ಕಥಾ ಸಂಕ್ರಾಂತಿ 2024
ಸುಗ್ಗಿಯ ಹಿಗ್ಗಿನ ಮಹಾಕನಸು!

ಇದೊಂದು ಅತ್ಯಪೂರ್ವ ಅವಕಾಶ: “ಬಾ ಇಲ್ಲಿ ಸಂಭವಿಸು!”
ಇಂಥ ವಿಶಿಷ್ಟ ಕಥಾಸ್ಪರ್ಧೆ ನಮ್ಮ ದೇಶ-ಭಾಷೆ-ಕಾಲದಲ್ಲಿ ಈಗ ಘಟಿಸುತ್ತಿರುವ ಅಪೂರ್ವ!
ಹೊಸ ತಲೆಮಾರಿನ ಕಥನೋತ್ಸಾಹಿಗಳಾದ ನೀವು ಪೈಪೋಟಿಯಲ್ಲಿ ಬಹುಮಾನಿತರಾದರೆ ನಿಮಗೆ ದೊರಕುವ ಮಾನ್ಯತೆ-ಅವಕಾಶ ಅಸಾಮಾನ್ಯ.
ನೀವು ಪ್ರಯೋಗಶೀಲ ಕಥನ ಕುಶಲಿಗರೆ?
ಒಕ್ಕಲು ಮಕ್ಕಳ ನಾಡ-ನುಡಿಹಬ್ಬ ‘ಕಥಾ ಸಂಕ್ರಾಂತಿ 2024″ ನಿಮ್ಮ ಪ್ರತಿಭೆಯಿಂದ ಹುಟ್ಟುವ ಹೊಸ ಕಥನ ಬೀಜವನ್ನು ಬಿತ್ತಲು ಫಲವತ್ತಾದ ನೆಲ.
ಕಾದಿಟ್ಟ ಅನುಭವದ ತೆನೆಯಗಳನ್ನು ಸುಗ್ಗಿಯಾಗಿಸಬಲ್ಲ ಕಣಜ.

ನೀವೇಕೆ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು, ಏನಂಥ ವಿಶೇಷ?

ನಿಮ್ಮ ಕಥಾಪ್ರತಿಭೆಗೆ ಬೊಗಸೆ ತುಂಬಬಲ್ಲ ಹಮ್ಮಿಣಿ, ಬಹುಮಾನ ಮೊತ್ತ.

  • ಮೊದಲ ಬಹುಮಾನಿತ ಕಥೆ: Rs. 55,000
  • ಎರಡನೆಯ ಬಹುಮಾನ: Rs. 30,000
  • ಮೂರನೆಯ ಬಹುಮಾನ: Rs. 20,000
  • ತೀರ್ಪುಗಾರರ ಮೆಚ್ಚುಗೆ ಗಳಿಸುವ ಏಳು ಕಥೆಗಳಿಗೆ ತಲಾ Rs.3000 ಸಾವಿರ ಬಹುಮಾನ

ಇಲ್ಲಿವೆ ಉಸಿರು ಬಿಗಿ ಹಿಡಿವ ಇನ್ನಷ್ಟು ವಿಶಿಷ್ಟತೆ ಮತ್ತು ವಿಶೇಷಣಗಳು

  • ಮಾತ್ರವಲ್ಲ, ಹತ್ತೂ ಕಥೆಗಳನ್ನು ಇಂಗ್ಲಿಶ್‌ ಮತ್ತು ಇನ್ನೆರಡು ದ್ರಾವಿಡ ಭಾಷೆಗಳಿಗೆ ಅನುವಾದಿಸಿ, ಏಕಕಾಲಕ್ಕೆ ಕನ್ನಡ, ಇಂಗ್ಲಿಶ್‌ ಮತ್ತು ಇನ್ನೆರಡು ದ್ರಾವಿಡ ಭಾಷೆಗಳಲ್ಲಿ ಸಂಕಲನಗಳನ್ನು ಬಿಡುಗಡೆ ಮಾಡಲಾಗುವುದು.
  • ಮೂರು ಬಹುಮಾನಿತ ಮತ್ತು ತೀರ್ಪುಗಾರರು ಮೆಚ್ಚಿದ ಏಳುಗಳನ್ನು ಒಳಗೊಂಡ ಹತ್ತು ಕಥೆಗಳ ಕಥಾಸಂಕಲನ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು
  • ಅಂದರೆ, ನಿಮ್ಮ ಕನ್ನಡ ಕಥೆ ಒಂದೇಸಲಕ್ಕೆ ಕನ್ನಡ, ಇಂಗ್ಲಿಶ್‌ ಮತ್ತು ಇನ್ನೆರಡು ದ್ರಾವಿಡ ಭಾಷೆಗಳಲ್ಲಿ ದೊರಕಿ, ನಾಲ್ಕು ಭಾಷೆಗಳ ಓದುಗರಿಗೆ ತಲುಪುವುದು.
  • ಕನ್ನಡ ಕಥೆಗಾರರಾದ ನಿಮಗೆ ಇದು “ಕಥಾ ಸಂಕ್ರಾಂತಿ 2024” ಸ್ಪರ್ಧೆ ಒದಗಿಸುತ್ತಿರುವ ಅತ್ಯಪೂರ್ವ ಅವಕಾಶ.

ನೀವು ಮಾಡಬೇಕಿರುವುದು ಇಷ್ಟೇ:
ಕನ್ನಡದ ಓದುಗರ ಸಂವೇದನೆ, ಸೂಕ್ಷ್ಮತೆಗಳನ್ನು ಮುಟ್ಟಿತಟ್ಟಿ, ಜಾಗರೂಕಗೊಳಿಸಬಲ್ಲ ಹೊಚ್ಚ ಹೊಸ ಕಥೆಯನ್ನು ಬರೆಯುವುದು. ಹೊಸ ಕಥನಗಳ ದಾರಿಗೆ ಬೇಕಾದ ಹೊಸ ಕಸುವು, ತಾರುಣ್ಯದ ಹುಮ್ಮಸ್ಸನ್ನು ತುಂಬುವುದು.ಕನ್ನಡ ಕಥಾಲೋಕಕ್ಕೆ ಇದು ‘ನುಡಿಯ ಭಾಗ್ಯ’ ಎನ್ನುವಂಥ ಮಹತ್ವಾಕಾಂಕ್ಷೆಯ ಕಥೆಯನ್ನು ಕಟ್ಟುವುದು.

ಕಥಾಸ್ಪರ್ಧೆಯ ನಿಯಮಗಳು

  • ಕನ್ನಡದಲ್ಲಿ ಬರೆಯುವ ಎಲ್ಲರಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶ.
  • ಕಥೆ ಅಚ್ಚ ಕನ್ನಡದ್ದಾಗಿರಬೇಕು. ಸ್ವಂತಿಕೆ ಮುಖ್ಯ. ಯಾವುದೇ ಭಾಷೆಯ ನಕಲು, ರೂಪಾಂತರ, ಪ್ರೇರಣೆ, ಛಾಯೆ-ನೆರಳು ಇತ್ಯಾದಿಗಳಿಗೆ ಅವಕಾಶವಿಲ್ಲ. ಒಂದೊಮ್ಮೆ, ಅಂತಹ ಸುಳಿವು ಸಿಕ್ಕರೆ ಅಂತಹ ಕಥೆಗಳನ್ನು ಸ್ಪರ್ಧೆಯಿಂದ ಹೊರಗಿಡಲಾಗುವುದು.
  • ಚಿಂತೆ ಬೇಡ, ಸ್ಪರ್ಧೆಗೆ ವಯಸ್ಸಿನ ಮಿತಿಯಿಲ್ಲ. ಆದರೆ, ಪದಗಳ ಮಿತಿಯಿದೆ. ನಿಮ್ಮ ಕೊನೆಯ ಅಕ್ಷರಕ್ಕೆ ಪೂರ್ಣವಿರಾಮ ಹಾಕಿದಾಗ ಕಥೆಗೆ ಮೂರು ಸಾವಿರ ಪದಗಳಿರಬೇಕು. ಅತಿ ಅಪರೂಪದ ಸನ್ನಿವೇಶದಲ್ಲಿ ಈ ನಿಯಮವನ್ನು ಸಡಿಲಿಸಲೂಬಹುದು.
  • ಒಬ್ಬರು ಒಂದು ಕಥೆಯನ್ನು ಮಾತ್ರ ಕಳಿಸಬಹುದು. ಬೇರೊಂದು ಹೆಸರಿನಲ್ಲಿ ಕಳಿಸಿ, ಅಂತಹ ಕಥೆಗೆ ಪುರಸ್ಕಾರ ದೊರೆತು ಮೂಲ ಹೆಸರು ತಿಳಿದಾಗ ಪುರಸ್ಕಾರ ತಡೆಹಿಡಿಯಲಾಗುವುದು.
  • ಮೊದಲ ಬಹುಮಾನಕ್ಕೆ ಅರ್ಹ ಕಥೆಗಳಿಲ್ಲವೆಂದು ತೀರ್ಪುಗಾರರು ನಿರ್ಣಯಿಸಿದರೆ ಬಹುಮಾನವನ್ನು ಹಂಚಿಕೆ ಮಾಡಲಾಗುವುದು.
  • ಇನ್ನೊಂದು ಮುಖ್ಯ ನಿಯಮ: ಈ ಸ್ಪರ್ಧೆಯಲ್ಲಿ ಭಾಗವಹಿಸುವವರು, ಭಾಗವಹಿಸುವ ದಿನಾಂಕದವರೆಗೆ ತಮ್ಮ ಯಾವುದೇ ‘ಕಥಾ ಸಂಕಲನ’ವನ್ನು ಪ್ರಕಟಿಸಿರಬಾರದು. ಒಂದಾದರೂ ಕಥಾ ಸಂಕಲನವನ್ನು ಈವರೆಗೆ ಪ್ರಕಟಿಸಿರುವವರು ಸ್ವಲ್ಪ ಮಟ್ಟಿಗಿನ ಮಾನ್ಯತೆಯನ್ನು ಪಡೆದು ಇಂಥ ಸ್ಪರ್ಧೆಗಳಲ್ಲಿ ಈಗಾಗಲೇ ಪಾಲ್ಗೊಂಡಿರುತ್ತಾರೆ ಎಂಬುದು ಈ ನಿಯಮಕ್ಕೆ ಕಾರಣ. ಜತೆಗೆ, ಹೊಸ ತಲೆಮಾರಿನ ತರುಣ-ತರುಣಿಯರು ಹುಮ್ಮಸ್ಸಿನಿಂದ ಭಾಗವಹಿಸಲು ಅನುವು ಮಾಡಿಕೊಡುವುದು ಈ ನಿಯಮದ ಇನ್ನೊಂದು ಉದ್ದೇಶ.
  • ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ, ನೀವು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ಧರೆ, ಈವರೆಗೆ, ಅಂದರೆ 2023ರ ವರೆಗೆ, ನಿಮ್ಮ ಒಂದೂ ‘ಕಥಾ ಸಂಕಲನ’ ಪ್ರಕಟವಾಗಿರಬಾರದು. ಬೇರೆ ಪ್ರಕಾರದಲ್ಲಿ ನಿಮ್ಮ ಪುಸ್ತಕ ಪ್ರಕಟವಾಗಿದ್ದರೆ ಈ ನಿಯಮ ಅನ್ವಯಿಸುವುದಿಲ್ಲ.

ನಮ್ಮ ವಾಗ್ದಾನ:

  • ಹೊಸ ಕಥನ ಪರಂಪರೆಯನ್ನು ಬೆಳೆಸುವುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿರುವುದರಿಂದ ಪ್ರತಿ ಹಂತದಲ್ಲೂ ಪಾರದರ್ಶಕತೆಯನ್ನು ಪಾಲಿಸಲಾಗುವುದು. ಪ್ರತಿ ಹಂತದ ಆಯ್ಕೆಯ ಪ್ರಕ್ರಿಯೆಯನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳಲಾಗುವುದು.
  • ಒಟ್ಟಾರೆ ಪ್ರಕ್ರಿಯೆಯನ್ನು ಆದಷ್ಟೂ ಸಹಭಾಗಿತ್ವದ ಮೂಲಕ ನಡೆಸುವುದು.
  • ಎಲ್ಲ ಮಾಹಿತಿಯನ್ನೂ ಮುಂಗಡವಾಗಿ ಹಂಚಿಕೊಳ್ಳುವುದು.
  • ನೀವು ಕಥೆಯಲ್ಲಿ ಕೈಗೊಳ್ಳುವ‌ ಪ್ರಯೋಗಶೀಲತೆ, ಹೊಸಶೈಲಿ, ವಿನ್ಯಾಸ, ಭಾಷಾ ಬಳಕೆ, ವಸ್ತು ವಿಷಯಗಳನ್ನು ಗಮನವಿಟ್ಟು ಓದಲಾಗುವುದು.
  • ಯಾವುದೇ ವಿಷಯಕ್ಕೂ ಸಂಪಾದಕೀಯ ಬಳಗದ ನಿರ್ಣಯವೇ ಅಂತಿಮ.

ಎಲ್ಲವೂ ಮನವರಿಕೆಯಾಯಿತೆ? ಇನ್ನೂ ಏಕೆ ತಡ? ಕೂಡಲೇ ಕಥೆ ಬರೆಯಲು ಆರಂಭಿಸಿ.

ಕಥೆಯನ್ನು ಎಲ್ಲೆಡೆಯೂ ತೆರೆದುಕೊಳ್ಳಬಲ್ಲ ಯೂನಿಕೋಡ್‌ ಫಾಂಟ್‌ ಬಳಸಿ. ಕಥೆಯ ಹೆಸರು, ಕಥೆಗಾರರ ಹೆಸರು, ವಿಳಾಸ, ದೂರವಾಣಿಯ ವಿವರಗಳನ್ನು ಪ್ರತ್ಯೇಕ ಹಾಳೆಯಲ್ಲಿ ಬರೆಯಿರಿ.

ಸ್ಪರ್ಧೆಗೆ ಕಥೆಯ ಸಾಫ್ಟ್‌ ಪ್ರತಿ ಮಾತ್ರ ಸ್ವೀಕಾರಾರ್ಹ.
ಕಥೆ ಕಳಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್‍ ೦೫, ೨೦೨೩
ಕಥೆ ಕಳಿಸಬೇಕಾದ ಈಮೇಲ್‌ ವಿಳಾಸ:
veeralokakathasankranti@gmail.com

k01

ಪರಿಕಲ್ಪನೆ ಮತ್ತು ಸಂಪಾದಕ
ಕೇಶವ ಮಳಗಿ

sir-01

ನಿಮ್ಮ
ವೀರಕಪುತ್ರ ಶ್ರೀನಿವಾಸ