ನಾನು ಪಾರ್ವತಿ

 107

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .15 kg
Author
Page Nos
Publications

SYNOPSIS

ನಾನಿವತ್ತು ಒಬ್ಬ ನಟನಾಗಿ, ಒಬ್ಬ ಒಳ್ಳೆಯ ತಂದೆಯಾಗಿ, ಒಳ್ಳೆಯ ಗಂಡನಾಗಿ ಇರುವುದಕ್ಕೆ ಕಾರಣ ನಮ್ಮ ತಾಯಿಯವರು, ಜೀವನದಲ್ಲಿ ನಾನು ಮೊಟ್ಟ ಮೊದಲು ಕಲಿತಂಥ ಎಲ್ಲ ಸಂಗತಿಗಳಿಗೂ ನಮ್ಮಮ್ಮನೇ ಸ್ಪೂರ್ತಿ, ಹೆಣ್ಣುಮಕ್ಕಳನ್ನು ಗೌರವಿಸಬೇಕು ಅನ್ನುವುದನ್ನು ನಾನು ನೋಡಿದ್ದು, ಕಲಿತದ್ದು ನಮ್ಮ ತಾಯಿಯ ಮೂಲಕ. ನಾನು ಹುಟ್ಟಿ ಮೂರು ನಾಲ್ಕು ವರ್ಷವಾಗುವ ತನಕ ಈ ಜಗತ್ತನ್ನು ನೋಡಿದ್ದು ನಮ್ಮ ಅಮ್ಮನ ಮೂಲಕವೇ.
ಹೀಗಾಗಿಯೇ ಇವತ್ತು ಜೀವನದಲ್ಲಿ ಗಂಡು ಎಷ್ಟು ಮುಖ್ಯವೋ ಹೆಣ್ಣೂ ಅಷ್ಟೇ ಮುಖ್ಯ ಎಂದು ನಾನು ತಿಳಿದುಕೊಂಡಿದ್ದೇನೆ. ನಾವು ದೊಡ್ಡರು, ಅವರು ಚಿಕ್ಕೋರು. ನಾನು ಹೇಳಿದ ಹಾಗೆ ಅವರು ಕೇಳಬೇಕು ಎನ್ನುವ ಬೇಧಭಾವವನ್ನು ನಾನು ಯಾವತ್ತೂ ನೋಡಿಯೇ ಇಲ್ಲ. ನಾನು ಯಾವುದೋ ಸಮಾರಂಭಕ್ಕೆ ಹೋದರೂ ಅದನ್ನೇ ಹೇಳುತ್ತಿರುತ್ತೇನೆ. ಹೆಣ್ಮಕ್ಕಳು ಓದಬೇಕು. ಮುಂದೆ ಬರಬೇಕು. ಅವರೂ ಕೆಲಸಕ್ಕೆ ಸೇರಿಕೊಳ್ಳಬೇಕು. ಸ್ವಾವಲಂಬಿಗಳಾಗಬೇಕು. ಇದನ್ನು ನಾನು ಕಲಿತಿರೋದು ನಮ್ಮಮ್ಮನಿಂದಲೇ.
ನನಗೆ ಎರಡು ಮೂರು ವರ್ಷ ಇದ್ದಾಗಿನ ಒಂದು ನೆನಪು ಇದು; ನಮ್ಮ ಮನೆ ಆಗ ಚೆನ್ನೈಯಲ್ಲಿತ್ತು. ನಮ್ಮ ವಜೇಶ್ವರಿ ಕಂಬೈನ್ಸ್ ಕಛೇರಿ ಬೆಂಗಳೂರಲ್ಲಿತ್ತು. ಅಮ್ಮ ಒಂದು ಕೈಯಲ್ಲಿ ನನ್ನನ್ನು ಎತ್ತಿಕೊಂಡು ಮತ್ತೊಂದು ಕೈಯಲ್ಲಿ ಪರ್ಸ್ ಹಿಡಕೊಂಡು ಬೆಳಗ್ಗೆ ಚೆನ್ನೈಯಿಂದ ಬೆಂಗಳೂರಿಗೆ ಬಂದು, ಸಾಯಂಕಾಲದ ತನಕ ಕೆಲಸ ಮಾಡಿ, ಸಂಜೆ ಮತ್ತೆ ಚೆನ್ನೈಗೆ ಮರಳುತ್ತಿದ್ದರು. ಆ ವಯಸ್ಸಿನಿಂದಲೂ ನಾನು ಅಮ್ಮನ ಜೊತೆಗೇ ಬೆಳೆದವನು. ಹಾಗಾಗಿಯೇ ಜೀವನದಲ್ಲಿ ಎಲ್ಲಾ ಕೆಲಸವನ್ನೂ ಮಾಡಬೇಕು ಅನ್ನುವುದಕ್ಕೆ ನನಗೆ ಸ್ಪೂರ್ತಿಯಾದವರು ನಮ್ಮಮ್ಮ.
ಅವರು ಬೆಂಗಳೂರಿಗೆ ಬಂದು ನಮ್ಮ ಅಪ್ಪಾಜಿಯ ಕೈ ಹಿಡಿದು, ರಾಜ್‌ಕುಮಾರ್‌ ಅವರಂಥ ಮೇರುನಟನ ಪತ್ನಿಯಾಗಿ ದೊಡ್ಡ ಜವಾಬ್ದಾರಿಯನ್ನು ತಲೆಯ ಮೇಲೆ ಹೊತ್ತುಕೊಂಡು ಸಿನಿಮಾ ನಿರ್ಮಾಣ ಶುರುಮಾಡಿದ್ದು, ನಮ್ಮ ಅಪ್ಪಾಜಿಯವರ ಸಿನಿಮಾಗಳನ್ನು, ಶಿವಣ್ಣ, ರಾಘಣ್ಣನ ಸಿನಿಮಾಗಳನ್ನು ಮಾಡಿದ್ದು, ನನ್ನ ಸಿನಿಮಾಗಳನ್ನು ನಿರ್ಮಿಸಿದ್ದು ಇವೆಲ್ಲ ಹೆಮ್ಮೆಯ ಸಂಗತಿ. ಅವರು ಹಲವಾರು ನಿರ್ದೇಶಕರನ್ನು, ಛಾಯಾಗ್ರಾಹಕರನ್ನು, ನಟ-ನಟಿಯರನ್ನು ಚಿತ್ರರಂಗಕ್ಕೆ
ಕರೆತಂದವರು.
ಇವತ್ತು ಜೀವನದಲ್ಲಿ ನಾನೇನು ಆಗಿದ್ದೀನೋ ಅದಕ್ಕೆ ಸ್ಪೂರ್ತಿ ನಮ್ಮಮ್ಮ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ನಾನು ಅವರದೇ ಪ್ರೇರಣೆಯಿಂದ ಪಾರ್ವತಮ್ಮ ರಾಜ್‌ಕುಮಾರ್ ಪ್ರೊಡಕ್ಷನ್ ಆರಂಭಿಸಿದ್ದೇನೆ. ಅದು ಅವರ ಆಶೀರ್ವಾದ. ಅವರು ಹಾಕಿಕೊಟ್ಟ ದಾರಿಯಲ್ಲಿ ನಾನು ನಡೆಯುತ್ತಿದ್ದೇನೆ.
ನಮ್ಮ ತಾಯಿಯವರ ಬಗ್ಗೆ ಜೋಗಿ ಬರೆದಿರುವ ಈ ಪುಸ್ತಕ ನನಗೆ ಸಂತೋಷ ಕೊಟ್ಟಿದೆ.
-ಪುನೀತ್ ರಾಜ್‌ಕುಮಾರ್‌

ABOUT AUTHOR

ಗಿರೀಶ್ ರಾವ್ ಹತ್ವಾರ್.. ಈ ಹೆಸರು ಹೆಚ್ಚಿನ ಜನಕ್ಕೆ ಗೊತ್ತಿಲ್ಲ. ಯಾಕಂದ್ರೆ ಗಿರೀಶ್ ರಾವ್ ಹತ್ವಾರ್ ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿರೋದು ಜೋಗಿ ಹೆಸರಿನಲ್ಲಿ. ಜೋಗಿ, ಜಾನಕಿ, ಎಚ್.ಗಿರೀಶ್ ರಾವ್, ಸತ್ಯವ್ರತ ಹೀಗೆ ವಿವಿಧ ಅಂಕಿತ ನಾಮಗಳ ಮೂಲಕ ಓದುಗರ ಮನ ಗೆದ್ದವರು ಜೋಗಿ. 1965ರ ನವೆಂಬರ್ 16ರಂದು ಸೂರತ್ಕಲ್ ಸಮೀಪದ ಹೊಸಬೆಟ್ಟು ಗ್ರಾಮದಲ್ಲಿ ಜನಿಸಿದ ಜೋಗಿ ವೃತ್ತಿಯಲ್ಲಿ ಪತ್ರಕರ್ತರು. ಖ್ಯಾತ ವಾರ    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ನಾನು ಪಾರ್ವತಿ”

Your email address will not be published. Required fields are marked *