages : | |
| Publication Year: | 2025 |
| Weight | 200 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಭತ್ತದ ನಾಡು ಗಂಗಾವತಿಯ ಉಡಮಕಲ್ ಗ್ರಾಮದ ಯುವ ಪ್ರತಿಭೆ ಈ ನರಸಿಂಹ ಉಡಮಕಲ್ ಅವರು ಗ್ರಾಮೀಣ ನೆಲೆಗಟ್ಟಿನ ಸಂಸ್ಕೃತಿಯನ್ನು ನೋಡಿ, ಕಲಿತು ಅದನ್ನೆ ಅಕ್ಷರಗಳ ರೂಪದಲ್ಲಿ ಸೆರೆ ಹಿಡಿದು ಸಾಹಿತ್ಯ ಕ್ಷೇತ್ರದಲ್ಲಿ ಭರವಸೆಯ ಅಕ್ಷರ ಪ್ರೇಮಿಯಾಗಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ಸಂಗತಿ. ಬಡತನ, ಹಸಿವು, ಹವಾಸ, ಆಸೆ. ಪ್ರೀತಿ, ಮಮಕಾರವನ್ನೆಲ್ಲಾ ಸ್ನೇಹದಿಂದ ಅಂತರಾಳದ ಗೂಡಿನಲ್ಲಿ ಬಚ್ಚಿಟ್ಟುಕೊಂಡು ಈ ನೆಲದ ನುಡಿ, ಕಲಾ ಸೇವೆಯ ಮೂಲಕ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ. ಸಂಘಟನಾ ಮನೋಭಾವದ ಸರಳ ಮುಗ್ಧತೆಯ ಬಹುಮುಖ ಪ್ರತಿಭೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು, ವ್ಯಕ್ತಿಗಿಂತ ವ್ಯಕ್ತಿತ್ವ ದೊಡ್ಡದು ಎಂಬುವ ಮಾತಿಗೆ ಸಾಟಿಯಾಗುವ ಯುವ ಉತ್ಸಾಹಿ ಈ ನರಸಿಂಹ ಉಡಮಕಲ್ ರವರು ಕಾಯಕತತ್ವದ ಮೂಲಕ ಸಮಾಜ ತಿದ್ದುವ ಇವರ ಹಂಬಲವು ಹಸನಾಗಿ ಹಬ್ಬಲಿ ಬಳ್ಳಿಯಂತೆ, ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬಂತೆ ಇವರ ಚೊಚ್ಚಲ ಕೃತಿಯಾದ 'ಸಿರಿನೋಟವು ಭಾವನೆಗಳನ್ನು ಹಿಡಿದಿಟ್ಟ ಅಕ್ಷರದ ಹೂರಣವಾಗಿದ್ದು ಓದುಗರ ಕೈ ಸೇರಿ ಜನಮಾನಸವಾಗಲಿ.
ಡಾ. ಬಿ.ಎನ್. ಹೊರಪೇಟಿ
ಸಂಸ್ಥಾಪಕರು ಪೈಬ್ರಿಡ್ ನ್ಯೂಸ್
ಈ. ನರಸಿಂಹ ಉಡಮಕಲ್ | E. Narasimha Udamakal |
0 average based on 0 reviews.