ದೀಪಾ ಹಿರೇಗುತ್ತಿ

ಕನ್ನಡ ಸಾಹಿತ್ಯ ಲೋಕದ ಯುವ ಹಾಗೂ ಭರವಸೆಯ ಸಾಹಿತಿ ದೀಪಾ ಹಿರೇಗುತ್ತಿ. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟ ತಾಲೂಕಿನ ಹಿರೇಗುತ್ತಿಯಲ್ಲಿ ರಾಮಚಂದ್ರ ನಾಯಕ್ ಹಾಗೂ ಭಾಗೀರಥಿ ದಂಪತಿಗಳ ಮಗಳಾಗಿ ಜನಿಸಿದರು ದೀಪಾ. ಶಿರಸಿ ಹಾಗೂ ಧಾರವಾಡದಲ್ಲಿ ವ್ಯಾಸಂಗ ಮುಗಿಸಿದ ದೀಪಾ ಹಿರೇಗುತ್ತಿ ಅವರು ಉತ್ತಮ ಲೇಖಕಿಯ ಜೊತೆಗೆ ವಾಗ್ಮಿ ಕೂಡ ಹೌದು. ಕಾಲೇಜು ದಿನಗಳಲ್ಲೇ ಭಾಷಣ, ಅಧ್ಯಯನ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದ ದೀಪಾ ಹಿರೇಗುತ್ತಿ ಸದ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಪದವಿ ಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ದೀಪಾ ಹಿರೇಗುತ್ತಿ ಬರೆದ ನಾನು- ನೀವು ಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಪ್ರಶಸ್ತಿ ಹಾಗೂ ಬೇಂದ್ರ ಪ್ರತಿಷ್ಠಾನದ ಬೇಂದ್ರೆ ಪುಸ್ತಕ ಬಹುಮಾನ ಲಭಿಸಿದೆ. ಜೊತೆಗೆ ಇವರ ಫಿನಿಕ್ಸ್ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ ನ ನೀಲಗಂಗಾ ದತ್ತಿ ಪ್ರಶಸ್ತಿ ದೊರೆತಿದೆ. ಅಲ್ಲದೆ 2015ರಲ್ಲಿ ಚಿಕ್ಕಮಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ದೀಪಾ ಹಿಉರೇಗುತ್ತಿ ಮುಡಿಗೇರಿಸಿಕೊಂಡಿದ್ದಾರೆ. ಇದರ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ ನ ಮಯೂರ ವರ್ಮ ಪ್ರಶಸ್ತಿಗೆ ದೀಪಾ ಹಿರೇಗುತ್ತಿ ಭಾಜನರಾಗಿದ್ದಾರೆ.