ಅರ್ಜುನ್ ದೇವಾಲದಕೆರೆ

ಅರ್ಜುನ್ ದೇವಾಲದಕೆರೆ, ಮೂಲತಃ ಸಕಲೇಶಪುರದ ದೇವಾಲದಕೆರೆಯವರಾದ ಲೇಖಕರು, ಮಲೆನಾಡಿನಲ್ಲಿ ಮನೆ ಮಾತಾಗಿರುವ ರಾಷ್ಟ್ರೀಯ ಬರಹಗಾರರು ಮತ್ತು ಭಾಷಣಕಾರರು. ಚಿಕ್ಕಮಗಳೂರಿನ ಜಿಲ್ಲಾ ಪತ್ರಿಕೆ ದರ್ಪಣದ ಖಾಯಂ ಅಂಕಣಕಾರರು. ಇಪ್ಪತ್ತೊಂಭತ್ತು ವರ್ಷದ ಇವರು, ಈಗಾಗಲೇ ಐನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ನೂರಕ್ಕೂ ಹೆಚ್ಚು ದಿಕ್ಕೂಚಿ ಭಾಷಣಗಳನ್ನು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗೆ ರಾಷ್ಟ್ರೀಯತೆಯನ್ನು ಪಸರಿಸುತ್ತ, ದೇಶದ ಬಗ್ಗೆ ಸೈನಿಕರ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುತ್ತಿರುವ ಇವರು ವೃತ್ತಿಯಲ್ಲಿ ಸಾಫ್ಟ್‌‌ ಉದ್ಯೋಗಿ, ದೇಶದ ಹೆಮ್ಮೆ ಸಾರಲು “ನನ್ನ ದೇಶ ನನ್ನ ಹೆಮ್ಮೆ’ ಎಂಬ ಚಿಕ್ಕ ತಂಡ ಕಟ್ಟಿಕೊಂಡು ರಾಜ್ಯದ ಮೂಲೆ ಮೂಲೆಗೆ ಭಾರತೀಯತೆಯನ್ನು ಪಸರಿಸುತ್ತಿದ್ದಾರೆ.