ಕನ್ನಡ ಮಾಣಿಕ್ಯ ಕಿಚ್ಚ

 178

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
ISBN
Publications

SYNOPSIS

ಅಸಾಧಾರಣ ದಾರಿಯಲ್ಲಿ 25 ವರ್ಷ ದಣಿವಾಗದೆ ನಡೆಯಬಲ್ಲ ತಾಕತ್ತು ಕೆಲವೊಬ್ಬ ನಟರಿಗೆ ಮಾತ್ರ ಸಾಧ್ಯ. ಇಷ್ಟು ಉದ್ದದ ಯಾನವನ್ನು ತೀರ ಸುಲಭ ಎಂಬ ರೀತಿ ಕಾಣುವಂತೆ ನಡೆದು ಬಂದವರು ಶ್ರೀ ಸುದೀಪ್. ಸ್ಟಾರ್ ಒಬ್ಬನ ಜೀವನ ಪಯಣ ಖಂಡಿತ ಸುಲಭದ್ದಲ್ಲ. ಜನರಿಗೆ ಆತನ ಸ್ಟಾರ್ ಪಟ್ಟ ಮಾತ್ರ ಕಾಣುತ್ತದೆ. ಆ ಸ್ಟಾರ್ ಕಿರೀಟದ ಒಳಗಿರುವ ಬಂಗಾರದ ಮುಳ್ಳುಗಳು ಮತ್ತು ಹೊರಜಗತ್ತಿಗೆ ಕಾಣುವ ಫಳ ಫಳ ಹೊಳೆವ ಹೂವು – ನಕ್ಷತ್ರಗಳನ್ನು ಒಟ್ಟಿಗೆ ಧರಿಸಿದ ಆ ನಟನ ತಲೆಬುರುಡೆಗೆ ಆಗುವ ‘ನೋವು’ ಕಾಣುವುದಿಲ್ಲ.

ನಟನೆ ಎಂಬುದು ಎಲ್ಲ ನೋವು ನಲಿವು ಬದಿಗಿಟ್ಟು ಲೋಕದ ಮುಂದೆ ಬೆತ್ತಲಾಗುವ ಅತ್ಯಂತ ಮುಲಾಜಿನ ಕೆಲಸ. ನಟನೆ ಎಂಬುದು ಶಿಳ್ಳೆ ಚಪ್ಪಾಳೆ ಸದ್ದಿಗೆ ಬೆವರು ಸುರಿಸುವ ಕಾಯಕ ಪ್ರೇಕ್ಷಕರ ಶಭಾಶ್‌ ಗಿರಿಗೋಸ್ಕರ ನಿದ್ದೆ ನೀರಡಿಕೆ ಬಿಟ್ಟು ಬದುಕುವ ತಪಸ್ಸು ಇದು.
ಇಂತಹ ದುರ್ಗಮ ದಾರಿಯ ಹಲವಾರು ತಿರುವುಗಳಲ್ಲಿ ಮುಗ್ಗರಿಸಿ, ಬಿದ್ದು, ಗೆದ್ದು, ಎದ್ದು, ಓಡಿ, ಅತ್ತು, ನಕ್ಕು, ನುಗ್ಗಿ ಬಂದ ಶ್ರೀ ಸುದೀಪ್ ಅವರ ಸಹನೆಗೆ ಸದಾ ಶುಭವಾಗಲಿ. ಕನ್ನಡ ಬೆಳ್ಳಿಪರದೆಯ ಶಾಶ್ವತ ಬಿಂಬಗಳಲ್ಲೊಬ್ಬರಾದ ಅವರ ಮತ್ತು ನಾಡಿನ ಜೊತೆಗಿನ ಸ್ನೇಹ ಡಬ್ಲ್ಯು ಡಬಲ್ ಆಗಲಿ.
ಎಲ್ಲರ ನಲ್ಕೆಯ ಈ ಈ ಕಿಚ್ಚನ ಕೆಚ್ಚು-ಹುಚ್ಚುಗಳೆರಡೂ ಇಡೀ ಲೋಕಕ್ಕೆ ಅಚ್ಚುಮೆಚ್ಚಾಗುತ್ತಲೇ ಸಾಗಲಿ.
ಅಚ್ಚುಕಟ್ಟಾಗಿ ಈ ಪುಸ್ತಕ ಬರೆದ ಗೆಳೆಯ ಶರಣು ಹುಲ್ಲೂರುಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

ABOUT AUTHOR

ವೃತ್ತಿಯಿಂದ ಪತ್ರಕರ್ತರಾಗಿರುವ ಡಾ. ಶರಣು ಹುಲ್ಲೂರು ಹುಟ್ಟಿದ್ದು ಗದಗ ಜಿಲ್ಲೆ ರೋಣ ತಾಲೂಕಿನ ಹುಲ್ಲೂರು ಗ್ರಾಮದಲ್ಲಿ. ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ ಪದವಿ ಪಡೆದಿರುವ ಅವರು ವಿಜಯ ಕರ್ನಾಟಕ ಪತ್ರಿಕಾ ಬಳಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 'ತಪ್ಪು ಮಾಡಿದ ತಾತ', 'ಮುಂದಿರುವ ಮೌನ', 'ಜುಗಲ್ಬಂದಿ' ಎಂಬ ಕವನ ಸಂಕಲನಗಳನ್ನು, ’ಚಂದನ ಸಿಂಚನ’ ಎಂಬ ಬಿ.ಜೆ.ಅಣ್ಣಿಗೇರಿ ಅವರ ಜೀವನ ಚರಿತ್ರೆಯನ್ನು, ’ಮಲ್ಲಿಗೆ’, ’ಕನಸಿನ ಹುಡುಗ’ ನಾಟಕವನ್ನು    Read More...

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಕನ್ನಡ ಮಾಣಿಕ್ಯ ಕಿಚ್ಚ”

Your email address will not be published. Required fields are marked *