
Category: | ಕನ್ನಡ |
Sub Category: | ಕಾದಂಬರಿ |
Author: | ಕುಮಾರಸ್ವಾಮಿ ತೆಕ್ಕುಂಜ | Kumaraswamy Tekkunja |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 300 |
ISBN | 919606474289-12 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಬದುಕು ಮಾಯೆಯ ಮಾಟ
>
ಕುಮಾರಸ್ವಾಮಿ ತೆಕ್ಕುಂಜ
'ಬದುಕು ಮಾಯೆಯ ಮಾಟ ಕುಮಾರಸ್ವಾಮಿ ತೆಕ್ಕುಂಜ ಅವರ ನಾಲ್ಕನೆಯ ಕಾದಂಬರಿ, ಅವರ ಈ ಹಿಂದಿನ ಮೂರು ಕಾದಂಬರಿಗಳು ಪೌರಾಣಿಕ ಮತ್ತು ಐತಿಹಾಸಿಕ ಕಥಾವಸ್ತುಗಳನ್ನು ಹೊಂದಿದ್ದವು. ಕಾದಂಬರಿಯ ಮೂಲಕ ಅವರು ಸಾಮಾಜಿಕ ಕಥಾವಸ್ತುವನ್ನು ತಂದಿದ್ದಾರೆ. ಹದಿಹರೆಯದ ಹಸಿಮನಸ್ಸಿನ ಲೀಲೆಯಿಂದಾಗಿ ಕಾಲುಜಾರುವ ಹೆಣ್ಣು ಮಗಳೊಬ್ಬಳು ಮುಂಬೈ ಮಹಾನಗರದಲ್ಲಿ ಬದುಕು ಕಟ್ಟಿಕೊಳ್ಳುವ ಚಿತ್ರಣವಿರುವ ಈ ಕಾದಂಬರಿಯು ಬೇರೆ ಬೇರೆ ನೆಲೆಗಳಲ್ಲಿ ಮನುಷ್ಯನ ಬದುಕು ಮತ್ತು ಮನುಷ್ಯ ಸಂಬಂಧಗಳ ಹುಡುಕಾಟವನ್ನು ನಡೆಸುತ್ತದೆ.
'ಬದುಕು ಮಾಯೆಯ ಮಾಟ' ಕಾದಂಬರಿಯ ಬಹುಭಾಗ ಸುಮಾರು ಎಂಬತ್ತು-ತೊಂಬತ್ತರ ದಶಕದ ಮುಂಬೈಯಲ್ಲಿ ನಡೆಯುತ್ತದೆ. ಇದರಲ್ಲಿ 'ಒಣವಾಸ'ದಿಂದ ತಾಯ್ಯಾಡಿಗೆ, ಮಹಾನಗರದಲ್ಲಿ ಅಜ್ಞಾತವಾಸ, ಹೆತ್ತವರ ಹುಡುಕಾಟದಲ್ಲಿ ಎಂಬ ಮೂರು ಭಾಗಗಳಿವೆ. ಮೊದಲ ಎರಡು ಭಾಗಗಳಲ್ಲಿ ಪುಷ್ಪ ಯಾನೆ ಪೂಜಳ ಬಾಲ್ಯ ಮತ್ತು ಮುಂಬೈಯಲ್ಲಿ ಆಕೆ ಬದುಕು ಕಟ್ಟಿಕೊಂಡದ್ದರ ಕುರಿತ ವಿವರಗಳಿದ್ದರೆ, ಕೊನೆಯ ಭಾಗದಲ್ಲಿ ಆಕೆಯ ಸಾಕುಮಗಳಾದ ಸೋನಾಲಿಯ ಹೆತ್ತವರ ಹುಡುಕಾಟದ ಚಿತ್ರಣವಿದೆ.
ಕುಮಾರಸ್ವಾಮಿ ತೆಕ್ಕುಂಜರು ಮುಂಬಯಿ ಮಹಾನಗರದ ಸ್ಥಿತ್ಯಂತರಗಳನ್ನು ಕಣ್ಣಾರೆ ಕಂಡಿರುವುದರಿಂದ ಕಾದಂಬರಿಯಲ್ಲಿ ಮುಂಬೈಯ ಚಿತ್ರಣವು ಸವಿವರವಾಗಿ ಬಂದಿದೆ. ಅಲ್ಲಿನ ಉಪನಗರಗಳು, ಲೋಕಲ್ ರೈಲ್ವೇ ಸ್ಟೇಷನ್ನುಗಳು, ರಸ್ತೆಗಳು, ಸ್ಲಂಗಳು, ಅಪಾರ್ಟೈಂಟುಗಳು, ಹೋಟೇಲ್-ಡ್ಯಾನ್ಸ್ ಬಾರ್ಗಗಳು ಕಾರ್ಯಾಚರಿಸುತ್ತಿದ್ದ ಬಗೆ, ಎಲ್ಲೆಲ್ಲಿಂದಲೋ ಬಂದು ಅಲ್ಲಿ ದುಡಿಯುತ್ತಿರುವ ಅಸಂಖ್ಯಾತ ಹೆಣ್ಣು ಮಕ್ಕಳ ಬದುಕನ್ನು ಕಾದಂಬರಿ ಸಮಗ್ರವಾಗಿ ಚಿತ್ರಿಸಿದೆ. ನಗರದ ಯಾಂತ್ರಿಕ ಬದುಕು, ಕ್ಲಬ್ಬುಗಳು, ಪಾರ್ಟಿಗಳು, ವೇಶ್ಯಾವಾಟಿಕೆಯ ಕೇಂದ್ರಗಳು, ಲೀವ್ಇನ್ ಸಂಬಂಧಗಳು ವೈಫ್ ಸ್ವಾಪಿಂಗಿನಂತಹ ವ್ಯವಸ್ಥೆಗಳನ್ನು ಕೂಡ ಕಾದಂಬರಿ ನಿರೂಪಿಸುತ್ತದೆ. ಇದರ ಜೊತೆಗೆ ಹಳ್ಳಿಗಳಲ್ಲಿನ ಬದುಕಿನ ಚಿತ್ರಣ ಮತ್ತು ಅವುಗಳ ಸ್ವರೂಪದಲ್ಲಿ ಆಗಿರುವ ಪಲ್ಲಟಗಳನ್ನು ದಾಖಲಿಸಿದೆ. ಕರಾವಳಿಯ ಸಾಂಸ್ಕೃತಿಕ ವೈಭವ, ಉತ್ತರಕ್ರಿಯೆಯ ಆಚರಣೆಗಳ ಕುರಿತ ವಿವರಗಳು ಮುಂತಾದ ಸಾಂಸ್ಕೃತಿಕ ಸಂಗತಿಗಳು ಕಾದಂಬರಿಯಲ್ಲಿ ಸ್ಥಾನ ಪಡೆದಿರುವುದು ಗಮನಾರ್ಹ.
ಮುನ್ನುಡಿಯಿಂದ - ಡಾ.ರವಿಶಂಕರ ಜಿ.ಕೆ
ಕುಮಾರಸ್ವಾಮಿ ತೆಕ್ಕುಂಜ | Kumaraswamy Tekkunja |
0 average based on 0 reviews.