#
nil
ಎಚ್.ಎಸ್. ರಾಘವೇಂದ್ರ
ಜೀವ ಕಾರುಣ್ಯದ ಕವಿತೆಗಳನ್ನು ಒಳಗೊಂಡ ಈ ಕೃತಿಯನ್ನು ಓದಲು ಹತ್ತು ಹಲವು ಕಾರಣಗಳಿವೆ. ಬಹುತ್ವದ ಆಶಯವನ್ನು ಕಟ್ಟಿಕೊಡುವ ಸಂಕಲನ ಸಮಕಾಲೀನ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.
ವಿವೇಕ್ ಶಾನಭಾಗ್
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ.
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ. ಬದುಕಿನಲ್ಲಿ ಒಡನಾಡಿದ ಲೇಖಕರು, ಪತ್ರಕರ್ತರು, ಬಂಧುಗಳ ವ್ಯಕ್ತಿತ್ವವನ್ನು ತಮ್ಮ ಅನುಭವಕ್ಕೆ ದಕ್ಕಿಸಿಕೊಂಡು ನುಡಿಚಿತ್ರಗಳಾಗಿ ಜೋಗಿ ಅವರು ಕಟ್ಟಿಕೊಟ್ಟಿದ್ದಾರೆ. ಇವರ ಬರಹದಲ್ಲಿ ಭಾವುಕತೆ ಇದೆ, ಹಸನುಗೊಳಿಸುವ ಬದುಕಿದೆ, ಜೀವನದಲ್ಲಿ ಏನೇ ಬಂದರೂ ಜಯಿಸಿ ನಿಲ್ಲುವ ಆತ್ಮಸೈರ್ಯದ ಮಾರ್ಗದರ್ಶಿ ನೋಟವಿದೆ. ಈ ಪುಸ್ತಕ ಓದುತ್ತಾ ಹೋದರೆ ನಮ್ಮ ಬದುಕಿನಲ್ಲಿ ಬಂದ ಒಡನಾಡಿಗಳ ನೆನಪು ಮರುಕಳಿಸದೇ ಇರದು. ಹಾಗಾಗಿ ಓದಲು ನಿಮಗೆ ಇದೊಂದು ಉತ್ತಮ ಪುಸ್ತಕ.
ರಾಧಾಕೃಷ್ಣ ಕೆ ವಿ
ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ. ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ.
Showing 331 to 360 of 2548 results