ಪ್ರೀತಿಯಿಂದ ರಮೇಶ್

Original price was: ₹ 225.Current price is: ₹ 200.

SKU: sawannapreetiyinda Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .25 kg
Author
Page Nos
ISBN
Publications

SYNOPSIS

ನನ್ನ ವೃತ್ತಿ ಜೀವನದಲ್ಲಿ ನಾನು ನೂರಾರು ನಟರನ್ನು ನೋಡಿದ್ದೇನೆ, ಮಾತನಾಡಿದ್ದೇನೆ. ಅವರಲ್ಲಿ ಅರ್ಧದಷ್ಟು ಮಂದಿಯ ಜೊತೆ ಗೆಳೆತನವೂ ನನಗಿದೆ. ಆದರೆ ಎಷ್ಟೋ ಮಂದಿಯ ಜತೆ ಎಷ್ಟು ಹೊತ್ತು ಮಾತನಾಡಿದರೂ ಅಮೂಲ್ಯವಾದದ್ದೇನೂ ನಮಗೆ ಸಿಕ್ಕಿರುವುದಿಲ್ಲ. ನಮ್ಮ ಅನುಭವ ಪ್ರಪಂಚ ಕಿಂಚಿತ್ತೂ ಶ್ರೀಮಂತಗೊಂಡಿರುವುದಿಲ್ಲ. ಆಡಿದ ಮಾತು ಕೆಲಹೊತ್ತಿಗೆ ಮರೆತೂ ಹೋಗಿರುತ್ತದೆ.
ರಮೇಶ್ ಅರವಿಂದ್ ಜತೆಗಿನ ಒಂದೊಂದು ಭೇಟಿಯೂ ಅವಿಸ್ಮರಣೀಯ. ತನ್ನ ಜತೆ ಮಾತಾಡುವ ಎಲ್ಲರಿಗೂ ಅವರ ಪೂರ್ತಿ ವ್ಯಕ್ತಿತ್ವವನ್ನು ಅವರು ಕೊಟ್ಟುಬಿಡುತ್ತಾರೆ. ಅವರ ಅಂತರಂಗದ ಸುದ್ದಿಯನ್ನು ನಮಗೆ ದಾಟಿಸುತ್ತಾರೆ. ಅವರ ಪಾಸಿಟಿವ್ ಎನರ್ಜಿಯನ್ನು ನಮ್ಮ ಜೀವಕ್ಕೂ ಹಾಯಿಸುತ್ತಾರೆ. ಕಡುಸಂಕಟದ, ನಿರಾಸಕ್ತಿಯ, ಪರನಿಂದೆಯ, ಪೊಳ್ಳು ಮಾತುಗಳನ್ನು ಅವರು ಆಡಿದ್ದನ್ನು ನಾನು ಕೇಳಿಯೇ ಇಲ್ಲ. ನಗುವಿಲ್ಲದ ರಮೇಶ್ ಅರವಿಂದ್ ಮುಖವನ್ನು ಕಂಡದ್ದೂ ಇಲ್ಲ.
ನಟನೆಯ ಜತೆಗೇ ಕತೆ ಹೇಳುವ, ಪ್ರತಿ ಕತೆಯೂ ಕೇಳುಗನಿಗೆ ಕನೆಕ್ಟ್ ಆಗುವಂತೆ ಮಾಡುವ, ಆ ಕನೆಕ್ಷನ್ ನಮ್ಮಲ್ಲಿ ಉಳಿದು ಬೆಳೆದು ನಮ್ಮ ಅನುಭವವೇ ಆಗಿಬಿಡುವಂತೆ ಮಾತಾಡುವ, ಬರೆಯುವ ರಮೇಶ್ ಅರವಿಂದ್ ಪ್ರೀತಿಯಿಂದ ಆಡಿದ ಮಾತುಗಳ ಸಂಗ್ರಹ ಇಲ್ಲಿದೆ. ಇದಕ್ಕೆ ಸ್ಪೂರ್ತಿಯಿಂದ ರಮೇಶ್, ಖುಷಿಯಿಂದ ರಮೇಶ್‌, ಉಲ್ಲಾಸದಿಂದ ರಮೇಶ್ ಅಂತಲೂ ಹೆಸರಿಡಬಹುದು.
ಇಲ್ಲಿನ ಪ್ರತಿಯೊಂದು ಬರಹವೂ ಸ್ಪೂರ್ತಿಯ ಕಿಡಿ. ಒಂದು ಹಿಡಿ ಹುರುಪು. ಒಂದೊಳ್ಳೇ ಮುಂಜಾನೆ ವಾಕಿಂಗ್ ಹೊರಟಾಗ ನಮಗೇ ಆಗುವ ಜ್ಞಾನೋದಯ.

ABOUT AUTHOR

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟ, ಲೇಖಕ, ನಿರ್ದೇಶಕ, ನಿರ್ಮಾಪಕ ರಮೇಶ್ ಅರವಿಂದ್ ಜನಿಸಿದ್ದು ಸೆಪ್ಟೆಂಬರ್ 10.1964ರಲ್ಲಿ. ಗೋವಿಂದಾಚಾರಿ ಹಾಗೂ ಸರೋಜ ದಂಪತಿಯ ಮಗನಾಗಿ ಜನಿಸಿದ ರಮೇಶ್ ಅರವಿಂದ್ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿ. ಓದಿನಲ್ಲಿ ಸದಾ ಮುಂದಿದ್ದ ರಮೇಶ್ ಅರವಿಂದ್ ಕಾಲೇಜು ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿ ಶಹಭಾಷ್ ಎನಿಸಿಕೊಂಡಿದ್ದರು. ಪ್ರಶಸ್ತಿ ಪ್ರಧಾನ ಮತ್ತಿತರ ಸಮಾರಂಭಗಳ ನಿರೂಪಣೆ ಮಾಡುತ್ತಿದ್ದ ರಮೇಶ್ ಅರವಿಂದ್ ದೂರದರ್ಶನದಲ್ಲಿ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಪ್ರೀತಿಯಿಂದ ರಮೇಶ್”

Your email address will not be published. Required fields are marked *

Related Products