ಅವಳು ಬದುಕ ಕಲಿಸಿದವಳು

 196

SKU: dp002 Categories: ,

Out of stock

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications

SYNOPSIS

ಅವಳು ಕಾದಂಬರಿಯನ್ನು ನಾನು ಓದಿದ್ದು ಅರ್ಜುನ್‌ ಇನ್ನೊಂದು ಕಾದಂಬರಿ “ಆಟಗಾರ” ನನ್ನು ನನ್ನ ಕೈಯಾರೆ ಬಿಡುಗಡೆಗೊಳಿಸಿದ ನಂತರ, ಒಂದೇ ಗುಕ್ಕಿನಲ್ಲಿ ಓದಿಸಿಕೊಂಡಿತ್ತು ಅವಳು ಕಾದಂಬರಿ, ಕಾದಂಬರಿಯ ಪ್ರಾರಂಭದಲ್ಲಿ “ಅವಳನ್ನೋದುವ ಮುನ್ನ” ಎಂಬ ಪೀಠಿಕೆಯನ್ನು ಓದುತ್ತಿರುವಾಗ ಅರೆಕ್ಷಣ ನನ್ನ ಮಾವನವರಾದ ಕುವೆಂಪುರವರ ನೆನಪಾಗಿದ್ದು ಸುಳ್ಳಲ್ಲ. “ಅವಳು” ಎಲ್ಲೂ ಕೂಡ ಕಾಲ್ಪನಿಕವೆನಿಸುವುದಿಲ್ಲ. ನಮ್ಮ ಎದುರಲ್ಲೇ ನಡೆಯುತ್ತಿರುವ ನಮ್ಮ ಪಕ್ಕದ ಮನೆಯ ಹುಡುಗನ ಬದುಕಿನ ಏಳು-ಬೀಳುಗಳನ್ನು ಕಣ್ಣಾರೆ ಕಾಣುತ್ತಿರುವ ಭಾಸವಾಗುತ್ತದೆ. ಅವಳೊಳಗಿರುವ ಪ್ರೇಮ, ಅದನ್ನು ಕಾವ್ಯಾತ್ಮಕವಾಗಿ ಕೆಲವೆಡೆ ಪ್ರಸ್ತುತ ಪಡಿಸಿರುವ ರೀತಿಯಂತೂ ಅತ್ಯದ್ಭುತ. ಕಾದಂಬರಿಯನ್ನು ಸಂಪೂರ್ಣವಾಗಿ ಯುವಜನರಿಗೆ ಅರ್ಥವಾಗುವ ಭಾಷೆಯಲ್ಲಿ ಬರೆಯುತ್ತಾ ಹೋಗಿರುವುದು ಅರ್ಜುನ್‌ರವರ ಬಹುದೊಡ್ಡ ಶಕ್ತಿ ನನ್ನ ಅಳಿಯ ನಾನೀ ಕಾದಂಬರಿಯನ್ನು ಮನೆಗೆ ತಂದ ಮರುದಿನ ಬೆಂಗಳೂರಿನಿಂದ ಬಂದಿಳಿದಿದ್ದರು. ಬರುವಾಗ “ಸ್ಟೀಫನ್ ಹಾಕಿನ್ಸ್’ರ ಪುಸ್ತವನ್ನು ಓದಲೆಂದು ಜೊತೆತಂದಿದ್ದರು. ಅದನ್ನು ಬದಿಗೆ ಸರಿಸಿ ಅರ್ಜುನ್‌ರವರ “ಅವಳು” ಮತ್ತು “ಆಟಗಾರನನ್ನು ಕೈಗಿಟ್ಟಿದ್ದೆ. ಮುಗಿಸಿ ಎದ್ದವರು ಬಹಳವೇ ಸಂಭ್ರಮಪಟ್ಟರು. ಅರ್ಜುನ್ ದೇವಾಲದಕೆರೆ ಮಲೆನಾಡ ಭಾಗದಲ್ಲಿ ನಾ ಕಂಡ ಯುವಸಾಹಿತಿಗಳಲ್ಲಿ ಮುಂಚೂಣಿಯಲ್ಲಿರುವವರು. ಅವರೀಗ ಕನ್ನಡದ ರೈಸಿಂಗ್ ಸ್ಟಾರ್. ಅವರನ್ನು ಹರಸಿ ಬೆಳೆಸುವ ದೊಡ್ಡ ಜವಬ್ದಾರಿ ಕನ್ನಡಿಗರ ಮೇಲಿದೆ. ಜೊತೆಗೆ ನೀವು ಪುಸ್ತಕಕ್ಕೆ ಕೊಡುವ ದುಡ್ಡಿನ ದುಪ್ಪಟ್ಟು ನೀವೀ ಪುಸ್ತಕದಿಂದ ಪಡೆಯುತ್ತೀರೆಂಬುದು ನನ್ನ ಅಂಬೋಣ. ಇವರ “ಆಟಗಾರ” ಕೂಡ ಅದ್ಭುತವಾಗಿದ್ದಾನೆ. ಸಾಧ್ಯವಾದಲ್ಲಿ ಇವರ ಎಲ್ಲಾ ಪುಸ್ತಕಗಳನೊಮ್ಮೆ ಓದಿನೋಡಿ. ಶುಭವಾಗಲಿ

ABOUT AUTHOR

ಅರ್ಜುನ್ ದೇವಾಲದಕೆರೆ, ಮೂಲತಃ ಸಕಲೇಶಪುರದ ದೇವಾಲದಕೆರೆಯವರಾದ ಲೇಖಕರು, ಮಲೆನಾಡಿನಲ್ಲಿ ಮನೆ ಮಾತಾಗಿರುವ ರಾಷ್ಟ್ರೀಯ ಬರಹಗಾರರು ಮತ್ತು ಭಾಷಣಕಾರರು. ಚಿಕ್ಕಮಗಳೂರಿನ ಜಿಲ್ಲಾ ಪತ್ರಿಕೆ ದರ್ಪಣದ ಖಾಯಂ ಅಂಕಣಕಾರರು. ಇಪ್ಪತ್ತೊಂಭತ್ತು ವರ್ಷದ ಇವರು, ಈಗಾಗಲೇ ಐನೂರಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದಾರೆ. ನೂರಕ್ಕೂ ಹೆಚ್ಚು ದಿಕ್ಕೂಚಿ ಭಾಷಣಗಳನ್ನು ಮಾಡಿದ್ದಾರೆ. ರಾಜ್ಯದ ಮೂಲೆ ಮೂಲೆಗೆ ರಾಷ್ಟ್ರೀಯತೆಯನ್ನು ಪಸರಿಸುತ್ತ, ದೇಶದ ಬಗ್ಗೆ ಸೈನಿಕರ ಬಗ್ಗೆ ಜನಗಳಲ್ಲಿ ಅರಿವು ಮೂಡಿಸುತ್ತಿರುವ ಇವರು    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಅವಳು ಬದುಕ ಕಲಿಸಿದವಳು”

Your email address will not be published. Required fields are marked *