ಒಂದು ಡೈರಿಯ ಪರಿಮಳ
Original price was: ₹ 210.₹ 187Current price is: ₹ 187.
Book Details
Weight | .2 kg |
---|---|
Author | Vasudev Nadig |
ISBN | 9788195715749 |
Publications | Sahityaloka Publications |
SYNOPSIS
‘ಕಾಲ ಸಾವನ್ನು ಮರೆಸಬಲ್ಲದು, ಆದರೆ ತೀವ್ರ ಪ್ರೇಮ ಮಾಡಿದ ಗಾಯವನ್ನು ಅಲ್ಲ’ ಹೆಣ್ಣು ಗೊಂಬೆಯಂತೆ ಮದುವೆ ಮಾಡಿಸಿಕೊಂಡ ಕಲ್ಯಾಣಿ ಕೊಟ್ಟ ಉತ್ತರ ನಮ್ಮೊಳಗಿನ ಯಾರದ್ದು ಆಗಿರಬಹುದು. ಈ ಕತೆಗಳ ತೀವ್ರತೆಯೇ ಅಂಥದ್ದು, ಮುಟ್ಟಿ ನೋಡಿಕೊಳ್ಳದ ಹೊರತು ಅದರ ಅನುಭವ ಎದೆಗೆ ತಾಕದು, ಟೊಳ್ಳಾಗುತ್ತಿರುವ ಮನುಷ್ಯ ಸಂಬಂಧಗಳ ಕುರಿತೇ ಮತ್ತೆ ಮತ್ತೆ ಜಿಜ್ಞಾಸೆಗೆ ಬೀಳುವ ಇಲ್ಲಿನ ಬಹುತೇಕ ಕಥೆಗಳು ನಮ್ಮ ಬದುಕಿನ ಪ್ರತಿರೂಪವೇ ಆಗಿವೆ. ನಾವು ಮತ್ತು ನಮ್ಮವೆ ಎನಿಸುವ ಇಲ್ಲಿನ ಪಾತ್ರ ಸನ್ನಿವೇಶಗಳು ತೆರೆದಿಡುವ ಸತ್ಯ ಸಾರ್ವಕಾಲಿಕವಾದುದು. ಎಳೆಯ ಮಗುವೊಂದು ತುಂಬ ಆಸೆಪಟ್ಟು ತಿನ್ನುವ ಚಾಕಲೇಟು ತಿಂದ ಕೂಡಲೆ ಮುಗಿದು ಹೋಯಿತಲ್ಲ ಎಂದು ವ್ಯಥೆ ಪಡುವ ಹಾಗೆ ಕಾಡುತ್ತವೆ ಈ ಕತೆಗಳು ದಟ್ಟ ವಿಷಾದ, ಕಡು ಪ್ರೀತಿ, ಮುಗ್ಧತೆ, ಮುನಿಸು, ಕೋಪ ತಾಪ ಎಲ್ಲವನ್ನು ಅಕ್ಷರ ರೂಪಕ್ಕಿಳಿಸಿ, ಅದ್ದಿ ತೆಗೆದ ಸುಂದರ ಕಲಾಕೃತಿಗಳಂತೆ ಓದುಗರ ಎದೆಯೊಳಗಿಳಿದು ಬಿಡುತ್ತವೆ. ಒಂದಷ್ಟು ಕುತೂಹಲಗಳನ್ನು ಹಾಗೇ ಉಳಿಸುವ, ಆದರೆ ತುಂಬ ಆಸಕ್ತಿಯಿಂದ ಓದಿಸಿಕೊಳ್ಳುವ ಕತೆಗಳಿವು. ಓದಿಯಾದ ಮೇಲೆ ಅವು ಹುಟ್ಟಿಸುವ ಆದ್ರ್ರಭಾವಕ್ಕೆ ಕೊನೆಯಿಲ್ಲ.
ಎಂತದೇ ತಾಪತ್ರಯಗಳಿದ್ದರೂ, ‘ಬದುಕಿನ ಜೊತೆ ರಾಜಿ ಮಾಡಿಕೊಳ್ಳದ ಹೊರತು ಬೇರೆ ದಾರಿ ಇಲ್ಲ ಎನ್ನುವ ಕಟುಸತ್ಯವನ್ನು ಮತ್ತೆ ಮತ್ತೆ ದಾಖಲಿಸುತ್ತಲೇ ಹೋಗುತ್ತವೆ.
ABOUT AUTHOR
Opinion of Others
There are no others opinion yet.
Reviews
There are no reviews yet.