• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Authors

Languages

Book Type

Clear All
Filter
ಕವಿರಾಜ್‌ ಮಾರ್ಗದಲ್ಲಿ... | Kaviraj Margadalli...

ಒಟ್ಟು 28 ಅಧ್ಯಾಯಗಳಿರುವ ಈ ಪುಸ್ತಕದ ಎಲ್ಲಾ ಅಧ್ಯಾಯಗಳೂ ಭರಪೂರ ಆತ್ಮ ನಿವೇದನೆಯಂಥಾ ರಸಪಾಕಗಳೇ. ಯಾವುದು ಚೆನ್ನಾಗಿದೆ, ಯಾವುದು ಚೆನ್ನಾಗಿಲ್ಲ ಎಂದು ವಿಂಗಡಿಸುವುದು ಸಾಧ್ಯವೇ ಇಲ್ಲ. ಒಮ್ಮೆ ಓದಲು ಶುರುವಿಟ್ಟುಕೊಂಡರೆ ಸಾಕು ನಿಲ್ಲಿಸುವ ಮನಸ್ಸೇ ಬಾರದು. ಉದಾಹರಣೆಗೆ 'ಎನೌಂಟರ್ ವಿತ್ ಮುತ್ತಪ್ಪ ರೈ' ಅಧ್ಯಾಯವನ್ನೇ ತೆಗೆದುಕೊಳ್ಳಿ, ಇಲ್ಲಿ ಯಾವುದಿಲ್ಲ, ಯಾವುದುಂಟು ಎಂದು ವಿಂಗಡಿಸುವುದು ಕಷ್ಟ ಕಷ್ಟ.. 'ಹಮ್ಮುಬಿಮ್ಮಿಲ್ಲದ ಹೃದಯವಂತ ದೊರೆ'ಯಲ್ಲಿನ ಅಂಬರೀಶ್ ನಮ್ಮ ಮುಂದೆ ಬೇರೆಯದ್ದೇ ಅವತಾರ ತಾಳಿ ಪ್ರತ್ಯಕ್ಷರಾಗುತ್ತಾರೆ. 'ಸಾಹಸಸಿಂಹನ ಸನ್ನಿಧಿಯಲ್ಲಿ'ನ ವಿಷ್ಣುವರ್ಧನ್ ಮತ್ತಷ್ಟು ಹತ್ತಿರವಾಗುವುದು ಕವಿಯ ನಿರ್ಮಲ ಹೃದಯದ ಅಭಿವ್ಯಕ್ತಿಯಿಂದ. 'ಈ ಮನುಷ್ಯರನ್ನೇಕೆ ದೇವತಾ ಮನುಷ್ಯ ಅನ್ನೋದು' ಅಧ್ಯಾಯದ ರಾಜಕುಮಾರ್ ನಮ್ಮ ಮುಂದೆ ಪ್ರತ್ಯಕ್ಷವಾಗುವ ರೀತಿ ಬೇರೆಯದ್ದೇ ಆದ ಅಂಗಲ್‌ನಲ್ಲಿ. 'ಕಿಚ್ಚನ ಪತ್ನಿಯ ಕಿವಿಯೋಲೆ ಪ್ರಸಂಗ'ದಲ್ಲಿ ಈ ಕವಿ ತಮ್ಮನ್ನು ತಾವೇ ಹೀಯಾಳಿಸುತ್ತಾರೋ, ಸಾಂತ್ವನಗೊಳಿಸುತ್ತಾರೋ, ರಹಸ್ಯ ಬಿಚ್ಚಿಡುತ್ತಾರೋ... ಅದೊಂದು ಸಸ್ಪೆನ್ಸ್. ಹಾಗೆಯೇ 'ಸಲಾಂ ಯಶ್ ಭಾಯ್', 'ರಶ್ಮಿಕಾ ಕ್ರಶ್ಮಿಕಾ ಆಗುವ ಮುನ್ನ...' ಮೊದಲಾದ ಅಧ್ಯಾಯಗಳು ರಸಿಕ ಹೃದಯದ ಸಂವೇದನೆಗಳು! ಸರಾಗವಾಗಿ ಓದಿಸಿಕೊಂಡು ಹೋಗುವ ಕವಿಯ ಶೈಲಿಗೆ ನಮೋ ನಮಃ. ಕಣ್ಣಿಗೆ ಕಟ್ಟಿದಂತೆ ಅಕ್ಷರಗಳಲ್ಲಿ ಘಟನೆಗಳನ್ನು ಹೆಣೆಯುವ ಪರಿಗೆ ಯಾರಾದರೂ ಅಚ್ಚರಿಗೊಳ್ಳಲೇಬೇಕು. ಎಲ್ಲೂ ಬೋರು ಹೊಡೆಯದಂತೆ ವಾಕ್ಯ ರಚನೆಯಲ್ಲಿ ತೆಗೆದುಕೊಂಡ ಜಾಗ್ರತೆ ನಿಚ್ಚಳವಾಗಿ ಎದ್ದುಕಾಣುತ್ತದೆ. ಇದು ಈ ಕೃತಿಯ ಸಾರ್ಥಕತೆ. ಗಣೇಶ್ ಕಾಸರಗೋಡು

₹250   ₹223

ಬಿದಿಗೆ ಚಂದ್ರಮನ ಬಿಕ್ಕು | Bidige Chandramana Bikku

ಕಥೆಗಳೆಂದರೇನು? ನನ್ನ ಪ್ರಕಾರ ಅನುಭವದ ಹಗೇವಿನಲ್ಲಿ ಕಾಲ್ಪನಿಕತೆಯ ಲೇಪವನ್ನು ಹೊತ್ತು ಹುಟ್ಟುವ ಬರಹಗಳೇ ಕಥೆಗಳು. ಹಾಗೇ ಹುಟ್ಟಬೇಕು ಕಥೆಗಳು, ಅನುಭವಿಸಿ ಬರೆಯದ ಹೊರತು, ಅಸ್ವಾದಿಸಿಕೊಂಡು ಓದಲಾಗುವುದಿಲ್ಲ. ಈ ಇಡೀ ಪುಸ್ತಕದಲ್ಲಿ ಓದುಗನಿಗೊಂದು ಅಂತಹ ಆಸ್ವಾದ ದೊರೆಯುವುದು ಖಂಡಿತ. ಇಲ್ಲಿ ಕಾಗಕ್ಕ-ಗುಬ್ಬಕ್ಕನ ಕಥೆಗಳಿಲ್ಲ. ಇಲ್ಲಿರುವುದೆಲ್ಲ ನಮ್ಮ-ನಿಮ್ಮ ಕಥೆಗಳೇ. ನಾವುಗಳು ಹಿಂದೆಂದೋ ನೋಡಿದ್ದೋ, ಕೇಳಿದ್ದೋ, ಅನುಭವಿಸಿದ ಅನುಭವಗಳೋ ಕಥೆಗಳಾಗಿ ನಮ್ಮ ಮುಂದೆ ನಿಂತಂತೆ ಭಾಸವಾಗುತ್ತದೆ. ಮಲೆನಾಡ ಸೊಗಡಿರುವ ಕಥೆಗಳು, ಬಯಲು ಸೀಮೆಗೂ ಸಲ್ಲುತ್ತವೆ. ಇಲ್ಲಿರುವ ಹೆಂಗಳೆಯರ ನೋವುಗಳು, ಗಂಡಸರನ್ನೂ ಕಾಡುತ್ತವೆ. ಕೆಲವೊಂದು ಕಥೆಗಳು ತರ್ಕಕ್ಕೆ ದೂಡಿದರೆ, ಇನ್ನಷ್ಟು ಕಥೆಗಳು ಮನಸ್ಸನ್ನು ಆದ್ರ್ರಗೊಳಿಸುತ್ತವೆ. ನನ್ನ ಪ್ರಕಾರ ಈ ಪುಸ್ತಕವನ್ನ ಒಂದೇ ಗುಕ್ಕಿನಲ್ಲಿ ಓದಲಾಗುವುದಿಲ್ಲ. ಅದಕ್ಕೆ ಕಾರಣ ಇಲ್ಲಿ ಪ್ರಸ್ತಾಪವಾಗಿರುವ ವಿಷಯಗಳು. ಒಂದು ಕಥೆಯ ವಿಷಯವನ್ನ ಅರಗಿಸಿಕೊಂಡು ಮುಂದಿನ ವಿಷಯಕ್ಕೆ ತಮ್ಮನ್ನ ತಾವು ತೆರೆದುಕೊಳ್ಳಲು ಖಂಡಿತ ಓದುಗನಿಗೆ ಸಮಯಬೇಕು. ಅಷ್ಟು ಗಾಢವಾಗಿವೆ ವಿಷಯಗಳು. ಉಳಿದಂತೆ, ಓದುಗರಿಗೆ ಶ್ರೀಮತಿ ಶುಭಶ್ರೀ ಭಟ್ ಹೊಸಬರಲ್ಲ. ಅವರಿಗೆ ಭಾಷೆಯ ಮೇಲೆ ಮತ್ತು ಬರಹದ ಮೇಲಿರುವ ಅದ್ಭುತ ಹಿಡಿತದ ಬಗ್ಗೆ ಓದುಗರಿಗೆ ತಿಳಿದೇ ಇದೆ. ಹಾಗಾಗಿ ಅದರ ಬಗ್ಗೆ ಹೆಚ್ಚೇನೂ ಹೇಳದೆ, ಮತ್ತೊಂದು ಭಾವಯಾನಕ್ಕೆ ತಯಾರಾಗಿ ಎಂದಷ್ಟೇ ಹೇಳಬಲ್ಲೆ. ಕಥೆಗಳು ನಿಜಕ್ಕೂ ಅದ್ಭುತವಾಗಿ ಮೂಡಿಬಂದಿವೆ. ಓದಿ ನೋಡಿ ಒಮ್ಮೆ... ಹ್ಯಾಪಿ ರೀಡಿಂಗ್. - ಅರ್ಜುನ್ ದೇವಾಲದಕೆರೆ

₹170   ₹151

ಮಂಗಳಿ | mangali

₹230   ₹184

ಯೋಳ್ತಿನ್ ಕೇಳಿ | Yoltin Keli

ನಾಳೆಗಿದು ಇರದಿದ್ದರೆ ಹೇಗೆ ಎಂಬ ಆತಂಕಕ್ಕೂ, ಇದು ನಾಳೆಗೂ ಇರಬೇಕು ಎಂಬ ಆಶಯಕ್ಕೂ ಯಾವುದೇ ಅರ್ಥವಿಲ್ಲ. ಹಿಂದೆ ಎಷ್ಟೆಲ್ಲಾ ಆಗಿಹೋಗಿದೆ, ಕೂಡಿದೆ, ಕಳೆದಿದೆ, ನಾಶವಾಗಿದೆ, ಹುಟ್ಟಿದೆ. ಮುಂದೆಯೂ ಏನೆಲ್ಲಾ ಆಗಲಿಕ್ಕಿರಬಹುದು. ಅಖಂಡ ಕಾಲದ ಯಾವುದೋ ಬಿಂದುವಿನಲ್ಲಿ ನಿಂತಿದ್ದೇವೆ ನಾವು. ಆ ಬಿಂದು ಸಂಪೂರ್ಣ ಮುಗಿತಾಯಕ್ಕೆ ಎಷ್ಟು ಅಂತರದಲ್ಲಿದೆಯೋ ನಮಗೆ ಹೇಗೆ ಗೊತ್ತಾಗಬೇಕು ? ಇದು ಒಳ್ಳೆಯ ಕಾಲ ಅಂತ ನಿರ್ಧರಿಸುವ ಮಾನದಂಡ ಯಾವುದು ? ನಾವು ಬದುಕಿದ್ದವೆಂಬ ಕಾರಣಕ್ಕೆ ಅದು ಒಳ್ಳೆಯ ಕಾಲವೇ ? ಆಗಿರಬಹುದು, ಆಗಿಲ್ಲದಿರಬಹುದು. ಕಾಲಕ್ಕೆ ಒಳಿತು ಕೆಡುಕುಗಳೆಂಬುದಿದೆಯೇ ? ನಮ್ಮ ನೋಟ ಸಂಕುಚಿತ. ಕಾಲದ್ದು ಸಮಗ್ರ ನೋಟ. ನಮ್ಮ ಕಾಲಕ್ಕೆ ಬಹುದೊಡ್ಡ ಸಂಗತಿಯಾದದ್ದು ಕಾಲದ ಪಾಲಿಗೆ ಯಕಶ್ಚಿತ್ ಆಗಿರಬಹುದು. ನಮಗೆ ಪತ್ರಗಳ ಕಾಲದ ಕಾಯುವಿಕೆಯ ಭಾವುಕತೆಯೂ ಬೇಕು. ವಾಟ್ಸಪ್ ಗ್ರೂಪೂ ಬೇಕು. ಆದರೆ ಅವೆರಡೂ ಏಕಕಾಲದಲ್ಲಿ ಒಟ್ಟಿಗೇ ಇರಲಾರವು. ಛೇ ಪತ್ರವೆಷ್ಟು ಚೆಂದವಿತ್ತು ಎಂಬ ನೆನಪಿನೊಂದಿಗೇ ಅದನ್ನು ಗೌರವಯುತವಾಗಿ ಬೀಳ್ಕೊಟ್ಟು ಹೊಸ ರೂಪಾಂತರವನ್ನು ಸ್ವಾಗತಿಸಬೇಕು. ಅದು ಅನಿವಾರ್ಯ ಕೂಡ. ಆದರೂ ನಮಗೆ ಹಿಂದೆ ಚೆಂದವಿತ್ತು ಅನಿಸಬೇಕು. ಬದಲಿನ ನಿಯಮ, ಅನಿವಾರ್ಯತೆ ಎಲ್ಲದರ ಅರಿವಿದ್ದೂ ಹಿಂದೆ ಹೀಗಿತ್ತಲ್ಲಾ... ಎಂಬ ನೆನಪು ಮತ್ತು ಕಳೆದುಹೋಗುವಾಗಿನ ಕಳವಳ ಕಾಡಬೇಕು ಕಿಂಚಿತ್ತಾದರೂ. ಹಾಗೆ ಕಾಡಿದರೇನೇ ನಾವು ಮನುಷ್ಯರು!

₹180   ₹160

ಹಾವು ಏಣಿ ಆಟ | haavu Eni Aata

ಹಾವು ಏಣಿ ಆಟ ಒಂದು ವಿಶಿಷ್ಟ ಕಥಾವಸ್ತು ಹೊಂದಿರುವ ಕಾದಂಬರಿ. ಕನ್ನಡ ಕಾದಂಬರಿ ಲೋಕದಲ್ಲಿ ಒಂದು ಹೊಸ ಪ್ರಯತ್ನ. ಇದೊಂದು "ಮೆಡಿಕೋ ಲೀಗಲ್ ಡ್ರಿಲ್ಲರ್" ಔಷಧ ವಿಜ್ಞಾನದ ಪರ ಮತ್ತು ವಿರುದ್ಧದ ಕಾನೂನಿನ ಹೋರಾಟದ ಕಥೆ. ಈ ಕಾದಂಬರಿಯಲ್ಲಿ ಒಂದು ಕೊಲೆಯ ತನಿಖೆಯಿದೆ. ಅದರ ಹಿಂದಿರುವ ಭಯಾನಕ ಸತ್ಯದ ಅನಾವರಣವಿದೆ. ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಅವ್ಯಕ್ತವಾಗಿ ಪ್ರವೇಶಿಸಿ, ನಮ್ಮ ಜೀವದ ಜೀವದ ಜೊತೆ, ಜೀವನದ ಜೊತೆ ಆಟವಾಡುವ ಫಾರ್ಮಾ ಲಾಬಿಯ ದುರಾಸೆಯಿದೆ. ಇದರ ಮಧ್ಯೆ ಅರಿತೊ ಅರಿಯದೆಯೋ ನಲುಗುವ ಜನರ ನೋವಿದೆ. ಆ ನೋವನ್ನೇ ಬಂಡವಾಳ ಮಾಡಿಕೊಳ್ಳುವ ಸ್ವಾರ್ಥವಿದೆ. ಇವೆಲ್ಲದರ ವಿರುದ್ಧ ಕೋರ್ಟ್‌ನಲ್ಲಿ ನಡೆಸುವ ಹೋರಾಟವಿದೆ. ಸತ್ಯ ಅನ್ನುವುದು ನಮ್ಮ ನಮ್ಮ ದೃಷ್ಟಿಕೋನವಷ್ಟೇ. ನಮ್ಮ ಕಣ್ಣಿಗೆ ಕಂಡಿದ್ದು, ನಾವು ತಿಳಿದಿರುವುದು ಅಥವಾ ನಾವು ತಿಳಿಯಲೆಂದೇ ಕೊಡುವ ಮಾಹಿತಿಗಳು ಮಾತ್ರವೇ ಸತ್ಯವಲ್ಲ. ಒಮ್ಮೆ ಶೋಧಿಸಲು ಮುಂದಾದಾಗ ಆ ಸತ್ಯದ ಪರದೆಯ ಹಿಂದೆ ಅಡಗಿರುವ ಇನ್ನೊಂದು ಸತ್ಯ ನಮ್ಮ ಮುಂದೆ ಧುತ್ತನೆ ಬಂದು ನಿಂತಾಗ ಅದು ನಮ್ಮ ನಂಬಿಕೆಯ ಬುನಾದಿಯನ್ನೇ ಅಲುಗಾಡಿಸಿ ಯಾರು ಸರಿ ಯಾರು ತಪ್ಪು ಎನ್ನುವ ಪ್ರಶ್ನೆ ಹುಟ್ಟಿಹಾಕುತ್ತದೆ.

₹300   ₹267

ಹಿನ್ನೀರ ದಂಡೆಯ ಸೀತಾಳೆದಂಡೆ | Hinnira dandeya seetaladande

ಸಣ್ಣ ಸಣ್ಣ ಸಂಗತಿಗಳನ್ನು ಸಾಂದ್ರವಾಗಿ ಭಾವಪೂರ್ಣವಾಗಿಸುವ ಇಲ್ಲಿನ ಕಥೆಗಳು; ಚಂದದ ಬದುಕೊಂದಕ್ಕಾಗಿ ಹಂಬಲಿಸಿದಂತಿವೆ. ಹಿನ್ನೀರದಂಡೆಯಿಂದ ಮಹಾನಗರದ ಮಧ್ಯಕ್ಕೆ ತಂದು ನಿಲ್ಲಿಸಿದ ಕಥೆಗಾರ್ತಿಯ ಜೀವನಾನುಭವಗಳೇ ಕಥೆೆಗಳ ಹೂರಣವೆನಿಸುತ್ತದೆ. ಸಮಕಾಲೀನ ಸಂದಿಗ್ಧತೆಗಳ ಸೂಕ್ಷö್ಮ ಪದರುಗಳನ್ನು ಸಾವಧಾನದಿಂದ ಕಂಡರಸುವ ಕತೆಗಳು; ವಾಸ್ತವವನ್ನು ತದೇಕಚಿತ್ತದಿಂದ ದಿಟ್ಟಿಸಿವೆ. ಹೆಣ್ಣಿನ ಒಳತೋಟಿಗಳು ಆಧುನಿಕ ಅವಸ್ಥಾಂತರದ ಗರಡಿಯಲ್ಲಿ ಪಳಗಿ ಗಟ್ಟಿಪಾತ್ರಗಳಾಗಿ ಅರಳಿ ಹೊರಳಿವೆ. ಕನ್ನಡ ಕಥಾಲೋಕಕ್ಕೆ ಸೇರ್ಪಡೆಯಾಗಲೇಬೇಕಾದ ಕಥೆಗಳಿವು ಎನಿಸುತ್ತದೆ. - ಡಾ. ರತ್ನಾಕರ ಸಿ.ಕುನುಗೋಡು ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಿಪ್ಪನಪೇಟೆ

₹130   ₹104