nil
ನಮಗೆ ಜನ್ಮ ಕೊಟ್ಟ ತಾಯಿ ತಂದೆಯ ಋಣ ತೀರಿಸಲು ಸಾಧ್ಯವಿಲ್ಲ; ಭಾಮಳಿಗೆ ತನ್ನ ಅಪ್ಪನ ಸಂಧ್ಯಾಕಾಲದಲ್ಲಿನ ಜೀವನ ಚೇತೋಹಾರಿಯಾಗಿಡಲು ಹಾಗೂ ನೆಮ್ಮದಿಗೆ ಎಡೆ ಮಾಡಿಕೊಡಲು ಋಣ 'ಪ್ರಾಪ್ತಿ' ಆಗಿದ್ದು ಸಂತೋಷವೆನಿಸಿತು. ಈ ಧಾರಾವಾಹಿಯಲ್ಲಿನ ಪ್ರತಿಯೊಂದು ಪಾತ್ರವೂ ವಾಸ್ತವಿಕತೆಗೆ ಹತ್ತಿರವಾಗಿದೆ. ಟಿ.ಎಸ್. ಪ್ರತಿಭಾ, ಚಿತ್ರದುರ್ಗ ಮನೋಜ್ಞವಾಗಿ ಓದಿಸಿಕೊಂಡು ಹೋದ ಧಾರಾವಾಹಿ ಇಷ್ಟು ಬೇಗ ಮುಗಿಯಿತೇ ಅಂತ ಅನ್ನಿಸಿತು. ಕಾದಂಬರಿಯಲ್ಲಿ ಬರುವ ಚಿದಾನಂದ, ಸತ್ಯಭಾಮ, ಭಾರ್ಗವ. ಶೀಲಾ ಈ ಪಾತ್ರಗಳ ವ್ಯಕ್ತಿತ್ವ ನಿರೂಪಣೆ ಸಹಜವಾಗಿದೆ. ಜೀವನದಿಂದ ಆರಿಸಿ ತೆಗೆದಂತೆ ಇದೆ. ಸತ್ಯಭಾಮ ಅಪ್ಪನನ್ನು ಅನುಮಾನಿಸುವ ವಯಸ್ಸಿನಿಂದ ಮೊದಲ್ಗೊಂಡು, ಜೀವನದ ಅನುಭವಗಳಿಂದ ಮಾಗಿ, ಕೊನೆಗೆ ಅಪ್ಪನನ್ನು ಒಪ್ಪಿಕೊಳ್ಳುವ, ತನ್ನ ಬಳಿಯೇ ಇರಿಸಿಕೊಳ್ಳುವ ಪರಿ ಅನನ್ಯವಾಗಿದೆ. - ಬಿ.ವಿ. ರಾಜಲಕ್ಷ್ಮಿ, ಬೆಂಗಳೂರು ಧಾರಾವಾಹಿ ಮನಮುಟ್ಟುವಂತಿತ್ತು. ತನ್ನ ಅಪ್ಪನನ್ನು ಧಿಕ್ಕರಿಸಿ ಅಂತರ್ಜಾತಿ ವಿವಾಹವಾಗಿ ಮಾನಸಿಕ ಯಾತನೆ ಅನುಭವಿಸಿ, ಸುಗಮ ಬದುಕು ಕಂಡುಕೊಂಡ ಭಾಮ, ತನ್ನ ಅಪ್ಪನನ್ನು ಕರೆತರಲು ವೆಂಕಟೇಶನೊಂದಿಗೆ ಚರ್ಚಿಸಿದಾಗ, ನಾಳೆ ನಮಗೂ ಇಂತಹ ಸ್ಥಿತಿ ಬರಬಹುದು. ನಾಳೆ ನಮ್ಮ ಮಗಳು ನಮ್ಮನ್ನು ನೋಡಿಕೊಳ್ಳಬೇಕು. ನಾವು ಅವರಿಗೆ ಮೇಲ್ಪಂಕ್ತಿ ಆಗಬೇಕೆ ಹೊರತು ತಪ್ಪು ಮಾದರಿ ಆಗಬಾರದು ಎಂಬ ವೆಂಕಟೇಶನ ಉದಾತ್ತ ಮಾತುಗಳಿಂದ ಭಾಮಾಳ ಹೃದಯ ತುಂಬಿ ಬಂದು ತನ್ನ ತಂದೆಯನ್ನು ಕರೆತರುವ ನಿರ್ಧಾರ ಮಾಡಿದ್ದು ಶ್ಲಾಘನೀಯ. ಎಂ. ಟಿ. ರಮಾನಂದ ರೆಡ್ಡಿ, ಚಿತ್ರದುರ್ಗ ಧಾರಾವಾಹಿ ಕೊನೆಯ ಕಂತಿನಲ್ಲಿ ಗಳಗಳನೆ ಅಳುವಂತೆ ಮಾಡಿಬಿಟ್ಟಿತು. ಮನುಷ್ಯ ಸಂಬಂಧಗಳ ಅನಾವರಣ ಎಷ್ಟು ಚೆನ್ನಾಗಿತ್ತೆಂದರೆ ವಸುಮತಿ ಉಡುಪರಿಗೆ ಮಾತ್ರ ಸಾಧ್ಯವೇನೋ ಇಂತಹ ಬರವಣಿಗೆ ಎನಿಸಿತು.
Showing 451 to 480 of 751 results