
Category: | ಕನ್ನಡ |
Sub Category: | ಸಾಮಾಜಿಕ-ರಾಜಕೀಯ |
Author: | ಹಲ್ಲೇಗೆರೆ ಕೃಷ್ಣ | Hallegere Krishna |
Publisher: | |
Language: | Kannada |
Number of pages : | 204 |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಭಾರತದ ಅತ್ಯಂತ ಸಂಕೀರ್ಣ ಮತ್ತು ದೀರ್ಘಕಾಲದ ಜಲ ವಿವಾದಗಳಲ್ಲಿ ಒಂದೆಂದರೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಕಾವೇರಿ ನದಿ ನೀರು ಹಂಚಿಕೆಯ ವಿವಾದ. ಈ ವಿವಾದಕ್ಕೆ ಶತಮಾನಗಳ ಇತಿಹಾಸವಿದೆ. ಬ್ರಿಟಿಷ್ ಆಳ್ವಿಕೆಯ ಕಾಲದಲ್ಲೇ ಇದಕ್ಕೆ ಮುನ್ನುಡಿ ಬರೆಯಲಾಯಿತು ಎಂದರೆ ತಪ್ಪಿಲ್ಲ. ಅದು ಈಗಲೂ ಮುಂದುವರಿದಿದೆ. ಕರ್ನಾಟಕದ ತಲಕಾವೇರಿಯಲ್ಲಿ ಜನುಮ ತಳೆದ ಕಾವೇರಿ ನದಿಯು ಕರ್ನಾಟಕದಿಂದ ಬಂಗಾಳ ಕೊಲ್ಲಿಯ ತನಕ ಅನುದಿನವೂ ಹರಿಯುತ್ತಲೇ ಇರುತ್ತಾಳೆ. ಹೀಗೆ ಪ್ರವಹಿಸುವ ಕಾವೇರಿ ಮಾತೆಗೆ ಗಡಿ, ರಾಜ್ಯ, ಪ್ರಾಂತಗಳ ಹಂಗಿಲ್ಲ. ಆದರೆ ಹರಿಯುವ ನೀರನ್ನು ಹಂಚಿಕೊಳ್ಳುವವರು ಅದರ ಮೇಲೆ ಹಕ್ಕು ಸಾಧಿಸುತ್ತಲೇ ಇರುತ್ತಾರೆ. ಕರ್ನಾಟಕದಲ್ಲಿ ಭರಪೂರ ಮಳೆ ಸುರಿದು ಕಾವೇರಿ ತುಂಬಿ ತುಂಬಿ ಹರಿಯುತ್ತಿದ್ದರೆ ರೈತರಿಗೂ ನೆಮ್ಮದಿ, ನದಿ ನೀರನ್ನು ಹಂಚಿಕೊಳ್ಳುವ ರಾಜ್ಯಗಳಿಗೂ ನೆಮ್ಮದಿ. ಆದರೆ ಮಳೆ ಬೀಳದೆ ಸಂಕಷ್ಟ ಎದುರಾಯಿತೋ ತಂಟೆ-ತಗಾದೆಗಳು ಶುರುವಾಯಿತು ಎಂದೇ ಅರ್ಥ.
ಹಾಗಾಗಿ ಕಾವೇರಿ ತಂಟೆ ಯಾವಾಗ ಆರಂಭವಾಯಿತು, ಕಾವೇರಿ ನ್ಯಾಯಾಧಿಕರಣದ ರಚನೆ, ಅದರ ಅಧ್ಯಕ್ಷರು, ತೀರ್ಪುಗಳು, ಅನುಸರಿಸಿದ ಸೂತ್ರ, ಹಂಚಿಕೆಯ ಹಕ್ಕು ಹೊಂದಿರುವ ರಾಜ್ಯಗಳು, ಹಂಚಿಕೆ ಪ್ರಮಾಣ ಮತ್ತು ಸದ್ಯದ ಪರಿಸ್ಥಿತಿಯ ಸಮಗ್ರ ಅವಲೋಕನ ನಡೆಸುವ ಪ್ರಯತ್ನ ಹಲ್ಲೇಗೆರೆ ಕೃಷ್ಣರವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ಪುಸ್ತಕ "ಕನ್ನಡ ನಾಡಿನ ಜೀವನದಿ ಕಾವೇರಿ" ಬಹಳ ಸೂಕ್ತವಾದ ಮಾಹಿತಿ ಹೊಂದಿದೆ.
ಹಲ್ಲೆಗೆರೆ ಕೃಷ್ಣರವರು ಬಹಳ ವರ್ಷಗಳಿಂದ ಆತ್ಮೀಯರು, ಇವರ ಸಂಪಾದಕತ್ವದಲ್ಲಿ ಮೂಡಿ ಬಂದಿರುವ ಅನಿವಾಸಿ ಭಾರತೀಯ ದಿವಂಗತ ಮರೂರು ಹನುಮಂತಯ್ಯ ನವರ ಕುರಿತು ಬರೆದ ಪುಸ್ತಕ "ಮರೆಯದ ಮಾಣಿಕ್ಯ" ಮಾಜಿ ಪ್ರಧಾನಿ ಶ್ರೀ.ಹೆಚ್.ಡಿ.ದೇವೇಗೌಡರ ನೀರಾವರಿ ಯೋಜನೆಗಳ ಸಾಧನೆ ಕುರಿತು ಶ್ರೀ.ಹೆಚ್.ಎನ್.ನಂಜೇಗೌಡರ ನೀರಾವರಿ ಚಿಂತನೆಗಳ ಕುರಿತು ಬರೆದ ಪುಸ್ತಕ "ಕರುನಾಡ ಭಗೀರಥರು" ಮತ್ತು ಇತ್ತೀಚೆಗೆ ಮಂಡ್ಯ ಜಿಲ್ಲೆಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಬಿಡುಗಡೆಯಾದ "ವಿಶ್ವ ಕನ್ನಡ ರತ್ನ" ಪುಸ್ತಕವು ಮಾಜಿ ಪ್ರಧಾನಿ ಶ್ರೀ.ಹೆಚ್.ಡಿ.ದೇವೇಗೌಡರವರ ಜೀವನ ಸಾಧನೆ ಕುರಿತು ಬರೆದ ಪುಸ್ತಕ ಜನಮನ್ನಣೆಗಳಿಸಿದೆ. ಕಾವೇರಿ ನದಿ ನೀರಿನ ಬಗ್ಗೆ ಕನ್ನಡಿಗರಲ್ಲಿ ಅರಿವು ಮೂಡಿಸುವುದರಲ್ಲಿ ಈ ಪುಸ್ತಕ ಉಪಯುಕ್ತವಾಗಿದೆ.
ಹಲ್ಲೇಗೆರೆ ಕೃಷ್ಣ | Hallegere Krishna |
0 average based on 0 reviews.