Delivery between 2-8 Days
No returns accepted. Please refer our full policy
Your payments are 100% secure
ಕೊಡಗಿನಲ್ಲಿ ಹುಟ್ಟಿ, ಬೆಳೆದ ಡಾ. ಕೆ.ಬಿ. ಸೂರ್ಯಕುಮಾರ್, ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಬರಹಗಾರರು. ವಿಧಿ ವಿಜ್ಞಾನ ವಿಭಾಗದಲ್ಲಿ ತಜ್ಞತೆ ಹೊಂದಿರುವ ಇವರು ತನ್ನ ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚಿನ ವೈದ್ಯಕೀಯ - ಅನುಭವಗಳನ್ನು ಮೆಡಿಕಲ್ ಕಾಲೇಜಿನ ಪ್ರೊಫೆಸರ್ - ಆಗಿ ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರ ಜೊತೆಗೆ, ರೋಗಿಗಳ ಶುಶೂಷೆಯಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ. ತಮ್ಮ ವೈದ್ಯಕೀಯ ಜೀವನದಲ್ಲಿ ಕಂಡಂತಹ ಅನೇಕ ಪ್ರಕರಣಗಳ ಬಗ್ಗೆ ಅವರು ಕಥಾನಕ ರೂಪದಲ್ಲಿ ಬರೆದ ಲೇಖನಗಳು ಈಗಾಗಲೇ 'ವೈದ್ಯ ಕಂಡ ವಿಸ್ಮಯ', 'ಕೌತುಕಗಳ ಮಾಯಾಜಾಲ', 'ವೈದ್ಯ ಲೋಕದ ಕಥೆಗಳು', 'ನಿಗೂಢ ಕೊಲೆಗಳು' ಎಂಬ ಪುಸ್ತಕಗಳಾಗಿ ಹೊರಬಂದು ಓದುಗರ ಮೆಚ್ಚುಗೆ ಗಳಿಸಿದೆ. ಕನ್ನಡದಲ್ಲಿ ವೈದ್ಯಕೀಯ ವಿವರಣೆಗಳು ಸ್ವಲ್ಪ ಕಡಿಮೆ ಇರುವ ಈ ದಿನಗಳಲ್ಲಿ ಸಾಮಾನ್ಯ ರೋಗಗಳ ಕಿರುನೋಟ ಬೀರುವ "ವೈದ್ಯಕೀಯ ಕೈಪಿಡಿ" ಎಂಬ ಪುಸ್ತಕ ಇತ್ತೀಚಿಗೆ ಹೊರ ಬಂದಿದೆ. ಡಾ. ಸೂರ್ಯಕುಮಾರ್ ವೈದ್ಯ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ವೈದ್ಯಕೀಯ ಸಂಘಗಳು ಮತ್ತು ಕೆಲವು ಸಂಸ್ಥೆಗಳವರು ಸನ್ಮಾನಿಸಿದ್ದಾರೆ.
ತನ್ನ ಇಳಿ ವಯಸ್ಸಿನಲ್ಲೂ ತನ್ನಲ್ಲಿಗೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ, ಸ್ಥಳೀಯ ಪತ್ರಿಕೆಗಳಲ್ಲಿ ವೈದ್ಯಕೀಯ ಲೇಖನಗಳನ್ನು ಬರೆಯುತ್ತಾ ಜನರಿಗೆ ಮಾರ್ಗದರ್ಶನ ನೀಡಲು ಈಗಲೂ ಪ್ರಯತ್ನಿಸುತ್ತಿದ್ದಾರೆ.
0 average based on 0 reviews.