ಆಟಗಾರ

 196

SKU: dp001 Categories: ,

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
Publications

SYNOPSIS

ಕನ್ನಡದ ಯುವಕ-ಯುವತಿಯರು ಕನ್ನಡ ಕಾದಂಬರಿಗಳನ್ನು ಓದುವುದಿಲ್ಲ, ಅದರಲ್ಲೂ ಈ ಕಾರ್ಪೋರೇಟ್ ಕನ್ನಡಿಗರು ಕೇವಲ ಇಂಗ್ಲೀಷ್ ಕಾದಂಬರಿಗಳನ್ನು ಮಾತ್ರ ಓದುತ್ತಾರೆ ಎಂಬ ಆರೋಪವನ್ನು ಸುಳ್ಳಾಗಿಸಿದ್ದು, “ಅವಳು. ಬದುಕ ಕಲಿಸಿದವಳು’ ಕಾದಂಬರಿ. ಜನಸಾಮಾನ್ಯನ ದೃಷ್ಟಿಯಲ್ಲಿ ಯೋಚಿಸಿ, ಜನಸಾಮಾನ್ಯನ ಭಾಷೆಯಲ್ಲಿ ಬರೆದರೆ, ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ಪುಸ್ತಕಗಳನ್ನು ಓದುತ್ತಾನೆ ಎಂಬುದನ್ನು ನನ್ನಂತಹ ಚೊಚ್ಚಲ ಕಾದಂಬರಿಕಾರನ ಪುಸ್ತಕವನ್ನು ಭರ್ಜರಿಯಾಗಿ ಗೆಲ್ಲಿಸುವ ಮೂಲಕ ಋಜುವಾತುಪಡಿಸಿದ್ದಾನೆ ಕನ್ನಡಿಗ. “ಅವಳು” ಕಾದಂಬರಿಯನ್ನು ಓದಿದದವರಲ್ಲಿ ಬಹಳಷ್ಟು ಜನ “ಸರ್ ಇದು ನನ್ನ ಮೊದಲ ಕನ್ನಡ ಕಾದಂಬರಿ, ಕನ್ನಡದಲ್ಲೂ ಈ ತರಹದ ಕಾದಂಬರಿಗಳಿವೆ ಎಂಬುದು ತಿಳಿದಿರಲಿಲ್ಲ. ಇನ್ನಷ್ಟೂ ಕನ್ನಡ ಪುಸ್ತಕಗಳನ್ನು ಓದುತ್ತೇವೆ” ಎಂಬ ಅನಿಸಿಕೆಯನ್ನು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದನ್ನು ನೀವುಗಳ ಸಹ ಓದಿದ್ದೀರಿ. ಜೊತೆಗೆ ಹಲವಷ್ಟು ಪ್ರೇಮಿಗಳಿಗೆ ಪಾಠವಾಗಿದ್ದು, ಬದುಕಲ್ಲಿ ಬಸವಳಿದವರಿಗೆ, ಬದುಕ ಹೋರಾಟದಲ್ಲಿ ಸ್ಪೂರ್ತಿಯಾಗಿದ್ದು ಇದೇ “ಅವಳು”. ಆ ಮಟ್ಟಿಗೆ ಅವಳು ಕೇವಲ ಮಾರಟಕ್ಕಷ್ಟೇ ಸೀಮಿತವಾಗದೆ ಜನರ ಮನಸನ್ನು ತಟ್ಟುವಲ್ಲಿ, ಬದುಕಿನ ಪಾಠ ಹೇಳುವಲ್ಲಿ ಯಶಸ್ವಿಯಾಗಿತ್ತು. ಈಗ ಬದುಕಿನ ಪಾಠ ಹೇಳುವ ಮತ್ತೊಂದು ಕಾದಂಬರಿಯನ್ನು ನಿಮ್ಮ ಕೈಯಲ್ಲಿಟ್ಟಿದ್ದೇನೆ ಅದೇ “ಆಟಗಾರ ಕಾಲಾಯೇ ತಸ್ಯೆ ನಮಃ”. “ಅವಳು” ವಸ್ತುಭೂತವಾದ ನನ್ನ ಆತ್ಮಕಥೆ. ಅಲ್ಲಿ ಕಲ್ಪನೆಗೆ ಮತ್ತು ಸೃಜನಶೀಲತೆಗೆ ಅವಕಾಶವಿರಲಿಲ್ಲ. ನಡೆದದ್ದನ್ನು ನಡೆದ ಹಾಗೆಯೇ ಅಕ್ಷರ ರೂಪಕ್ಕಿಳಿಸಿದ್ದೆ. ಆದರೆ ಆಟಗಾರ ಹಾಗಲ್ಲ. ಇಲ್ಲಿ ಎಲ್ಲವೂ ಇದೆ. ನನ್ನ ಸುತ್ತ ನಡೆದ ಹಲವು ಸತ್ಯ ಘಟನೆಗಳನ್ನು ಒಂದು ಸೃಜನಶೀಲ ಚೌಕಟ್ಟಿನಲ್ಲಿಟ್ಟು, ಕಲ್ಪನೆಯ ಕುಂಚದಲಿ ಕಾದಂಬರಿಯಾಗಿಸಿದ್ದೇನೆ. ಕಾರ್ಪೋರೇಟ್ ನಿಂದ ಕಾನನದವರೆಗೂ ಕಥೆಯ ವಿಸ್ತಾರವಿದೆ. ಒಂದು ನವಿರು ಪ್ರೇಮದೆಳೆಯ ಜೊತೆ, ಕುತೂಹಲಕಾರಿ ಕಥಾಹಂದರವನ್ನು ಹೆಣೆಯಲು ಪ್ರಯತ್ನಿಸಿದ್ದೇನೆ. ಯುವ ಮನಸ್ಸುಗಳನ್ನು ಗಮನದಲ್ಲಿಟ್ಟುಕೊಂಡು ಹೆಣೆದಿರುವ ಹಂದರ ಪ್ರಬುದ್ಧ ಓದುಗರನ್ನು ಕಾಡುವಂತಿದೆ. ಆಟಗಾರನ ಬಗ್ಗೆ ಹೆಚ್ಚೇನು ಹೇಳಲಾರೆ. ಕಾದಂಬರಿ ನಿಮ್ಮ ಕೈಯಲ್ಲಿದೆ ನೀವು ಓದಿ ಹೇಳಿ ಆಟಗಾರ ಹೇಗಿದ್ದಾನೆಂದು. ಶುಭವಾಗಲಿ.
ತುಂಬು ಪ್ರೀತಿಯೊಂದಿಗೆ, ಅರ್ಜುನ್‌ ದೇವಾಲದಕೆರೆ

ABOUT AUTHOR

ಅರ್ಜುನ್ ದೇವಾಲದಕೆರೆ, ಮೂಲತಃ ಸಕಲೇಶಪುರದ ದೇವಾಲದಕೆರೆಯವರಾದ ಲೇಖಕರು, ಮಲೆನಾಡಿನಲ್ಲಿ ಮನೆ ಮಾತಾಗಿರುವ ರಾಷ್ಟ್ರೀಯ ಬರಹಗಾರರು ಮತ್ತು ಭಾಷಣಕಾರರು. ಚಿಕ್ಕಮಗಳೂರಿನ ಜಿಲ್ಲಾ ಪತ್ರಿಕೆ ದರ್ಪಣದ ಖಾಯಂ ಅಂಕಣಕಾರರು. ಇಪ್ಪತ್ತೊಂಭತ್ತು ವರ್ಷದ ಇವರು, ಈಗಾಗಲೇ ಐನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ನೂರಕ್ಕೂ ಹೆಚ್ಚು ದಿಕ್ಕೂಚಿ ಭಾಷಣಗಳನ್ನು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗೆ ರಾಷ್ಟ್ರೀಯತೆಯನ್ನು ಪಸರಿಸುತ್ತ, ದೇಶದ ಬಗ್ಗೆ ಸೈನಿಕರ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುತ್ತಿರುವ ಇವರು    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಆಟಗಾರ”

Your email address will not be published. Required fields are marked *