
Category: | ಕನ್ನಡ |
Sub Category: | ಕಥಾ ಸಂಕಲನ |
Author: | ದರ್ಶನ್ ಜಯಣ್ಣ | Darshan jayanna |
Publisher: | ಅವ್ವ ಪುಸ್ತಕಾಲಯ | Avva Pustakalaya |
Language: | Kannada |
Number of pages : | |
Publication Year: | 2025 |
Weight | 300 |
ISBN | 9789334276718 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಪ್ಯಾರೆಲಾಲನಿಗೆ ಕಾಶಿಯ ಮೇಲೆ ಅಭಿಮಾನವಿತ್ತು. ಕಾಶಿಗೂ ಲಾಲನನ್ನು ಕಂಡರೆ ತುಂಬಾ ಗೌರವ. ತಾನು ಟೀ ಹೌಸ್ ಶುರುಮಾಡಿದ ಹೊಸದರಲ್ಲಿ ಅಂದರೆ ಸುಮಾರು ಏಳೆಂಟು ವರ್ಷಗಳ ಕೆಳಗೆ, ಲಾಲಾ ತಾನೇ ಅಂಗಡಿ ವಹಿವಾಟನ್ನು ನೋಡಿಕೊಳ್ಳುತ್ತಿದ್ದ. ಬೆಳಿಗ್ಗೆ ಒಂಬತ್ತರ ಸುಮಾರಿಗೆ ಬರುತ್ತಿದ್ದವನು ತನ್ನ ಹ್ಯಾಂಡ್ ಬ್ಯಾಗಿನಿಂದ ಕೀ ಗೊಂಚಲನ್ನು ತೆಗೆದು ಒಂದೊಂದಾಗಿ ಬೀಗಗಳನ್ನು ಬಿಡಿಸುತ್ತಿದ್ದ. ಎಷ್ಟು ಶಿಸ್ತಿನಿಂದ ಅಂದರೆ ಕಾಶಿಗೂ ಅದರ ಆರ್ಡರರ್ು ತಿಳಿದುಹೋಗಿತ್ತು. ಈಗ್ಗೆ ವರ್ಷದಿಂದೀಚೆಗೆ ಮಕ್ಕಳಿಗೆ ಅಂಗಡಿ ವಹಿಸಿಕೊಟ್ಟಮೇಲೆ ತಾನು ತಡವಾಗಿಬರುವುದು ರೂಢಿ. ಮಕ್ಕಳು ಅಪ್ಪನಂತಲ್ಲ. ಬೀಗ ಬಿಡಿಸುವುದಕ್ಕೆ ಆಳು ಕಾಳುಗಳಿದ್ದಾರೆ! ಈ ದಿನಗಳಲ್ಲಿ ಪ್ಯಾರೇಲಾಲ್ ಅಂಗಡಿಗೆ ಬರುವುದು ಹನ್ನೊಂದಾಗುತ್ತದೆ, ಬಂದವನೇ ಕೆಲಸದ ಹುಡುಗರ ಕೈಲಿ "ಕಾಶಿ ಟೀ" ತರಿಸಿ ಕುಡಿದು, ಮಕ್ಕಳಿಗೆ ಏನಾದರೂ ಹೇಳಿ, ಅಂದಿನ ಹಿಂದಿಪೇಪರ್ ತಿರುವಿ ಹಾಕಿದನಂತರ ಖಾಲಿ ಲೋಟವನ್ನು ಹಿಡಿದು ನೇರ ಕಾಶಿಯ ಬಳಿ ಬರುತ್ತಾನೆ, ಬಂದವನು "ಕಿತ್ಸಾ ಹುವಾ ಕಾಶಿ?" ಎಂದು ಕೇಳಿ, ಕಾಶಿ "ಪಾಂಚ್ ರುಪ್ಯಾ ಸೇಶ್" ಅಂದೊಡನೆ ಚಿಲ್ಲರೆ ಕೊಟ್ಟು ಕಾಶಿಯ ವ್ಯಾಪಾರದ ಬಗ್ಗೆ ವಿಚಾರಿಸಿ ಮನೆಯ ಕಡೆ ಹೊರಡುವುದು ವಾಡಿಕೆ"
ದರ್ಶನ್ ಜಯಣ್ಣ | Darshan jayanna |
0 average based on 0 reviews.