• Welcome to Our store Veeraloka Books
  • Call Us : +91 7022122121 / +91 8861212172
  • Welcome to Our store    Veeraloka Books
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
ಬದುಕೇ ಭಗವಂತ ಇಬುಕ್

ಬದುಕೇ ಭಗವಂತಡಾ. ಶ್ರೀನಿವಾಸ ಪ್ರಸಾದ್ ಅವರು ಈ ವಿಶಿಷ್ಟ ಪುಸ್ತಕದಲ್ಲಿ ಜೀವನದ ಒಳ್ಳೆಯತನಗಳನ್ನು ಪರಿಚಯಿಸುವಾಗ ಅನೇಕ ಲೇಖಕರ ಮತ್ತು ಕವಿಗಳ ಕೃತಿಗಳನ್ನು ಕೂಡ ಪರಿಚಯಿಸುತ್ತಾರೆ. ಶ್ರೀಯುತರಾದ ತರಾಸು ಅನಕೃ ಎಸ್ ಕೆ ಕರೀಂಖಾನ್ ಮುಂತಾದವರ ಜೀವನದ ಮೇಲೆ ಒಂದಿಷ್ಟು ಬೆಳಕು ಚೆಲ್ಲುತ್ತಾರೆ. ಅವರು ಸಂದರ್ಭಕ್ಕೆ ತಕ್ಕಂತೆ ಉದಾಹರಣೆ ನೀಡಿರುವ ಖ್ಯಾತ ಕವಿಗಳ ಕವನಗಳ ಸಾಲು ನಮ್ಮಲ್ಲಿ ಚಿಂತನೆ ಉಂಟುಮಾಡುತ್ತದೆ. ಈ ಲೇಖನಮಾಲೆ ಪದೇ ಪದೇ ಓದುತ್ತಲೇ ಇರುವಂತಹದ್ದು.

₹170   ₹85

ಮಂಡ್ಯ ರಮೇಶ್ ನಟನ ಕಥೆ ಇಬುಕ್

ನಟನ ಕಥೆ. ಮಂಡ್ಯ ರಮೇಶ್ ಕಟ್ಟಿದ ನಾಟಕ ಕೂಟದ ಸಾಹಸಗಾಥೆ. ಭೂಮಿ ಪಡೆಯುವುದರಿಂದ ಕಟ್ಟಡ ಕಟ್ಟುವವರೆಗಿನ ಬವಣೆಗಳು ಮನಸ್ಸನ್ನು ತಟ್ಟುತ್ತವೆ. ಜೊತೆಗೆ ಮಂಡ್ಯ ರಮೇಶ್ ಅವರ ಅಂಕಿತ ಭಾವ, ಪಾತ್ರಧಾರಿಗಳಿಂದ ಪರಿಪೂರ್ಣ ಅಭಿನಯಕ್ಕೆ ತರಬೇತಿ ಅನನ್ಯ. ಅವರ ವಿದೇಶ ಪ್ರವಾಸ… ಅವರ ವಿನೀತ ಭಾವ… ಅವರ ಪುಸ್ತಕ ಪಠಣ ಮುದ ನೀಡುತ್ತವೆ. ಕನ್ನಡ ಸ್ಪಷ್ಟವಾಗಿ ಮಾತಾಡಲು ಬರದ ಮಕ್ಕಳು ರಜಾಮಜಾ ಕೂಟ ಸೇರಿ ವೇದಿಕೆ ಹತ್ತುವ ಭಯ ಕಳೆದು ನಟಿಸುವುದು… ಹ್ಯಾಟ್ಸ್ ಆಫ್ ಟು ಮಂಡ್ಯ ರಮೇಶ್.

₹250   ₹125

ಮನಿ ಮನಿ ಎಕಾನಮಿ ಇಬುಕ್

ವಿತ್ತ ಜಗತ್ತಿನ ಬರಹಗಾರರಾಗಿ ಖ್ಯಾತರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಪುಸ್ತಕವೇ ‘ಮನಿ ಮನಿ ಎಕಾನಮಿ.’ ಇದು ಬ್ಯಾಂಕಿಂಗ್, ಹಣಕಾಸು ಕ್ಷೇತ್ರ ಕುರಿತ ಮಾಹಿತಿಪೂರ್ಣ ಪುಸ್ತಕವಾಗಿದೆ. ವಿತ್ತ ಜತ್ತಿನ ಆಗುಹೋಗುಗಳನ್ನು ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಿಳಿದುಕೊಳ್ಳುವ ಅಗತ್ಯವಿದೆ. ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಲೇಖಕರು ಹಲವು ಉಪಯುಕ್ತ ಮಾಹಿತಿಯ ಲೇಖನಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಸಾಮಾನ್ಯ ಪ್ರಜೆಗಳಿಗೂ ಉಪಯುಕ್ತ ಪುಸ್ತಕ ಇದಾಗಿದೆ.

₹160   ₹80

ಮಾದಕ ದೊರೆ ಇಬುಕ್

ಕೇವಲ ಮಾದಕ ವಸ್ತುಗಳ ಮಾರಾಟ ಮಾಡಿ ಕೋಟಿಗಟ್ಟಲೆ ಹಣ ಮಾಡಿರುವವರು ಇದ್ದಾರೆ. ಆದರೆ ಪಾಬ್ಲೊ ಕೇವಲ ಮಾದಕ ದೊರೆ ಮಾತ್ರ ಅಲ್ಲ. ಅವನ ಜನರ ಆರಾಧ್ಯ ದೈವ. ಅಮೆರಿಕ ಸರ್ಕಾರಕ್ಕೆ ತಲೆನೋವಾಗಿ… ಕೊನೆಗೆ ತನ್ನ ದೇಶದ ಮಕುಟವಿಲ್ಲದ ಮಹಾರಾಜನಾದ. ಪಾಬ್ಲೊನ ಗೆಳತಿಯರು… ಮಕ್ಕಳು… ಅವನ ದೊಡ್ಡ ವಿಲ್ಲಾ.. ಅವನನ್ನು ಹಿಡಿಯಲು ಪ್ರಯತ್ನಿಸಿದ ಅಧಿಕಾರಿಗಳು. ರೋಚಕ ನಿರೂಪಣೆ.

₹375   ₹188

ಮೆಮರೀಸ್ ಆಫ್ ಬಾರ್ಸ ಇಬುಕ್

ಆಸ್ಕರ್ ಟಿವಿಯಲ್ಲಿ 1992ರ ಬಾರ್ಸಿಲೋನಾ ಒಲಂಪಿಕ್ಸ್ ಹೈಲೈಟ್ಸ್ ಹಲ್ಲು ಕಿಸಿದು ಕೊಂಡು ನೋಡಿದ ನೆನಪು ಅಚ್ಚಳಿಯದೆ ಮಸ್ತಕದಲ್ಲಿ ಅಚ್ಚಾಗಿದೆ. ಅವತ್ತಿಗೆ ಯಾರಾದರೂ ಇನ್ನೊಂದು ಹತ್ತು ವರ್ಷದಲ್ಲಿ ಈ ಒಲಂಪಿಕ್ ಆಟಗಾರರಿಗೆ ಎಂದು ಕಟ್ಟಿರುವ ಸುಸಜ್ಜಿತ ಮನೆಯೊಂದರ ಒಡೆಯ ನೀನಾಗುತ್ತೀಯ ಎಂದಿದ್ದರೆ ಹುಚ್ಚಾಪಟ್ಟೆ ನಕ್ಕು, ಹಂಗಿಸುವುದಕ್ಕೂ ಒಂದು ಮಿತಿ ಇರುತ್ತೆ ಗೆಳೆಯ ಎಂದು ಹೇಳಿ ಕಳಿಸುತ್ತಿದ್ದೆ. ಆದರೆ ದೈವೇಚ್ಛೆ ಬೇರೆಯಿತ್ತು, ಬಾರ್ಸಿಲೋನಾದಲ್ಲಿ ಒಂದಕ್ಕಿಂತ ಹೆಚ್ಚು ಮನೆಕೊಳ್ಳುವಂತಾಯ್ತು. 17 ವರ್ಷ ಬಾರ್ಸಿಲೋನಾ ನೆಲೆಯಾಯ್ತು, ಭಾಷೆ, ಬದುಕುವ ರೀತಿ, ಈ ಅಗಾಧ ಪ್ರಪಂಚದಲ್ಲಿ ನಾವೇನೂ ಅಲ್ಲ ಎನ್ನುವುದನ್ನ ಕಲಿಸಿತು.ಸಹಜೀವಿಗಳ ಬಗ್ಗೆ ಪ್ರೀತಿ, ಮಮಕಾರ ಕೂಡ ಕಲಿಸಿದ್ದು ಬಾರ್ಸಿಲೋನಾ. ಈ ಪುಸ್ತಕದಲ್ಲಿ, ಬಾರ್ಸಿಲೋನಾ ನನಗೆ ಉಣಬಡಿಸಿದ ಅನುಭವಗಳ ಕಥೆಯನ್ನ ಕಟ್ಟಿಕೊಟ್ಟಿದ್ದೇನೆ.

₹160   ₹80

ಮೇರುನಟ ಇಬುಕ್

`ಒಬ್ಬ ತಾರೆಯ ಎಂಟ್ರಿ ಮತ್ತು ಎಗ್ಸಿಟ್ ಅದ್ಭುತವಾಗಿರಬೇಕು; ನೆನಪಿನಲ್ಲಿಡುವಂತಿರಬೇಕು’ ಎಂದು ಚಿತ್ರರಸಿಕರ ಮನದ ಅನಭಿಷಿಕ್ತ ದೊರೆಯಾಗಿ ಮೆರೆದ ಡಾ. ವಿಷ್ಣುವರ್ಧನ್ ಯಾವಾಗಲೂ ಹೇಳುತ್ತಿದ್ದರು. ಆದರೆ, ಅವರ ಜೀವನದಲ್ಲೇ ಅದು ಅರ್ಧಂಬರ್ಧ ರೀತಿಯಲ್ಲಿ ನಡೆದು ಹೋಯಿತು. `ನಾಗರಹಾವು’ ರಾಮಾಚಾರಿಯ ಎಂಟ್ರಿ ಅದ್ಭುತವಾಗಿಯೇ ಇತ್ತು. ನಂತರದ ದಿನಗಳಲ್ಲಿ ಆ ರೋಚಕ ಗೆಲುವೇ ಅವರಿಗೆ ಶಾಪವಾಯಿತು. ಬಂದಿದ್ದ ಆ ಯಶಸ್ಸನ್ನು ಸಂಭ್ರಮಿಸುವುದಕ್ಕೆ ಹಿತಶತ್ರುಗಳು ಬಿಡಲೇ ಇಲ್ಲ.

₹120   ₹60

ಯಾರು ಹೇಳದ ಕಥೆಗಳು ಇಬುಕ್

ಕನ್ನಡದಲ್ಲಿ ಸಣ್ಣಕಥೆಗ ಆಗೀಗ ದೆಸೆ ತಿರುಗಿ, ಕಥಾಸ್ಪರ್ಧೆಯ ಮೊತ್ತಬೀಗ ಅರ್ಧ ಲಕ್ಷ ಮುಟ್ಟದೆ. ಇದು ಯುವ ಕಥೆಗಾರರಿಗೆ ಇಂಬಾಗುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಹೌದು, ಐದುನೂರು ರೂಪಾಯಿಯಿಂದ ಐವತ್ತು ಸಾವಿರದವರೆಗೆ ನಮ್ಮ ಹಣ್ಣಕಥೆಗಳನ್ನು ವಿಸ್ತರಿಸುತ್ತಿರುವ ಪತ್ರಿಕೆಗಳು ಮತ್ತು ಪ್ರಾಯೋಜಕರು ಪ್ರಶಂಸಾರ್ಹರು.

₹150   ₹75

ಲಾಸ್ಟ ಡೇಸ್ ಆಫ್ ಲೆಜೆಂಡ್ಸ್ ಇಬುಕ್

ಕನ್ನಡದ ಪ್ರಸಿದ್ಧ ಲೇಖಕರು, ಪತ್ರಕರ್ತರು ಆದ ಗಣೇಶ್ ಕಾಸರಗೋಡು ಅವರು ಬರೆದಿರುವ ‘ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್’ ಪುಸ್ತಕವಿದು. ಈ ಪುಸ್ತಕ ಓದುತ್ತಾ ಹೋದರೆ ಸದಾ ಕಾಡುವ ಕಲಾವಿದರ ಕಥಾನಕ ನಿಮ್ಮದಾಗುತ್ತದೆ. ಕನ್ನಡ ಚಿತ್ರರಂಗದ ಲೆಜೆಂಡ್‌ಗಳ ಕೊನೆಯ ದಿನಗಳ ಚಿತ್ರಣ ಇಲ್ಲಿದೆ. ನಿಮ್ಮ ಇಷ್ಟ ಕಲಾವಿದರ ಬಗ್ಗೆ ನೀವಿಲ್ಲಿ ಓದಿದ ಮೇಲೆ ನಮ್ಮ ಮನಸ್ಸು ಮೂಕವಾಗುತ್ತೆ. ಈ ಪುಸ್ತಕ ಭಾವಸ್ಪರ್ಶಿಯಾಗಿದೆ, ಹೃದಯಸ್ಪರ್ಶಿಯಾಗಿದೆ. ಕಲಾವಿದರ ಹೃದಯವಿದ್ರಾವಕ ಘಟನೆಗಳ ಚಿತ್ರಣ ನಮ್ಮ ಕರುಳು ಹಿಂಡಿ ಮನಕಲಕುತ್ತವೆ. ಒಂದು ಕಾಲದಲ್ಲಿ ತೆರೆಯ ಮೇಲೆ ಮಿಂಚಿದವರು ಇನ್ನೊಂದು ಕಾಲದಲ್ಲಿ ಹಲವು ಸಂಕಷ್ಟಗಳಿಂದ ನರಳುವ ಕಥಾನಕ ನಮ್ಮ ಮನ ಕರಗಿಸಿಬಿಡುತ್ತದೆ.

₹225   ₹113

ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ ಇಬುಕ್

ಬೇರೆಯವರಿಗೆ ಕತೆ ಹೇಳುವ,ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿದಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ.

₹120   ₹60

ವಿಶ್ವಯಾನಕ್ಕೆ ಗಣಿತವಾಹನ ಇಬುಕ್

ಒಂದು… ಎರಡು… ಮೂರು… ಈ ಎಣಿಕೆಗೆ ಕೊನೆ ಎಲ್ಲಿದೆ? ಅಥವಾ ಕೊನೆಯೇ ಇಲ್ಲವೇ? ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ. ಗಣಿತಲೋಕಕ್ಕೂ ಭೌತಶಾಸ್ತ್ರಕ್ಕೂ ಇರುವ ಅವಿನಾಭಾವ ಸಂಬಂಧ ಎಂಥದ್ದು? ನಮಗೆ ಒಬ್ಬ ಚಂದಮಾಮ ಇದ್ದಾನೆ. ಬೇರೆ ಗ್ರಹಗಳಲ್ಲಿ ಮನುಷ್ಯರಿದ್ದರೆ, ಅಲ್ಲಿನ ತಾಯಂದಿರು ಮಕ್ಕಳಿಗೆ ತೋರಿಸಲು ಎಷ್ಟೊಂದು ಚಂದಮಾಮಗಳು! ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ‘ವಿಶ್ವಯಾನಕ್ಕೆ ಗಣಿತವಾಹನ’ ಪುಸ್ತಕ ಓದಿ…

₹200   ₹100

ವಿಶ್ವಸುಂದರಿ ಇಬುಕ್

ಕನ್ನಡದ ಪ್ರಸಿದ್ಧ ಲೇಖಕರಾದ ಕುಂ. ವೀರಭದ್ರಪ್ಪ ಅವರು ಬರೆದಿರುವ ವಿನೂತನ ಕಾದಂಬರಿ ಇದಾಗಿದೆ. ಕುತೂಹಲ ಕಥಾವಸ್ತು ಹೊಂದಿರುವ ಕಾದಂಬರಿ ರೋಚಕವಾಗಿದೆ. ಹಲವು ಫ್ಯಾಂಟಸಿ ಕಥೆಗಳ ಮೂಲಕ ಶತಮಾನದ ‘ವಿಶ್ವಸುಂದರಿ’ ಪಾತ್ರಧಾರಿಯಾಗಿರುವ ಅಜ್ಜಿ ನಿಮ್ಮನ್ನು ಆವರಿಸಲಿದ್ದಾಳೆ. ನಿಮಗೆ ಸುಲಭವಾಗಿ ಓದಿಸುವ ನಿಟ್ಟಿನಲ್ಲಿ ಲೇಖಕರು ಭಾಷೆ, ಶೈಲಿಯನ್ನು ಸರಳೀಕರಿಸಿ ಬರೆದಿದ್ದಾರೆ. ಒಮ್ಮೆ ನೀವು ಕಾದಂಬರಿಯ ಪುಟಗಳನ್ನು ಓದಲು ಶುರು ಮಾಡಿದರೆ ಸಾಕು ಕೊನೆತನಕ ಓದಿಸಿಕೊಳ್ಳುವ ಗುಣವಿದೆ. ಕನ್ನಡಿಗರಾದ ನೀವು ಈ ಕಾದಂಬರಿಯನ್ನು ಓದಲೇಬೇಕು, ಇದರಿಂದ ನಿಮಗೆ ಎಷ್ಟೊಂದು ಮನರಂಜನೆ ಸಿಗುತ್ತದೆ ಎಂಬುದು ಗೊತ್ತಾಗುತ್ತದೆ. ಅಷ್ಟೊಂದು ಚೆಂದವಿದೆ ಕಾದಂಬರಿ.

₹160   ₹80

ಸೋಲೆಂಬ ಗೆಲುವು ಇಬುಕ್

ಕನ್ನಡದ ಪ್ರತಿಭಾಶಾಲಿ ಲೇಖಕಿ, ಅಧ್ಯಾಪಕರಾದ ದೀಪಾ ಹಿರೇಗುತ್ತಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನದ ಬರಹದ ಪುಸ್ತಕ ಇದಾಗಿದೆ. ಜೀವನದಲ್ಲಿ ಸೋಲು, ಗೆಲುವು ಸಹಜ. ಗೆಲುವಿನಿಂದ ನಾವು ಪಾಠ ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಪಾಠ ಕಲಿಸುತ್ತೆ. ಅದಕ್ಕೇ ಲೇಖಕರು ಇಲ್ಲಿ ‘ಸೋಲೆಂಬ ಗೆಲುವು’ ಎಂಬ ಹೆಸರನ್ನು ಪುಸ್ತಕಕ್ಕೆ ಇಟ್ಟಿದ್ದಾರೆ. ಹಲವು ಸಾಧಕರ ಹಿಂದೆ ನೋವು, ಅಪಮಾನ, ತಾತ್ಸಾರ, ನಿಂದನೆಗಳು ಇರುತ್ತವೆ. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಛಲ ಬಿಡದೆ ತನ್ನ ಗುರಿ ಸಾಧನೆಗಾಗಿ ಮುನ್ನುಗ್ಗುವವನೇ ನಿಜವಾದ ಸಾಧಕ ಆಗುತ್ತಾನೆ ಎಂಬ ಗುಣಾಂಶ ಈ ಪುಸ್ತಕದಲ್ಲಿದೆ. ಅಂತಹ ಮಹಾನ್ ಸಾಧಕರ ಜೀವನ ಚಿತ್ರಣ ಇಲ್ಲಿದೆ. ಇವರೆಲ್ಲರೂ ಪುಸ್ತಕ ಓದುವವರಿಗೆ ಸ್ಫೂರ್ತಿ, ಪ್ರೇರಣೆ ನೀಡುತ್ತಾರೆ.

₹150   ₹75

ಹಿಂದಿನ ನಿಲ್ದಾಣ ಇಬುಕ್

ಕರಾವಳಿಯ ಪುಟ್ಟ ಊಲಗೆ ಮಾತ್ರ ಲಗತ್ತಾಗುವ ಈ ಚಿಟಿಜ ನೋಟಗಳು, ಜೀವಗಳು ಈಗ ಅಲ್ಲಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು ಮುಂದೊಮ್ಮೆ ಹೊಸಕಾಲದ ಹೊಸಪೀಱಗೆಯ ಕುತೂಹಲದ ಹಾಗೆ ಬೆಚ್ಚನೆಯ ಹೊಏಕಯಾಗಿ ಒದಗಬಹುದು, ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಭೀಜಗಳವೆ,

₹120   ₹60

ಹೃದಯದ ಮಾತು ಇಬುಕ್

ಅಸಲಿಗೆ ಹೃದಯವೆಂದರೆ ಏನು? ಪ್ರೀತಿ, ದ್ವೇಷ, ಕೋಪ-ತಾಪ, ಆಘಾತ ಎಲ್ಲವನ್ನೂ ಯಾಕೆ ಹೃದಯಕ್ಕೆ ಸಮೀಕರಿಸುತ್ತೇವೆ? ‘ಅವನು ಬಹಳ ಹೃದಯವಂತ ಬಿಡಲೇ’ ಎಂದು ಮೆಚ್ಚುಗೆಯಿಂದ ಮಾತನಾಡುವ ನಾವು ‘ತೀರಾ ನೊಂದ ಹೃದಯ ಕಣೋ ಅವಳದ್ದು!’ ಎಂದೂ ಉದ್ಗಾರ ತೆಗೆಯುತ್ತೇವೆ. ಅಂದರೆ ಒಂದು ಮುಟಿಗೆಯಷ್ಟಿರುವ ಅದು ಕೇವಲ ರಕ್ತ-ಮಾಂಸದ ಮುದ್ದೆ ಅಲ್ಲ. ನಾವು ಎದುರಿಸುವ ಎಲ್ಲ ಆಘಾತಗಳ ‘ಶಾಕ್ ಅಬ್ಬರ್ವರ್’ ಅದು. ಹೃದಯವೆಂದರೆ ಮನಸ್ಸು ಕೂಡ ಹೌದು. ನಮ್ಮ ಇಡೀ ದೇಹದ ‘ಜೀವ’ ಭದ್ರವಾಗಿರುವುದು ಈ ಕವಾಟದಲ್ಲಿ. ಮನಸ್ಸು ಮತ್ತು ಹೃದಯ ಒಂದೇ ದೇಹದ ಎರಡು ಮುಖಗಳು. ಮನಸ್ಸು ಕುದ್ದು ಹೋದರೆ ಹೃದಯವೆಂದೂ ಹಿರಿಹಿರಿ ಹಿಗ್ಗುವುದಿಲ್ಲ. ನಮ್ಮ ಭಾವಕ್ಕೆ ಧಕ್ಕೆಯಾದರೆ ಅದರ ನೇರ ಪರಿಣಾಮ ಬೀರುವುದು ಹೃದಯದ ಮೇಲೆ, ಒಬ್ಬ ಕವಿ ಹೃದಯಕ್ಕೆ ರಮ್ಯತೆಯ ಪ್ರಭಾವಳಿಯನ್ನು ತೊಡಿಸುತ್ತಾನೆ. ಅದು ಸದಾ ನೆಮ್ಮದಿಯ ಗೂಡಾಗಿರಲಿ ಎಂದು ಅದನ್ನು ಪ್ರೀತಿಯಿಂದ ಅದ್ದಿ ತೆಗೆಯುತ್ತಾನೆ. ಆದರೆ ಒಬ್ಬ ವೈದ್ಯ ಅದರ ಕವಾಟದಲ್ಲಿ ಸರಿಯಾಗಿ ರಕ್ತದ ಚಲನೆ ನಡೆಯುತ್ತಿದೆಯೇ ಎಂದು ನೋಡುತ್ತಾನೆ. ಅದಕ್ಕೆ ಯಾವುದೇ ರೀತಿಯಲ್ಲಿ ಆಘಾತವಾಗದಂತೆ ವಹಿಸಬೇಕಾದ ಎಚ್ಚರಿಕೆಗಳನ್ನು ಸೂಚಿಸುತ್ತಾನೆ. ಹಾಗೆ ನೋಡಿದರೆ ಇಬ್ಬರದ್ದೂ ಚಿಕಿತ್ಸಕ ದೃಷ್ಟಿಕೋನವೇ ಆಗಿದೆ.

₹160   ₹80