ಪಾಥೇರಸ್

 134

SKU: 9789393224231 Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .25 kg
Author
Page Nos
ISBN
Publications

SYNOPSIS

ದೇವರ ಅವತಾರಗಳ ಬಗ್ಗೆ ನಾವು ಕೇಳಿದ್ದೇವೆ. ಒಂದೊಂದು ಅವತಾರಕ್ಕೂ ಒಂದೊಂದು ಯುಗದಲ್ಲಿ ಅದರದ್ದೇ ಆದ ಕಥೆಗಳಿವೆ. ಆ ಕಥೆಗಳೇ ನಮ್ಮ ಅದೆಷ್ಟೋ ಕ್ರಿಯಾಶೀಲ ಯೋಚನೆಗಳಿಗೆ ಮೂಲ. ದೇವರು ಮೀನಿನ ರೂಪ, ಆಮೆಯ ರೂಪ, ಅರ್ಧ ಮನುಷ್ಯ, ಅರ್ಧ ಪ್ರಾಣಿ ರೂಪದ ಅವತಾರ ಆಗಬಹುದೆಂಬ ಕಥೆ ಕಲ್ಪನೆ ಹಾಗೂ ವಾಸ್ತವದ ನಮ್ಮ ನಂಬಿಕೆಯ ಮೂಲಾಧಾರ. ಮನುಷ್ಯ ಒಂದು ಜನ್ಮದಲ್ಲಿ ಬೇರೆ ಬೇರೆ ಕೆಲಸ ಮಾಡುತ್ತಿದ್ದರೆ ಅವನದ್ದು ಅದೆಷ್ಟು ಅವತಾರಗಳು ಎಂದು ರೇಗಿಸಿರುತ್ತೇವೆ. ಮನುಷ್ಯ ಮನುಷ್ಯನಾಗಿಯೇ ಅವತಾರ ಎತ್ತೋದಕ್ಕೆ ಸಾಧ್ಯವಿಲ್ಲ. ದೇವರು ಸಹ ಬೇರೆ ಲೋಕಕ್ಕೆ ಬಂದು ತನ್ನ ಅವತಾರ ಎತ್ತಿ ಎಲ್ಲರಿಗೂ ಸನ್ಮಂಗಳ ಉಂಟು ಮಾಡಿ ಹೊರಡುತ್ತಾನೆ. ಮನುಷ್ಯ ಇರುವ ಜನ್ಮದಲ್ಲಿ ಪಾಪ ಪುಣ್ಯಗಳ ಲೆಕ್ಕ ಹಾಕಿಕೊಂಡು ಸತ್ತ ಮೇಲೆ ಸ್ವರ್ಗವೋ, ನರಕವೋ ಇಲ್ಲ ಮತ್ತೆ ಮನುಷ್ಯ ಜನ್ಮವೋ, ಪ್ರಾಣಿ ಜನ್ಮವೋ ಎಂದು ಕಾದು ಕುಳಿತಿರುತ್ತಾನೆ. ಆದರೆ ಸತ್ತ ನಂತರ ಏನು ಎಂಬ ಪ್ರಶ್ನೆಗೆ ಥರಾವರಿ ಉತ್ತರಗಳು ಸಿಗುತ್ತವೇ ವಿನಃ ಇದೇ ದಾರಿ ಎಂದಂತೂ ನಮಗೆ ಗೊತ್ತಿಲ್ಲ. ಮೆಟಾವರ್ಸ್ ಎಂಬ ಅಲ್ಟರ್ನೇಟ್ ಜಗತ್ತನ್ನ ಈಗಿನ ದೊಡ್ಡ ದೊಡ್ಡ ಕಂಪೆನಿಗಳು ಸೃಷ್ಟಿ ಮಾಡುತ್ತಿವೆ. ಅಲ್ಲೀಗ ಮನುಷ್ಯ ಒಂದು ಅವತಾರ್” ರೂಪದಲ್ಲಿ ಜೀವಂತ ಇರುತ್ತಾನೆ. ಅವನಿಗೇ ಆದ ಒಂದು ನೀತಿ, ನಿಯಮ ಇದ್ದು ತಾನು ಅತ್ಯಂತ ಶಕ್ತಿಶಾಲಿಯೆಂದು ಅಂದುಕೊಂಡು, ಅವನಿಗೆ ಅಂತ್ಯವೇ ಇಲ್ಲ ಎಂಬ ಮನಸ್ಥಿತಿಯೊಂದಿಗೇ ಕಾಲ ಕಳೆಯುತ್ತಾನೆ. ದೇವರ ಅವತಾರಕ್ಕೆ ಕೊನೆ ಇರುವಾಗ ಮನುಷ್ಯನ ಅವತಾರ್’ ಕೊನೆಯಾಗುವುದಿಲ್ಲವೇ? ಮೆಟಾವರ್ಸಿನ ಅವತಾರ್’ನಲ್ಲಿ ಅಪ್ಪನನ್ನ ಶಾಶ್ವತವಾಗಿ ನೋಡುವ ಮಗಳ ಕನಸಿಗೆ ನೀರೆರೆದು ಪೋಷಿಸುವ ಕೆಲಸ ಒಂದೆಸಿ ಮಾಡುತ್ತಿದೆ. ಯಾರು ಸಿಂದೆಸಿ? ಯಾವ ಪ್ರಾಜೆಕ್ಟು ಎಂಬುದರ ಕುತೂಹಲಕರವಾದ ಮಾಹಿತಿ ಈ ಪುಸ್ತಕದಲ್ಲಿದೆ. ಅಂದಹಾಗೆ ಮೆಟಾ ಅಂದರೆ ಮೀರಿದ್ದು’ ಎಂದರ್ಥ. ವರ್ಸ್ ಎಂಬುದು ಯೂನಿವರ್ಸ್ ಪದದಿಂದ ಆಯ್ದುಕೊಂಡ ಭಾಗ. ಈ ಜಗತ್ತನ್ನು ಮೀರಿದ್ದು ಮೆಟಾವರ್ಸ್ ಎಂಬುದು ಇದರ ಸ್ಫೂಲ ಅರ್ಥ. ಮನುಷ್ಯನ ಕಲ್ಪನೆಗೂ ಎಲ್ಲೆ ಇಲ್ಲ, ಮೆಟಾವರ್ಸಿಗೂ ಇಲ್ಲ. ಮಗಳ ಎಲ್ಲೆ ಮೀರಿದ ಕನಸುಗಳಿಗೆ ಅಪ್ಪ ಮಾತ್ರ ರೆಕ್ಕೆ ಕೊಡಲು ಸಾಧ್ಯ. ಅಂತಹ “ಆವತಾರ್’ ನೀಳತೆಯನ್ನು ಇಲ್ಲಿ ಓದಬಹುದು.

ABOUT AUTHOR

ಮೇಘನಾ ಸುಧೀಂದ್ರ ಅವರು ಹುಟ್ಟಿದ್ದು ಬೆಂಗಳೂರಿನ ಜಯನಗರದ ಕತ್ತರಿಗುಪ್ಪೆಯಲ್ಲಿ.ಬಾರ್ಸಿಲೋನಾದಲ್ಲಿ ಓದಿ Master of Science in Artificial Intelligence and Signal Processing ಪದವಿ ಪಡೆದುಕೊಂಡಿದ್ದಾರೆ. ತಮ್ಮ ಓದಿನ ದಿನಗಳಲ್ಲಿದ್ದಾಗಲೇ ಒನ್ ಇಂಡಿಯಾದಲ್ಲಿ ಹಳೆ ಬೆಂಗಳೂರಿನ ಕಥೆಗಳು, ಪ್ರಸಂಗಗಳನ್ನು ಅಂಕಣ ರೂಪದಲ್ಲಿ "ಜಯನಗರದ ಹುಡುಗಿ" ಎಂಬ ಹೆಸರಿನಲ್ಲಿ ಬರೆದು ನಿರ್ವಹಣೆ ಮಾಡುತ್ತಿದ್ದರು.

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಪಾಥೇರಸ್”

Your email address will not be published. Required fields are marked *

Related Products