nil
ಶ್ರೀಮತಿ ಸುಖಲಾಕ್ಷಿಯವರು ಅನೇಕ ಬಗೆಯ ಲೇಖನಗಳನ್ನಿಲ್ಲಿ ಸಂಕಲಿಸಿದ್ದಾರೆ. ಮುಂಬಯಿಗಷ್ಟೇ ಸೀಮಿತಗೊಳಿಸದೆ, ಮಹಾರಾಷ್ಟ್ರದ ಹಿನ್ನೆಲೆಯೊಂದಿಗೆ, ಭಾಷೆ- ಸಂಸ್ಕೃತಿ, ಕೃಷಿಪದ್ಧತಿ, ರಂಗಭೂಮಿ, ನೃತ್ಯಕಲೆ ಇತ್ಯಾದಿ ಮತ್ತು ವಿವಿಧ ವಿಷಯಗಳ ಮೂವತ್ತಕ್ಕೂ ಮಿಕ್ಕಿದ ಬರೆಹಗಳಿವೆ. ಇದೊಂದು ಸಂಕೀರ್ಣ ಸಾಹಿತ್ಯ ಪ್ರಕಾರದ ಅಭಿವ್ಯಕ್ತಿ! ಇಲ್ಲಿ ಸಂದರ್ಭ ಚಿತ್ರಗಳಿವೆ, ವ್ಯಕ್ತಿಚಿತ್ರಗಳಿವೆ, ಸಾಮಾಜಿಕ ಹಿನ್ನೆಲೆಯ ಬರೆಹಗಳಿವೆ, ಸಾಧನಾ ಪಥಗಳ ದಾಖಲಾತಿಗಳೂ ಇವೆ! ವಿಶೇಷತಃ ಮಹಿಳೆಯರ ಸಾಧನೆಗಳನ್ನಿಲ್ಲಿ ರೇಖಿಸುವ ಪ್ರಯತ್ನವಿದೆ. ಏಷಿಯಾದ ಅತಿದೊಡ್ಡ ಕೊಳೆಗೇರಿಯೆನಿಸಿದ ಧಾರಾವಿಯ ವ್ಯಾವರ್ಣನೆಯೂ, ಕಾಮಾಟಿಪುರದ 'ಕೆಂಪುದೀಪ'ದ ಪ್ರದೇಶವೂ, ತೃತೀಯ ಲಿಂಗಿಗಳ ಪ್ರಸ್ತಾಪಗಳ ಸಹಿತ ಅನೇಕ ಸಾಂಸ್ಕೃತಿಕ ವಿಚಾರಗಳೂ ಇಲ್ಲಿ ಹಾದುಹೋಗುತ್ತವೆ. ಅನೇಕ ಲೇಖನಗಳ ಸಂಚಯನದ ಈ ಕೃತಿಯಲ್ಲಿ ಅತ್ಯಂತ ಸರಳವೂ " ನೇರವೂ ಆದ ಬಗೆಯಲ್ಲಿ ನಿರೂಪಿಸಿರುವ ಪ್ರಯತ್ನದ ಸಾಫಲ್ಯವನ್ನು ಕಾಣಬಹುದು
Showing 511 to 540 of 721 results