ಸಿಂಹಾವಲೋಕನ

 134

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .25 kg
Author
Page Nos
Publications

SYNOPSIS

ಸಿಂಹಾವಲೋಕನ ಕೃತಿ ಇಂದಿನ ಸಾಂಸ್ಕೃತಿಕ ಅಗತ್ಯಗಳಲ್ಲೊಂದು, ಮೇರು ನಟ ಡಾ.ವಿಷ್ಣುವರ್ಧನ ಅವರ ಚಿತ್ರಗಳನ್ನು ನೋಡಿದ್ದೇವೆ ಅವುಗಳ ಬಗ್ಗೆ ಕೇಳಿದ್ದೇವೆ ಅವುಗಳಿಂದ ಒಂದು ಕಾಲದಲ್ಲಿ ಪ್ರಭಾವಿತರಾಗಿ ಈಗ ಮರೆತಿದ್ದೇವೆ ಕೂಡ. ಇತಿಹಾಸವನ್ನು ಮರೆತವನು ಇತಿಹಾಸವನ್ನು ಸೃಷ್ಟಿಸಲಾರ ಎಂಬುದೊಂದು ಮಾತಿದೆ. ಈಗಿನ ಚಿತ್ರನಿರ್ಮಾತೃಗಳಿಗೆ ಆ ಇತಿಹಾಸದ ಅಧ್ಯಯನ ನಡೆಸುವ ಆಸಕ್ತಿ ಇಲ್ಲದಿರುವುದು ಚಿತ್ರರಂಗ ಎತ್ತ ಸಾಗುತ್ತಿದೆ ಎಂಬುದರ ಸ್ಪಷ್ಟ ದಿಕ್ಕೂಚಿ ಎಂದು ಭಾವಿಸುತ್ತೇನೆ. ಈ ನಿಟ್ಟಿನಲ್ಲಿ ಡಾ.ವಿಷ್ಣುವರ್ಧನ ಅವರ ಚಿತ್ರಗಳು ರೂಪುಗೊಂಡ ಬಗೆ, ಆ ಸಂದರ್ಭದ ಸಂಕಷ್ಟ, ಸಂತೋಷ, ಆ ಚಿತ್ರಗಳು ಬೀರಿದ ಪರಿಣಾಮಗಳು ಮುಂತಾದುವುಗಳ ಬಗ್ಗೆ ಖ್ಯಾತ ಲೇಖಕರಾದ ಎನ್.ಎಸ್‌.ಶ್ರೀಧರ ಮೂರ್ತಿ ಅವರು ವಸ್ತುನಿಷ್ಠ ಅಧ್ಯಯನ ನಡೆಸಿ ಈ ಕೃತಿಯನ್ನು ರಚಿಸಿದ್ದಾರೆ. ಈ ಕೃತಿಯನ್ನು ಓದಿದಂತೆಲ್ಲಾ ಆಯಾ ಚಿತ್ರದ ಬಗ್ಗೆ ಇದುವರೆಗೂ ನಿಮಗಿದ್ದ ಅಭಿಪ್ರಾಯಗಳು ಬೇರೆ ಸ್ವರೂಪ ಪಡೆದುಕೊಳ್ಳುತ್ತವೆ ಎಂಬುದು ಶ್ರೀಧರಮೂರ್ತಿಯವರ ಬರವಣಿಗೆಯ ಶಕ್ತಿ ಎಂದರೆ ತಪ್ಪಾಗುವುದಿಲ್ಲ. ಹೊಸದಾಗಿ ಚಿತ್ರರಂಗ ಪ್ರವೇಶಿಸುವವರಿಗೆ ಇದೊಂದು ಆಕರ ಗ್ರಂಥವಾಗಿ ಸಹ ಉಪಯೋಗಕ್ಕೆ ಬರುತ್ತದೆ ಎಂಬುದು ಈ ಕೃತಿಯ ಶಕ್ತಿ ಸಹ ಹೌದು.

ABOUT AUTHOR

ಎನ್.ಎಸ್.ಶ್ರೀಧರಮೂರ್ತಿ ಮಂಗಳೂರು ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಮತ್ತು ರ್‍ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿಯನ್ನು ಪಡೆದವರು. ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಇವರು 'ಮಲ್ಲಿಗೆ' ಮಾಸಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಬಂದು ಕಳೆದ ಎರಡು ದಶಕದಿಂದ ಸಾಂಸ್ಕೃತಿಕ ಪತ್ರಿಕೋದ್ಯಮವನ್ನು ಉಳಿಸುವಲ್ಲಿ ವಿವಿಧ ಪತ್ರಿಕೆಗಳ ಮೂಲಕ ಶ್ರಮಿಸುತ್ತಿದ್ದಾರೆ. ಚಲನಚಿತ್ರ ಇತಿಹಾಸದ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇವರು ಸಾಹಿತ್ಯ ಮತ್ತು ಆಧ್ಯಾತ್ಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ.    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಸಿಂಹಾವಲೋಕನ”

Your email address will not be published. Required fields are marked *