ಅತೀತ

 196

SKU: dp003 Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
Publications
(1 customer review)

SYNOPSIS

 ಶ್ರೀಯುತ ಅರ್ಜುನ್‌ದೇವಾಲದಕೆರೆ ಅಪ್ಪಟ ಮಲೆನಾಡಿನವರು. ನಮ್ಮೂರಿನವರು. ಪಶ್ಚಿಮಘಟ್ಟದ ಕಾಡೊಳಗಿಂದ ಎದ್ದು ಬಂದವರು. ಹಾಗಾಗಿ ಅವರಿಗೆ ಮಲೆನಾಡಿನ ಪಟ್ಟುವರಸೆಗಳೆಲ್ಲವೂ ಕರಗತ. ಹುಟ್ಟಿದವರಿಗಲ್ಲದೆ ಬೇರೆಯವರಿಗೆ ಮಲೆನಾಡಿನ ವರ್ಣನೆ ಸಾಧ್ಯವಿಲ್ಲ. ಅಲ್ಲಿನ ಮಲೆನಾಡಿನಲ್ಲೇ ಬದುಕು, ಹಳ್ಳ, ಗದ್ದೆ, ತೋಟ, ಶಿಕಾರಿ, ಅಲ್ಲಿನ ಬೆರಗು ಅಂಥವರೊಳಗೆ ಹಾಸುಹೊಕ್ಕಾಗಿರುತ್ತದೆ. ಮಲೆನಾಡಿನ ಕಾಡೊಳಗೆ ಭೋರ್ಗರೆದು ಸುರಿಯುವ ‘ ಮಳೆಗಾಲದ ಮಧ್ಯದ ಮಳೆಯ ವರ್ಣನೆಯನ್ನು ಬಯಲು ಸೀಮೆಯಲ್ಲಿ ಹುಟ್ಟಿದವರು ಎಂದಿಗೂ ವರ್ಣನೆ ಮಾಡಲು ಸಾಧ್ಯವಿಲ್ಲ. ಜೊತೆಗೆ ಅದನ್ನು ಕೃತಿಯೊಳಗೆ ತರಲು ಒಳನೋಟ ಬೇಕು. ಬರಹ ತಿಳಿದಿರಬೇಕು. ಅದಕ್ಕೊಂದು ರೂಪ ಕೊಡುವ ಶಕ್ತಿ ಬೇಕು. ಅರ್ಜುನ್ ಅವರಿಗೆ ಇದೆಲ್ಲವೂ ಕರಗತವಾಗಿದೆ. ಇದರಲ್ಲಿ ಮೇಲೆ ಹೇಳಿದ ಎಲ್ಲದರ ಸಾರವೂ ಇದೆ. ಕತೆ, ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಅಲ್ಲಿನ ಆಡುಭಾಷೆಯನ್ನು ಧಾರಾಳವಾಗಿ ಬಳಸಿಕೊಂಡಿದ್ದಾರೆ. ಅದು ಕೃತಿಗೊಂದು ಕಳೆ ತಂದುಕೊಟ್ಟಿದೆ. ಅವರಿಗೆ ಬರಹವೂ ಹೊಸತಲ್ಲ. ಈಗಾಗಲೇ ಎರಡು ತಂದವರು ಅವರು. ಹೃನ್ಮಯಿ ಅವರ ಮೂರನೆಯ ಕೃತಿ. ಅವರಿಗೆ ಸಿಟಿಯ ಅನುಭವವೂ ಇದೆ. ಕಾಡುಬದುಕಿನ ಅನುಭವವೂ ಇದೆ. ಎರಡರ ಸಮ್ಮಿಳನ ಅವರ ಕೃತಿಯಲ್ಲಿ ಮೂಡಿ ಬಂದಿದೆ. ಹಾಗಾಗಿ ಹಳ್ಳಿ ಬದುಕಿನ ತಾಜಾತನದ ಶಿಕಾರಿಯಿಂದ ಹಿಡಿದು ಸಿಟಿ ಬದುಕಿನ ಜೊತೆಗೆ. ವಾಮಾಚಾರದ ಭಯಾನಕ ಲೋಕದಲ್ಲೂ ನಿಮ್ಮನ್ನು ಸುತ್ತಾಡಿಸುತ್ತಾರೆ. ಮಲೆನಾಡಿನಲ್ಲೇ ಹುಟ್ಟಿ ಅದರ ಒಳಗೆ ನಿಂತು ನೋಡುತ್ತಾ ಬರೆಯುವವರು ಬೆರಳೆಣಿಕೆಯಷ್ಟು. ಇತ್ತೀಚೆಗೆ ಅವರ ಸಂಖ್ಯೆ ಸ್ವಲ್ಪಮಟ್ಟಿಗೆ ಹೆಚ್ಚುತ್ತಿದೆ. ಮಲೆನಾಡಿನ ಪರಿಚಯವೂ ಹೊರಜಗತ್ತಿಗೆ ಆಗುತ್ತಿದೆ. ಪಶ್ಚಿಮಘಟ್ಟ ಎಂದಿಗೂ ನಿಗೂಢವೇ. ಎಷ್ಟು ಜನ ಬರೆದರೂ ಅಲ್ಲಿರುವ ಸರಕು ಖಾಲಿಯಾಗುವುದಿಲ್ಲ. ಯುವ ಪೀಳಿಗೆಯ ಬರಹಗಾರರಲ್ಲಿ ಅರ್ಜುನ್ ದೇವಾಲದಕೆರೆಯವರು ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅವರಿಂದ ಇನ್ನೂ ಬಹಳಷ್ಟನ್ನು ನಿರೀಕ್ಷಿಸಬಹುದು.

ABOUT AUTHOR

ಅರ್ಜುನ್ ದೇವಾಲದಕೆರೆ, ಮೂಲತಃ ಸಕಲೇಶಪುರದ ದೇವಾಲದಕೆರೆಯವರಾದ ಲೇಖಕರು, ಮಲೆನಾಡಿನಲ್ಲಿ ಮನೆ ಮಾತಾಗಿರುವ ರಾಷ್ಟ್ರೀಯ ಬರಹಗಾರರು ಮತ್ತು ಭಾಷಣಕಾರರು. ಚಿಕ್ಕಮಗಳೂರಿನ ಜಿಲ್ಲಾ ಪತ್ರಿಕೆ ದರ್ಪಣದ ಖಾಯಂ ಅಂಕಣಕಾರರು. ಇಪ್ಪತ್ತೊಂಭತ್ತು ವರ್ಷದ ಇವರು, ಈಗಾಗಲೇ ಐನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ನೂರಕ್ಕೂ ಹೆಚ್ಚು ದಿಕ್ಕೂಚಿ ಭಾಷಣಗಳನ್ನು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗೆ ರಾಷ್ಟ್ರೀಯತೆಯನ್ನು ಪಸರಿಸುತ್ತ, ದೇಶದ ಬಗ್ಗೆ ಸೈನಿಕರ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುತ್ತಿರುವ ಇವರು    Read More...

Opinion of Others

There are no others opinion yet.

Customer Reviews

1 review for ಅತೀತ

  1. Chaya

    ರವಿ ಬೆಳಗೆರೆಯವರನ್ನು ಬಿಟ್ಟರೆ ಅತೀ ಹೆಚ್ಚು ಇಷ್ಟವಾದ ಲೇಖಕರಿವರು.

Add a review

Your email address will not be published. Required fields are marked *