| Category: | ಕನ್ನಡ |
| Sub Category: | ಕಾದಂಬರಿ |
| Author: | Chetana Thirthahalli | ಚೇತನ ತೀರ್ಥಹಳ್ಳಿ |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 148 |
| Publication Year: | 2026 |
| Weight | 150 |
| ISBN | 978-81-990654-3-7 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದರಲ್ಲಿ ಕೀಮಿಯಾಳ ಬದುಕು ಮಾತ್ರವಲ್ಲ, ತಬ್ರೀಜಿಯ ಕೊಲೆಗಾರನೆಂಬ ಆರೋಪ ಹೊತ್ತ ಅಲಾವುದ್ದೆನನ ಬದುಕನ್ನು ಚಿತ್ರಿಸುವ ಪ್ರಯತ್ನವೂ ಇದೆ. ಜೊತೆಗೇ, ಜಲಾಲುದ್ದೆನ್ ಬಾಲ್ಖಿ, ಮೌಲಾನಾ ಜಲಾಲುದ್ದೀನ್ ರೂಮಿಯಾಗಿ ಬೆಳೆದ ಹಾದಿಯ ಸಣ್ಣದೊಂದು ತುಣುಕೂ ಇದೆ. ಅವನ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದ ಇಬ್ಬರು ಹೆಂಡತಿಯರ ಬದುಕಿನ ಇಣುಕು ನೋಟವೂ ಇದೆ. ಈ ಎಲ್ಲರ ಕತೆಗಳೂ ಕೀಮಿಯಾಳ ಬದುಕನ್ನು ರೂಪಿಸುತ್ತಲೇ ಸಾವಿಗೆ ಕೆಡವುವ ದುರಂತದ ಚಿತ್ರಣವಿದೆ. ಹಾಗೆಂದು ರೂಮಿಯನ್ನು ಕೇಡಿಗನನ್ನಾಗಿ ತೋರುವ ಉದ್ದೇಶ ಇದಲ್ಲ. ಇಲ್ಲಿರುವುದು ಜಗತ್ತು ಒಟ್ಟಾರೆಯಾಗಿ ಗಂಡಸರನ್ನು ಸೃಷ್ಟಿಸಿರುವ ಬಗೆಯ ಬಗ್ಗೆ, ಅವರ ಬದುಕಿಗಷ್ಟೇ ಪ್ರಾಮುಖ್ಯತೆ ನೀಡಿರುವ ಬಗ್ಗೆ, ಹೆಣ್ಣುಗಳ ಗೋರಿಯ ಮೇಲೆ ಬರೆದ ಪುರುಷಾರ್ಥ ಸಾಧನೆಯ ಇತಿಹಾಸದ ಬಗ್ಗೆ ತಕರಾರು ಮಾತ್ರ. ಅಂದಿನ ಕಾಲಕ್ಕೆ, ಆ ಸನ್ನಿವೇಶಕ್ಕೆ, ಅಂದಿನ ರೀತಿನೀತಿಗೆ ಮತ್ತು ಮನಸ್ಥಿತಿಗೆ ಜಲಾಲುದ್ದೀನ್ ರೂಮಿಯ ಹಟ, ಹುಚ್ಚುತನ, ನಿರ್ಧಾರಗಳು ಸಾಮಾನ್ಯ. ಹೆಣ್ಣಿನ ವಿಷಯದಲ್ಲಿ ದೇಶ-ಕಾಲದ ಆಲೋಚನೆಗಳನ್ನು ಮೀರಲಾಗದೆ ಬಾಳಿದ ಅವನೂ ಅತ್ಯಂತ ಸಾಮಾನ್ಯನೇ, ಉತ್ತಮ ಕವಿ ಅನ್ನುವ ಹೆಚ್ಚುಗಾರಿಕೆಯ ಹೊರತಾಗಿ. ಅವನ ಈ ಸಾಧನೆಗೆ ಮೆಟ್ಟಿಲಾದವರ ದುರಂತ ಕತೆಯನ್ನು ಹೇಳುವುದಷ್ಟೇ ಈ ಕಾದಂಬರಿಯ ಉದ್ದೇಶ; ಅದರಲ್ಲೂ ಬಲಿಪಶುವಾದ ಕೀಮಿಯಾಳ ಕತೆಯನ್ನು. ಈ ನಿಟ್ಟಿನಲ್ಲಿ ಕಾಲಕ್ರಮದ ಘಟನೆಗಳ ಚುಕ್ಕಿ ಸೇರಿಸಿ ರೂಮಿಯ ಬದುಕಿನ ಮತ್ತೊಂದು ಮಗ್ಗುಲನ್ನು ಚಿತ್ರಿಸುವ ಪ್ರಯತ್ನ ಮಾಡಿದ್ದೇನೆ.
Chetana Thirthahalli | ಚೇತನ ತೀರ್ಥಹಳ್ಳಿ |
0 average based on 0 reviews.