ಬ್ರ್ಯಾಂಡ್ ಬಿಲ್ಡರ್ಸ್

 142

SKU: sw003 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .25 kg
Author
Page Nos
ISBN
Publications

SYNOPSIS


ಐಡಿಯಾಗಳು ಜಗತ್ತನ್ನು ಆಳುತ್ತವೆ ಎಂಬುದನ್ನು ಸಾಬೀತುಪಡಿಸಿದ ಕಂಪನಿಗಳು ಬೆಳೆದುಬಂದ ದಾರಿಯ
ಅಪರೂಪದ ಕಥೆಗಳಿವು. ತಮ್ಮ ಉತ್ಕೃಷ್ಟತೆಯಿಂದಲೇ ಗೆದ್ದ, ತಂತ್ರಜ್ಞಾನದ ದಿಕ್ಕನ್ನೇ ಬದಲಾಯಿಸಿದ, ಬಡತನದ ಹಿನ್ನೆಲೆಯಿದ್ದರೂ ತಮ್ಮ ಉದ್ಯಮಶೀಲತೆಯಿಂದ ವಿಶ್ವದರ್ಜೆಯ ಸ್ಥಾನಮಾನ ಗಳಿಸಿದ, ಜನರ ಕಾಲೆಳೆಯುವಿಕೆಯನ್ನೇ ಸ್ಫೂರ್ತಿಯಾಗಿಸಿಕೊಂಡು ಮೇಲೇರಿ ತಮ್ಮದೇ ಆದ ಬ್ಯಾಂಡ್ ನಿರ್ಮಿಸಿಕೊಂಡ ವಿಭಿನ್ನ ವಿಶಿಷ್ಟ ಕಂಪನಿಗಳಿವು.
ಈ ಕಂಪನಿಗಳು ತಲುಪಿದ ಎತ್ತರ ವರ್ಷವರ್ಷಗಳ ಪರಿಶ್ರಮದ ಫಲ. ನಿಧಾನವಾಗಿ ಆದರೆ ದೃಢವಾಗಿ ಮೇಲೇರಿದ ಸಾಧನೆ ಇವುಗಳದ್ದು. ಆದರೆ ಆಲದಮರದಂತೆ ವಿಶಾಲವಾಗಿರುವ ಸಾಧನೆಯ ಹಿಂದೆ ಕಣ್ಣೀರಿದೆ, ಹಸಿವಿನ ಸಂಕಟವಿದೆ, ಸೋಲಿನ ಛಾಯೆಯಿದೆ, ಭವಿಷ್ಯದ ಆತಂಕವಿದೆ, ಕತ್ತಿಯಲುಗಿನಂತಹ ಸಮಾಜದ ವ್ಯಂಗ್ಯವಿದೆ, ಅನಿರೀಕ್ಷಿತ ಏರಿಳಿತಗಳಿಂದ
ಕೂಡಿದ ಸವಾಲಿನ ಬದುಕಿದೆ.
ಇಂತಹ ಹಿನ್ನಡೆಗಳ ಮಧ್ಯೆಯೂ ತಮ್ಮ ಕನಸುಗಳನ್ನು ನಂಬಿ ಮುನ್ನಡೆದು ಇಂತಹ ಅದ್ಭುತಗಳನ್ನು ಸಾಧ್ಯವಾಗಿಸಿದ ಸಾಧಕರ ಸಾಧನೆಯ ಹಾದಿಯನ್ನು ಸಮಾಧಾನದಿಂದ ಗಮನಿಸಿದರೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಉತ್ತರ ಸಿಗುತ್ತದೆ. ಏಕೆಂದರೆ ಈ ಸಾಧಕರು ಯಾರೂ ಗೆದ್ದದ್ದು ಅದೃಷ್ಟದಿಂದಲ್ಲ!
ಬದಲಾಗಿ ತಾವು ಯಶಸ್ವಿಯಾಗಬೇಕೆಂದು ತೀರ್ಮಾನಿಸಿದ್ದರಿಂದ! ಸಾಧಾರಣ ವ್ಯಕ್ತಿಗಳೂ ಸಹ ಛಲ, ದೃಢ ಮನಸ್ಸು, ಸತತ ಪರಿಶ್ರಮ, ಸದಾ ಹೊಸದನ್ನು ಕಲಿಯುವ ಹಂಬಲ, ದಣಿವರಿಯದ ಸ್ಪೂರ್ತಿಯಿಂದ ಕಣ್ಣಕ್ಷಿತಿಜವನ್ನು ಮೀರಿ ಮುನ್ನಡೆಯಬಹುದು ಎಂಬುದಕ್ಕೆ ಉದಾಹರಣೆ ಈ ಸಾಧಕರು. ನಮ್ಮ ಗುರಿ ಏನೇ ಇರಲಿ, ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸುವುದಿರಲಿ, ಒಳ್ಳೆಯ ಉದ್ಯೋಗ ಪಡೆಯುವುದಿರಲಿ ಅಥವಾ ಸ್ವಂತ ಉದ್ಯಮದಲ್ಲಿ ಮುನ್ನಡೆಯುವುದಿರಲಿ, ಇಂತಹ ಸ್ಫೂರ್ತಿಯ ಕಥೆಗಳು ಸದಾ ಮಾರ್ಗದರ್ಶಕವಾಗಿರುತ್ತವೆ. ನಡುಗಡಲಲ್ಲೂ ಕೈ ಸೋಲದಂತೆ ಕಾಪಾಡುವ ಭರವಸೆಯ ಹುಲ್ಲಿನೆಳೆಯಂತೆ…
ಸುಡು ಮರಳುಗಾಡಲ್ಲಿ ಸಿಕ್ಕ ಜೀವದಾಯಿನಿ ಓಯಸಿಸ್‌ನಂತೆ…

ABOUT AUTHOR

ಕನ್ನಡ ಸಾಹಿತ್ಯ ಲೋಕದ ಯುವ ಹಾಗೂ ಭರವಸೆಯ ಸಾಹಿತಿ ದೀಪಾ ಹಿರೇಗುತ್ತಿ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಹಿರೇಗುತ್ತಿಯಲ್ಲಿ ರಾಮಚಂದ್ರ ನಾಯಕ್ ಹಾಗೂ ಭಾಗೀರಥಿ ದಂಪತಿಗಳ ಮಗಳಾಗಿ ಜನಿಸಿದರು ದೀಪಾ. ಶಿರಸಿ ಹಾಗೂ ಧಾರವಾಡದಲ್ಲಿ ವ್ಯಾಸಂಗ ಮುಗಿಸಿದ ದೀಪಾ ಹಿರೇಗುತ್ತಿ ಅವರು ಉತ್ತಮ ಲೇಖಕಿಯ ಜೊತೆಗೆ ವಾಗ್ಮಿ ಕೂಡ ಹೌದು. ಕಾಲೇಜು ದಿನಗಳಲ್ಲೇ ಭಾಷಣ, ಅಧ್ಯಯನ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಬ್ರ್ಯಾಂಡ್ ಬಿಲ್ಡರ್ಸ್”

Your email address will not be published. Required fields are marked *