
ಬದುಕಿನ ಪ್ರತಿ ಕ್ಷಣವನ್ನೂ, ಅದು ಒಂದೇ ಬಾರಿಗೆ ನಮಗೆ ಸಿಗುವುದು ಎಂಬಂತೆ ಅನುಭವಿಸಬೇಕಾದರೆ ಈ ಕೃತಿ ನಿಮಗೆ ಒಳ್ಳೆಯ ಮಾರ್ಗದರ್ಶಿಯಾದೀತು. ಈ ‘ಇಚಿಗೊ ಇಚಿಯೆ’ ಎಂಬ ಜಪಾನಿ ಕಲೆಯ ಬಗ್ಗೆ, ಅತ್ಯಧಿಕ ಮಾರಾಟವಾಗುವ ‘ಇಕಿಗಾಯ್ʼನ ಲೇಖಕರೇ ಬರೆದಿರುವ ಪುಸ್ತಕ ಇದಾಗಿದೆ. “ತಮಗೆ ಖುಷಿ ಕೊಡುವ ಸಂಗತಿಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಸರಳಗೊಳಿಸಬೇಕು ಎಂದು ಇಕಿಗಾಯ್ ಪ್ರತಿಯೊಬ್ಬರನ್ನೂ ಆಗ್ರಹಿಸುತ್ತದೆ” (ಮೇರಿ ಕೊಂಡೊ). ನಮ್ಮ ಜೀವನದಲ್ಲಿ ಪ್ರತಿ ಕ್ಷಣವೂ ಒಂದೇ ಬಾರಿಗೆ ಸಂಭವಿಸುತ್ತದೆ ಮತ್ತು ಅದನ್ನು ನಾವು ಕೈಚೆಲ್ಲಿದರೆ ಅದನ್ನು ಶಾಶ್ವತವಾಗಿ ಕಳೆದುಕೊಂಡಂತೆ- ಜಪಾನಿನ ನಾಣ್ಣುಡಿ ‘ಇಚಿಗೊ ಇಚಿಯೆ’ಯಿಂದ ಆಯ್ದುಕೊಂಡಿರುವ ಒಂದು ಉಪಾಯ. ಇದು, ಝೆನ್ ಬೌದ್ಧ ಧರ್ಮದ ತತ್ವವಾಗಿದೆ. ಇದನ್ನು ಹದಿನಾರನೇ ಶತಮಾನದ ಓರ್ವ ಟೀ ಮಾಸ್ಟರ್‌ಗೆ ಸಮರ್ಪಿಸಲಾಗಿದ್ದು, ಅವರ ಚಹಾ ಕೂಟಗಳ ಆಚರಣೆಗಳಲ್ಲಿ, ವರ್ತಮಾನ ಕ್ಷಣದ ಮೇಲೆ ಹೇಗೆ ಗಮನ ಕೇಂದ್ರೀಕರಿಸಬೇಕು ಎಂಬುದನ್ನು ತೋರಿಸಿಕೊಡಲಾಗಿದೆ. ಇದನ್ನು ‘ಗಮನದ ಕೂಟ’ ಎಂದೂ ಕರೆಯಲಾಗುತ್ತದೆ. ಹಳೆಯ ಕಾಲದ ಈ ಆಚರಣೆಯಿಂದ, ನಮ್ಮಲ್ಲಿ ಸಾವಧಾನತೆ ಮೈದುಂಬಿಕೊಳ್ಳುತ್ತದೆ. ಇಚಿಗೊ ಇಚಿಯೆ ಎಂಬ ಈ ಪುಸ್ತಕದ ಮೂಲಕ, ಪ್ರಸ್ತುತ ಕ್ಷಣದಲ್ಲಿರಲು ಪಂಚೇಂದ್ರಿಯಗಳನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ನೀವು ಕಲಿಯುತ್ತೀರಿ. ನಾವು ಪ್ರತಿಯೊಬ್ಬರೂ, ಗಮನ ಎಂಬ ಬಾಗಿಲನ್ನು ತೆರೆಯುವ, ಇತರರೊಂದಿಗೆ ಸೌಹಾರ್ದದಿಂದಿರುವ ಮತ್ತು ಜೀವನದೆಡೆಗಿನ ಪ್ರೀತಿಯ ಕೀಲಿಕೈಯನ್ನು ಹೊಂದಿರುತ್ತೇವೆ. ಆ ಕೀಲಿಕೈಯೇ ಇಚಿಗೊ ಇಚಿಯೆ. “ನಮ್ಮ ಚೈತನ್ಯವನ್ನು ಬಡಿದೆಬ್ಬಿಸಿ, ‘ಈ ಕ್ಷಣ’ದಲ್ಲಿ ಬದುಕುವುದರ ಮಹತ್ವವನ್ನು ನಮಗೆ ನೆನಪಿಸಲು ಹಾಗೂ ಭೂತಕಾಲ ಇಲ್ಲವೇ ಭವಿಷ್ಯದ ಬಗ್ಗೆ ಚಿಂತಿಸದೇ ಬದುಕುವುದನ್ನು ನೆನಪಿಸಲು ಈ ಸಣ್ಣ ಪುಸ್ತಕ ಸಾಕು”- ೫* ಓದುಗರ ವಿಮರ್ಶೆ “ಈ ಪುಸ್ತಕವು ನಮಗೆ ಅಲಾರ್ಮ್ ನಂತೆ ಕೆಲಸ ಮಾಡಬೇಕು. ಪ್ರತಿಯೊಂದು ‘ಕ್ಷಣ’ವನ್ನೂ ಪವಿತ್ರಗೊಳಿಸಲು ಗಮನ ಕೊಡಿ! ಪ್ರತಿ ಕ್ಷಣವನ್ನೂ ವಿಶೇಷವಾಗಿಸಿ!!”- ೫* ಓದುಗರ ವಿಮರ್ಶೆ “ಇಕಿಗಾಯ್ ಲೇಖಕರು ಸರಳವಾದ ಮತ್ತು ಹೆಚ್ಚು ಪರಿಪೂರ್ಣವಾದ ಬದುಕು ಬಾಳಲು ಇಚ್ಛಿಸುವವರಿಗೆ ಮತ್ತೊಂದು ಸಂಕ್ಷಿಪ್ತವಾದ ಮತ್ತು ಪಾಂಡಿತ್ಯಪೂರ್ಣ ಸೇರ್ಪಡೆಯನ್ನು ಮಾಡಿದ್ದಾರೆ”- ೫* ಓದುಗರ ವಿಮರ್ಶೆ
Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | Hector Garcia |
Publisher: | Wow Publications |
Language: | Kannada |
Number of pages : | 120 |
Publication Year: | 2024 |
Weight | 300 |
ISBN | 9789390132171 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
Hector Garcia |
Hector Garcia |
0 average based on 0 reviews.