| Category: | ಕನ್ನಡ |
| Sub Category: | ಕಾದಂಬರಿ |
| Author: | ಬೇಲೂರು ರಾಮಮೂರ್ತಿ | Beluru Ramamurthy |
| Publisher: | ಅಂಕಿತ ಪುಸ್ತಕ | Ankita Pustaka |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಿರ್ಜನವಾದ ಬೀದಿ. ಸರಿಜೆಗತ್ತಲು, ಒಬ್ಬ ವ್ಯಕ್ತಿ ಹಿಂದೆ ಹಿಂದೆ ತಿರುಗಿ ನೋಡುತ್ತಾ ಅನುಮಾನಾಸ್ಪದವಾಗಿ ಬೇಗ ಬೇಗ ಹೆಜ್ಜೆ ಹಾಕುತ್ತಿದ್ದಾನೆ. ಅವನಿಗೆ ಗೊತ್ತಾಗದಂತೆ ಒಬ್ಬ ಹಿಂಬಾಲಿಸುತ್ತಿದ್ದಾನೆ. ಅವನ ಕೈಯಲ್ಲಿ ಪಿಸ್ತೂಲಿದೆ. ದೂರದಲ್ಲೆಲ್ಲೋ ನಾಯಿ ಬೊಗಳುತ್ತಿದೆ. ಸಣ್ಣದಾಗಿ ಮಳೆ ಬೀಳುತ್ತಿದೆ. ಮುಂದೆ ಹೋಗುತ್ತಿದ್ದ ವ್ಯಕ್ತಿ ಓಡಲು ಆರಂಭಿಸುತ್ತಾನೆ. ಹಿಂಬಾಲಿಸುತ್ತಿದ್ದವ ಕೂಡಲೇ ಗುರಿಯಿಟ್ಟು ಪಿಸ್ತೂಲಿನಿಂದ ಇನ್ನೇನು ಗುಂಡು ಹಾರಿಸಬೇಕು... ...ಇಲ್ಲ ಇಲ್ಲ. ಬೇಲೂರು ರಾಮಮೂರ್ತಿಯವರ ಪುಸ್ತಕದಲ್ಲಿ ಹೀಗೆಲ್ಲಾ ಆಗುವುದಿಲ್ಲ. ಕೊಲೆಯಾಗುತ್ತದೆ ನಿಜ. ಅದೂ ಹಾಡು ಹಗಲಲ್ಲೇ ಆ ಕೊಲೆಗಾರನನ್ನು ಪತ್ತೆಹಚ್ಚಲು ಪೋಲಿಸರು ತಮ್ಮೆಲ್ಲಾ ಬುದ್ದಿ ಖರ್ಚು ಮಾಡುತ್ತಾರೆ. ಕಂಡ ಕಂಡವರ ಮೇಲೆಲ್ಲಾ ಅನುಮಾನ ಪಡುತ್ತಾರೆ. ಪ್ರತಿ ಅಧ್ಯಾಯವೂ ಆಕಸ್ಮಿಕ ತಿರುವುಗಳನ್ನು ಹೊಂದಿದೆ. ಓದುಗರು ಮುಂದಿನ ದೃಶ್ಯ ಊಹಿಸುವುದರಲ್ಲಿ ಮತ್ತೇನೋ ನಡೆದಿರುತ್ತದೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಈ ಮಾಯಾಜಾಲದ ಪತ್ತೇದಾರಿ ಕಾದಂಬರಿಯನ್ನು ನೀವು ಓದಿಯೇ ಸವಿಯಬೇಕು.
ಬೇಲೂರು ರಾಮಮೂರ್ತಿ | Beluru Ramamurthy |
|
ಸಾಹಿತಿ ಬೇಲೂರು ರಾಮಮೂರ್ತಿ ಅವರು ಮೂಲತಃ ಮೈಸೂರಿನವರು. ತಮ್ಮ ಹಾಸ್ಯ ಲೇಖನಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರು. ಅವರು 1950 ಜೂನ್ 30ರಲ್ಲಿ ಜನಿಸಿದರು. ‘ಕಥಾ ಕುಸುಮ, ಕಥಾ ಕನ್ನಡಿ, ಕಥಾ ಬಿಂಬ, ಆಕಾಶದಿಂದ ಧರೆಗೆ’ ಅವರ ಕತಾ ಸಂಕಲನಗಳು. ‘ಪ್ರಬಂಧ, ನಾಟಕ, ಕಾದಂಬರಿ, ಹಾಸ್ಯ’ ಪ್ರಕಾರಗಳಲ್ಲಿ ಕೃಷಿ ಸಾಧಿಸಿದ್ದಾರೆ. |
0 average based on 0 reviews.