
Category: | ಕನ್ನಡ |
Sub Category: | ಅನುಭವ ಕಥನ |
Author: | Dadapeer Jyman |
Publisher: | Harivu Book |
Language: | Kannada |
Number of pages : | |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದು ಲೇಖಕನೂ ಸೇರಿದಂತೆ ಹಲವು ಜನರ ಕಷ್ಟ ಕೋಟಲೆಗಳು, ದುಗುಡ ದುಮ್ಮಾನಗಳು, ಭಾವನೆಗಳು, ಬದುಕಿನ ಬಗೆಗಿನ ಹಲವು ಗ್ರಹಿಕೆಗಳು ಸಂಧಿಸುವ ಜಂಕ್ಷನ್ ಪಾಯಿಂಟ್. ಹಲವು ದಾರಿಗಳು ಕೂಡುವ ಜಂಕ್ಷನ್ ಹಲವು ದಾರಿಗಳು ಹೊರಡುವ ಜಂಕ್ಷನ್ನೂ ಹೌದು. ಅಲ್ಲಿ ನಿಂತು ಕಿರು ಬೆಳಕಿನ ದಾರಿ ಸಿಗುವುದೋ ಎಂದು ನೋಡುವುದು ಓದುಗರ ನಿರೀಕ್ಷೆ. ನನಗೆ ಇಲ್ಲಿನ ಬರವಣಿಗೆ ಒಂದು ರೀತಿ ಸೆಮಿ ಫಿಕ್ಷನ್ನಂತೆ ಕಂಡಿದೆ. ಈ ಓದು ನನ್ನನ್ನು ಮತ್ತಷ್ಟು ಮನುಷ್ಯನನ್ನಾಗಿ ಮಾಡುತ್ತಿದೆಯೋ ಅಥವಾ ನನ್ನೊಳಗೆ ಮನೆ ಮಾಡಿಕೊಂಡಿರುವ ಚಿಂತೆಗಳನ್ನು ಇಮ್ಮಡಿಗೊಳಿಸುತ್ತಿದೆಯೋ ಎಂಬ ಗೊಂದಲವಾಗುತ್ತಿದೆ. ಈ ಬರಹಗಳು ಅಷ್ಟು ಕಾಡುತ್ತವೆ. ಜನಾರ್ದನ ಕೆಸರಗದ್ದೆ, ಲೇಖಕರು, ಪರಿಸರವಾದಿ, ಯುವಜನ ಕಾರ್ಯಕರ್ತರು. ದಾದಾಪೀರ್ ಉರ್ಫ್ ದಾದು ಬರೆದಿರುವ ಈ ಅಪರೂಪದ ಪುಸ್ತಕ ಆತ್ಮಕತೆಯಂತಾ ಜಗದ್ಕತೆಯೂ ಹೌದು ಮತ್ತು ನಿಶ್ಚಲ ಪ್ರವಾಸ ಕಥನವೂ ಹೌದು. ಲೋಕವನ್ನು ಮತ್ತು ಬದುಕನ್ನು ಅರಿಯಲು, ಮತ್ತದರ ವೈವಿಧ್ಯ ಮತ್ತು ವೈರುಧ್ಯಗಳನ್ನು ಕಾಣಲು, ಕೇಳಲು ಲೋಕಸಂಚಾರ ಮತ್ತು ದೀರ್ಘಾಯುಷ್ಯ ಅಗತ್ಯವೇನಲ್ಲ ಎಂದು ಸದ್ದಿಲ್ಲದೆ ಹೇಳುವ ಈ ಪುಸ್ತಕದಲ್ಲಿ, ಸೂಕ್ಷ್ಮ ಜೀವಿ ದಾದುವಿಗೆ ನಿಂತಲ್ಲೇ ಕುಂತಲ್ಲೇ ಲೋಕದರ್ಶನ ಮತ್ತು ಜೀವನದರ್ಶನ ಲಭ್ಯವಾಗಿರುವುದು ಕಾಣುತ್ತೇವೆ. ಇದಕ್ಕೆ ಮುಖ್ಯ ಕಾರಣ ದಾದುವಿಗೆ ಸುತ್ತಲಿನ ಬದುಕು ಮತ್ತು ಜೀವಗಳ ಬಗೆಗಿರುವ ಮುಗ್ಧ ಕುತೂಹಲ, ಬೇಷರತ್ ಗೌರವ ಮತ್ತು ತೀವ್ರವಾದ ಪರಾನುಭೂತಿ. ಅಷ್ಟೇ ಮುಖ್ಯ ಇಲ್ಲಿ ದಾದುವಿನ ಪ್ರಾಮಾಣಿಕತೆ. ಲೋಕವನ್ನು ಎದುರುಗೊಳ್ಳುತ್ತಾ ಹೋಗುವಾಗ ದಾದು ತನ್ನನ್ನೇ ಎದುರುಗೊಳ್ಳುತ್ತಾ ಹೋಗುತ್ತಾನೆ. ತನ್ನೊಳಗಿನ ಗಂಟು-ಕಗ್ಗಂಟುಗಳನ್ನು ಬಿಚ್ಚುತ್ತಾ ಹೋಗುವ ಮತ್ತು ತನ್ನನ್ನೇ ತಾನು ಪರೀಕ್ಷಿಸಿಕೊಳ್ಳುವ ಮತ್ತು ಪರಿಷ್ಕರಿಸಿಕೊಳ್ಳುವ ಅವನ ರೀತಿ ಓದುಗರನ್ನೂ ವಿನೀತಗೊಳಿಸುತ್ತದೆ. ತನ್ನ ಮಿತಿಗಳನ್ನು ಮೀರುವ, ತನ್ನ ಅರಿವಿನ ಕ್ಷಿತಿಜಗಳನ್ನು ವಿಸ್ತರಿಸಿಕೊಳ್ಳುವ ಈ ಪ್ರಯಾಣವು ಒಂದು ಭಿನ್ನ ಬಗೆಯ ಪ್ರವಾಸ ಕಥನವೇ ಹೌದು. ಇಲ್ಲಿ ಲೇಖಕನಾದ ದಾದು ಪ್ರವಾಸ ಹೋಗದೆ ಇದ್ದರೂ, ಅದೆಷ್ಟೋ ಲೋಕಗಳು ಒಂದು ಬಿಂದುವನ್ನು ಹಾದು ಹೋಗುತ್ತವೆ. ದಾದು ಆ ಬಿಂದುವಿನ ಮೇಲೆ ನಿಂತು, ನಿರಂತರ ಸಂಚಾರದಲ್ಲಿರುವ, ಎಲ್ಲಿಂದಲೋ ಬಂದು ಎಲ್ಲಿಗೋ ಹೋಗುತ್ತಿರುವ ಆ ಎಲ್ಲಾ ಲೋಕಗಳನ್ನು ಸಮೀಪದಿಂದ ಕಂಡು, ಅವುಗಳ ಮೂಲಕ ಈ ವಿಸ್ಮಯ ಬದುಕಿನ ಬಗ್ಗೆ ಆಲೋಚಿಸುತ್ತಾ ಅವುಗಳನ್ನೆಲ್ಲ ನಮ್ಮ ಮುಂದೆ ಇಟ್ಟಿದ್ದಾನೆ. ಇದೊಂದು ಅಪರೂಪದ ಪ್ರವಾಸಕಥನ ಎಂದರಷ್ಟೇ ಸಾಲದು. ಇದೊಂದು ಅಪರೂಪದ ಜೀವನಪ್ರೀತಿಯ ಕಥನವೂ ಹೌದು. ಸಂವರ್ತ ಸಾಹಿಲ್, ಕವಿ, ಅಂಕಣಕಾರರು, ಅನುವಾದಕರು.
Dadapeer Jyman |
0 average based on 0 reviews.