ನೀನೆ ರಾಜಕುಮಾರ

 267

SKU: neene Category:

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
ISBN
Publications

SYNOPSIS

ನಿಮ್ಮ ತಾಯಿ ಕಪ್ಪಗಿಲ್ಲವೇ? ಅವರು ನಮ್ಮಮ್ಮ. ಹೇಗಿದ್ದರೂ ಸರಿ.
ಈ ಪ್ರಶೋತ್ತರವನ್ನು ಕೇಳಿದಾಗೆಲ್ಲ ನನಗೆ ಆ ಪ್ರಶ್ನೆಯನ್ನು ಕೇಳಿದವರ ಮೇಲೆ ಸಿಟ್ಟೂ ಅದಕ್ಕೆ ತಕ್ಕ ಉತ್ತರ ಕೊಟ್ಟ ಪುಟ್ಟ ಪುನೀತ್ ಮೇಲೆ ಪ್ರೀತಿಯೂ ಉಕ್ಕುತ್ತಿತ್ತು. ಆವತ್ತಿನಿಂದಲೂ ಪುನೀತ್ ನನಗೆ ಮುಗಿಯದ ಅಚ್ಚರಿ. ಅವರನ್ನು ಭೇಟಿ ಆದಾಗೆಲ್ಲ ಹೊಸತೇನಾದರೂ ಹೇಳುತ್ತಾ, ತನ್ನ ಸದ್ಯದ ಚಟುವಟಿಕೆಗಳನ್ನು ವಿವರಿಸುತ್ತಾ ಇರುತ್ತಿದ್ದ ಪುನೀತ್ ನಾನು ನೋಡಿದ ಅತ್ಯಂತ ಸಂತೃಪ್ತ ವ್ಯಕ್ತಿಗಳಲ್ಲಿ ಒಬ್ಬರು. ಅವರು ಮನಸ್ಸು ಕೆಡಿಸಿಕೊಂಡದ್ದನ್ನು ನಾನು ಅಷ್ಟಾಗಿ ನೋಡಿಲ್ಲ.
ಪುನೀತ್ ಎಲ್ಲವನ್ನೂ ಒಪ್ಪಿಕೊಳ್ಳುತ್ತಿರಲಿಲ್ಲ. ತಮಗೆ ಇಷ್ಟವಾಗದೇ ಇದ್ದದ್ದನ್ನು ಥಟ್ಟನೇ ನಿರಾಕರಿಸುತ್ತಿದ್ದರು. ತನ್ನ ಸಾಮರ್ಥ್ಯ ಮತ್ತು ಮಿತಿ ಎರಡೂ ಅವರಿಗೆ ಗೊತ್ತಿತ್ತು. ಒಬ್ಬ ನಟ ತನ್ನ ಸೀಮೆಯನ್ನು ವಿಸ್ತರಿಸಿಕೊಳ್ಳಬೇಕು ಎಂದು ನಂಬಿ ನಡೆದವರು ಅವರು. ಪುನೀತ್ ಸಂಕ್ರಮಣ ಕಾಲದಲ್ಲಿರುವ ಹೊತ್ತಿಗೇ ನಮ್ಮನ್ನು ಬಿಟ್ಟು ಹೊರಟರು. ಅವರ ಕನಸು, ನಿರೀಕ್ಷೆ, ದೂರದರ್ಶಿತ್ವ, ಪ್ರತಿಭೆ ಮತ್ತು ಫಲಿತಾಂಶಗಳ ಒಂದು ಪುಟ್ಟ ಭಾಗವನ್ನಷ್ಟೇ ನಾವು ನೋಡಿದ್ದೇವೆ ಅಂತ ಅವರನ್ನು ಕಳಕೊಂಡ ನಂತರ ಅನ್ನಿಸುತ್ತಿದೆ. ಶರಣು ಹುಲ್ಲೂರು ಇಡೀ ಕುಟುಂಬದ ಚರಿತ್ರೆಯನ್ನೂ ಈ ಪುಸ್ತಕದೊಳಗೆ ತಂದಿದ್ದಾರೆ. ಹೇಗೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರ ಕುಟುಂಬದ ಪುನೀತ್, ಕಲೆ, ಅಧ್ಯಾತ್ಮ, ವೈಚಾರಿಕತೆ, ಆಡಳಿತ, ಜನಾನುರಾಗ- ಇವನ್ನೆಲ್ಲ ಎಷ್ಟು ಸೊಗಸಾಗಿ ಮೈಗೂಡಿಸಿಕೊಂಡಿದ್ದರು ಅನ್ನುವುದನ್ನು ಈ ಪುಸ್ತಕ ಸಮರ್ಥವಾಗಿ ವಿವರಿಸಿದೆ. ಪುನೀತ್ ಸತ್ವ, ಸಮತೆ, ಸಾಮರ್ಥ್ಯ ಮತ್ತು ಸಜ್ಜನಿಕೆಯನ್ನು ಬಲ್ಲವರಿಗೆ ಇದು ಮರು ಓದು. ಒಂದು ತಲೆಮಾರಿನ ಅಭಿನಯ ಕಥನ. ಅಕಾಲದಲ್ಲಿ ಅಗಲಿದ ಪ್ರತಿಭಾವಂತನ ಪೂರ್ಣಚರಿತೆ.

ABOUT AUTHOR

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ನೀನೆ ರಾಜಕುಮಾರ”

Your email address will not be published. Required fields are marked *